ಮುಗಳಖೋಡ ,,( ೨೭)(೧) ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರರ ಭೃಹ್ನ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಮಹಾರಾಜರ ಜಾತ್ರಾಮಹೋತ್ಸದ ನಿಮಿತ್ಯ ಶುಕ್ರವಾರ 27 ರಂದು ಸಾಯಂಕಾಲ 5 ಗಂಟೆಗೆ ಕರ್ನಾಟಕ, ಮಹಾರಾಷ್ಟ್ರ, ಚಂಡಿಗಡ ,
,ಹರಿಯಾಣ ರಾಜ್ಯದ ಅಮೀತಕುಮಾರ ಹಾಗೂ ನೇಪಾಳ ದೇಶದ ದೇವಾತಾಪ ಕುಸ್ತಿ ಹಾಗೂ ಪ್ರಸಿದ್ಧ 37 ಜೋಡಿ ಪೈಲ್ವಾನರಿಂದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಪಿಠಾಧೀಪತಿಗಳಾದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳವರು ಚಾಲನೆ ನೀಡಿದರು.ಶಿವರಾಜ ರಕ್ಷೆ,ನೇರುಕುಮಾರ ಗುಜ್ಜರ , ರಾಘು ಟೋಮರ, ಸತ್ಪಾಲ ಸೋನಟಕ್ಕೆ, ಪ್ರಕಾಶ ಇಂಗಳಿ,ಸಾಹಿ ನಲೋಡಿ,ಶುಭಂ ದುದಾಳೆ,ಪಾರ್ಥ ಬೆಳಗಾವಿ ಇವರು ಜಟ್ಟಿಗಳಲ್ಲಿ ಜಗಜಟ್ಟಿಗಳಾಗಿ ಕುಸ್ತಿ ಅಭಿಮಾನಿಗಳ ಮನಗೆದ್ದರು.
ಹರಿಯಾಣದ ಅಮೀತಕುಮಾರ ಜೊತೆ ನೇಪಾಳದ ದೇವತಾಪಾ ನಡುವೆ ನಡೆದ ತುರುಸಿನ ಕಾಳಗ ಕುಸ್ತಿ ಪ್ರೀಯರಿಗೆ ರೊಮಾಂಚನದ ಜೊತೆ ಕುತೂಹಲ ಮೂಡಿಸುತ್ತಾ ಹಲವು ಪ್ರೇಕ್ಷಕರು ಇಂತಹ ಜೋಡಿ ಕುಸ್ತಿ ಮತ್ತೆ ನಡೆಯುತ್ತಿರಲಿ ಎನ್ನುತ್ತಾ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಜಯಘೋಷಮೋಳಗಿಸಿದರು, ಹಾಗೂ ಪ್ರಮುಖರು ಕುಸ್ತಿ ಅಭಿಮಾನಿಗಳು ಭಾಗವಹಿಸಿ ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡುವ ಮೂಲಕ ಕ್ರೀಡಾಪ್ರೀತಿ ತೋರಿಸಿದರು. ಕಾರಣಿ ಪುರುಷ ಶ್ರೀ ಯಲ್ಲಾಲಿಂಗೇಶ್ವರರು ಮೂಲತಹ ಕುಸ್ತಿ ಪಟು ಅವರು ತಮ್ಮ ಗುರು ಲಚ್ಚಾಣದ ಸಿದ್ದಲಿಂಗ ಮಹಾರಾಜರ ಹೆಸರಿನಲ್ಲಿ ಪ್ರಾರಂಭಿಸಿದ ಜಾತ್ರಾಮಹೋತ್ಸವ ನಾಡಿಗೆ ಹೆಸರು ವಾಸಿಯಾಗಿದ್ದು ಪ್ರತಿ ವರ್ಷ ಈ ರೀತಿಯ ರಾಷ್ಟ್ರ ಮಟ್ಟದ ಸ್ಪರ್ಧೆ ನಡೆಯಲಿ ಎಂದು ಆಯೋಜಕರಾದ ಪುರಸಭೆಯ ಸದಸ್ಯರಾದ ಪರಗೌಡ ಖೇತಗೌಡರ, ಹಾಲಪ್ಪ ಶೇಗುಣಸಿ , ಮುತ್ತಪ್ಪ ಬಾಳೋಜಿ, ಚೇತನ ಯಡವಣ್ಣವರ,ಮಹಾಂತೇಶ ಯರಡೆತ್ತಿ, ರಾಜು ನಾಯಿಕ, ಮಲ್ಲಪ್ಪ ಹುನ್ನಾರ, ಭೀಮಪ್ಪ ತಳವಾರ,ಹಾಗೂ ಸಮಿತಯವರಿಗೆ ಯಾವತ್ತೂ ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಾಯ ಸಹಕಾರ ಇರುವುದಾಗಿ ಕ್ರೀಡಾ ಅಭಿಮಾನಿಗಳು ಸಂತೋಷ ಬರಿತರಾಗಿ ಹೇಳಿದು. ಕುಸ್ತಿ ಅಭಿಮಾನಿಗಳು ಉಪಸ್ಥಿತರಿದ್ದರು. ಮಾರುತಿ ಕಳ್ಳಿಗುದ್ದಿ ಗುರುಗಳು ನಿರೂಪಿಸಿದರು


