ಬಾಗಲಕೋಟೆ, ಜೂನ್.01: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಗರ್ಭಪಾತ ದಂಧೆಗೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಮೃತ ಮಹಿಳೆ ಸೋನಾಲಿ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗಳ ಗರ್ಭಪಾತಕ್ಕೆ ಪ್ರೇರೇಪಣೆ ಆರೋಪದ ಮೇರೆಗೆ ಸೋನಾಲಿ ತಂದೆ ಸಂಜಯ್ ಗೌಳಿ ಮತ್ತು ತಾಯಿ ಸಂಗೀತಾ ಗೌಳಿಯನ್ನು ಮಹಾಲಿಂಗಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇನ್ನು ಗರ್ಭಪಾತ, ಭ್ರೂಣಹತ್ಯೆಗೆ ಕಾರಣಳಾದ ಆರೋಪಿ ಕವಿತಾ ಬಾದನ್ನವರ ಅರೆಸ್ಟ್ ಮಾಡಲಾಗಿದೆ. ಈಕೆ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಈಗ ಗರ್ಭಪಾತ ದಂಧೆ ಮಾಡಿ ಮಹಿಳೆ ಬಲಿ ಪಡೆದು ಜೈಲು ಸೇರಿದ್ದಾಳೆ. ಮಕ್ಕಳ ಹಕ್ಕುಗಳ ರಕ್ಚಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿರುವ ಆರೋಪಿ ಕವಿತಾ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪರಿಶೀಲನೆ ವೇಳೆ, ಕವಿತಾ ಮನೆಯಲ್ಲಿನ ವೈದ್ಯಕೀಯ ಪರಿಕರಗಳು, ಬೆಡ್, ಹ್ಯಾಂಡ್ ಗ್ಲೌಜ್, ಮೆಡಿಷಿನ್ಸ್ ಎಲ್ಲವನ್ನು ಪರಿಶೀಲನೆ ಮಾಡಿದ್ರು. ಈ ವೇಳೆ ಕುಟುಂಬ ಕಲ್ಯಾಣ ಅಧಿಕಾರಿ ಡಿ ಬಿ ಪಟ್ಟಣಶೆಟ್ಟಿ ವಿರುದ್ಧ ಗರಂ ಆದ ಆಯೋಗದ ಸದಸ್ಯ ಶಶಿಧರ ಕೋಸಂಬೆ, ನಿಮ್ಮ ಕರ್ತವ್ಯ ನಿರ್ಲಕ್ಷ್ಯದಿಂದಲೇ ಈ ರೀತಿಯ ದುರ್ಘಟನೆ ಆಗಿದೆ ಎಂದು ಗದರಿದ್ರು.