ಬೆಳಗಾವಿ ಜಿಲ್ಲೆಯಲ್ಲಿ ಎಣ್ಣೆ ಕಾಳು ಇಳುವರಿ ಆತ್ಮ ನಿರ್ಭರತೆ ಸಾಧಿಸಲು ಕರೆ

Ravi Talawar
ಬೆಳಗಾವಿ ಜಿಲ್ಲೆಯಲ್ಲಿ ಎಣ್ಣೆ ಕಾಳು ಇಳುವರಿ ಆತ್ಮ ನಿರ್ಭರತೆ ಸಾಧಿಸಲು ಕರೆ
WhatsApp Group Join Now
Telegram Group Join Now
ಬೆಳಗಾವಿ ಜಿಲ್ಲೆಯಲ್ಲಿ ಎಣ್ಣೆ ಕಾಳು ಬೇಸಾಯಕ್ಕೆ ಪೂರಕ ವಾತಾವರಣ ಇರುವುದರಿಂದ ರೈತರು ಹೆಚ್ಚು ಹೆಚ್ಚು ಖಾದ್ಯ ತೈಲ ಬೆಳೆಗಳ ಬೇಸಾಯಕ್ಕೆ ಆದ್ಯತೆ ನೀಡಲು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ರೈತರಿಗೆ ಕರೆ ನೀಡಿದರು.  ಅವರು ಕೃಷಿ ವಿಜ್ಞಾನ ಕೇಂದ, ಮತ್ತಿಕೊಪ್ಪ ಆವರಣದಲ್ಲಿ ರೈತರಿಗೆ ಏರ್ಪಡಿಸಿದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸನ್ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದ ಎಣ್ಣೆ ಕಾಳು ಬೇಸಾಯ ಕುರಿತ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ೬೦:೪೦ ರ ಅನುದಾನ ಹಂಚಿಕೆ ಅನುಪಾತದಲ್ಲಿ ಅನು?ನಗೊಳಿಸಲಾಗುತ್ತಿದೆ.  ಕೃಷಿ ಹಾಗೂ ರೈತ ಕಲ್ಯಾಣ ಅಭಿವೃದ್ಧಿ ಇಲಾಖೆ, ಭಾರತ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಬೆಳಗಾವಿ, ರಾಷ್ಟ್ರೀಯ ಬೀಜ ನಿಗಮ ನಿಯಮಿತ, ಧಾರವಾಡ ಹಾಗೂ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಸಹಯೋಗದಲ್ಲಿ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು (ಓಒಇಔ-ಔS) ಯೋಜನೆಯಡಿಯಲ್ಲಿ ಎಣ್ಣೆಕಾಳು ಬೆಳೆಗಳ ಸಮಗ್ರ ಬೆಳೆ ನಿರ್ವಹಣೆ ಕುರಿತು ಎಣ್ಣೆ ಕಾಳು ಬೆಳೆಗಾರರಿಗೆ  ೨ ದಿನಗಳ ತರಬೇತಿ ಕಾರ್ಯಕ್ರಮವನ್ನು ಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು,  ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯ ಎಣ್ಣೆ ಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸುವುದರೊಂದಿಗೆ ಆತ್ಮ ನಿರ್ಭರತೆಯನ್ನು ಸಾಧಿಸುವ ಉದ್ದೇಶದಿಂದ ಈ ಯೋಜನೆಯನ್ನು ರಾಜ್ಯದಲ್ಲಿ ಅನು?ನಗೊಳಿಸಲಾಗುತ್ತಿದೆ ಎಂದು ಪ್ರತಿಪಾದಿಸಿದರು.  ಈ ಉದ್ದೇಶದಿಂದ ಎಣ್ಣೆಕಾಳು ಬೆಳೆಗಳಲ್ಲಿ ಇಳುವರಿ ಅಂತರದ ವ್ಯತ್ಯಾಸ ಹಾಗೂ ಸುಸ್ಥಿರ ಬೆಳವಣಿಗೆ ಯೋಜನೆ ರೂಪಿಸಲಾಗುತ್ತದೆ. ರೈತರು  ಎಣ್ಣೆ ಕಾಳು ಬೆಳೆಗಳಲ್ಲಿ ಈ ಎರಡಯ ದಿನದ ತರಬೇತಿ ಶಿಬಿರದಲ್ಲಿ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು, ಸಹಕಾರಿ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳಡಿ ಬೆಳೆಗಳ ಗುಚ್ಛ ಪ್ರಾತ್ಯಕ್ಷಿಕೆಗಳಲ್ಲಿ ಸುಧಾರಿತ ತಾಂತ್ರಿಕತೆಗಳನ್ನು ಅಳವಡಿಸುವುದರ ಮಾಹಿತಿ ನೀಡಲಾಗುವುದೆಂದು ತಿಳಿಸಿದರು ಹಾಗೂ ಸೋಯಾಬಿನ್ ಬೆಳೆಯಲ್ಲಿ ಕೀಟ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಪ್ರಗತಿಪರ ರೈತರಾದ ಕಲ್ಲಪ್ಪ ಯಲ್ಲಡಗಿ ತಮ್ಮ ಅನುಭವ ಹಂಚಿಕೊಂಡರು.
ಡಾ. ಪಿ. ಎಸ್. ಹೂಗಾರ ಇವರು ರೈತರೊಂದಿಗೆ ಕೀಟ ನಿರ್ವಹಣೆ ಕುರಿತು ಸಂವಾದಿಸಿದರು. ಬೇಸಾಯ ಶಾಸ್ತ್ರಜ್ಞರಾದ ಶ್ರೀ ಜಿ. ಬಿ. ವಿಶ್ವನಾಥ ಅವರು ಎಣ್ಣೆ ಕಾಳು ಬೆಳೆಗಳ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿದರು. ಮಣ್ಣು ವಿಜ್ಞಾನಿ ಎಸ್. ಎಮ್. ವಾರದ ಮಣ್ಣು ಪರೀಕ್ಷೆ ಮಹತ್ವ ಕುರಿತು ವಿವರಿಸಿದರು.   ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ, ಶ್ರೀ ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ ಹಾಗೂ ರೈತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article