ಬಳ್ಳಾರಿ ಜು 26, ನಗರದ 26 ನೇ ವಾರ್ಡಿನ ಕೌಲ್ ಬಜಾರ್ ಪ್ರದೇಶದ ಟೈಲರ್ ಸ್ಟ್ರೀಟ್ ನಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ 20 ಲಕ್ಷ ರೂಪಾಯಿ ಗಳ ಎಚ್ ಡಿ ಕುಡಿಯುವ ನೀರಿನ ಪೈಪ್ ನ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಹಾಗೂ ಉಪಮಹಪೌರರಾದ ಡಿ ಸುಕುಂ ಅವರು ಭೂಮಿ ಪೂಜೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಡಿ ಅಯಾಜ್ ಅಹ್ಮದ್ ಅಲ್ಲಾಭಕಾಶ್ ನಾಗಲ ಕೆರೆ ಗೋವಿಂದ ಸೋಮು ಪಾಲಿಕೆ ಸದಸ್ಯ ಡಿ ರಿಯಾಜ್ ಅಹ್ಮದ್ ಸಮೀರ್ ಹುಸೇನ್ ಸಾಬ್ ಅನ್ವರ್ ಜಹೀರ್ ಆಸಿಫ್ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.