ಸುಗಮ ಸಂಚಾರಕ್ಕೆ ರಸ್ತೆಗಳ ಸುಧಾರಣೆ-ರಮೇಶ ಕತ್ತಿ

Pratibha Boi
ಸುಗಮ ಸಂಚಾರಕ್ಕೆ ರಸ್ತೆಗಳ ಸುಧಾರಣೆ-ರಮೇಶ ಕತ್ತಿ
WhatsApp Group Join Now
Telegram Group Join Now

ಹುಕ್ಕೇರಿ : ಕ್ಷೇತ್ರದಲ್ಲಿ ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ನಡುವಿನ ಸಂಪರ್ಕ ಸಾಧಿಸುವ ಪ್ರಮುಖ ಮಾರ್ಗಗಳನ್ನು ಸುಧಾರಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಉಳಿತಾಯ ಹಣ(ಪಿಎಂಜಿಎಸ್‌ವೈ)ದಲ್ಲಿ 43 ಲಕ್ಷ ರೂ ವೆಚ್ಚದಲ್ಲಿ ಕೈಗೆತ್ತಿಕೊಂಡ ತಾಲೂಕಿನ ಹಟ್ಟಿ ಆಲೂರದಿಂದ ಪಾಶ್ಚಾಪುರ ರಸ್ತೆವರೆಗಿನ (ರೈಲ್ವೆ ಸ್ಟೇಷನ್)೪೩ ಲಕ್ಷರೂ ರಸ್ತೆಯ ಮರು ಡಾಂಬರೀಕರಣ ಹಾಗೂ ಬೆಲ್ಲದ ಬಾಗೇವಾಡಿ ವಿಎಸ್‌ಎಲ್ ಕಾರ್ಖಾನೆಯಿಂದ ಸಾರಾಪುರ ಕ್ರಾಸ್ ೪೦ ಲಕ್ಷರೂ ಮರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಾಹನಗಳು ಸುಗಮವಾಗಿ ಸಾಗಲು ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಈ ದಿಸೆಯಲ್ಲಿ ಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಧಾರಿಸಲು ಕ್ರಮ ವಹಿಸಲಾಗಿದೆ ಎಂದರು.

ಹುಕ್ಕೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ. ಜನರಿಗೆ ನೀರಾವರಿ, ಕೃಷಿ, ಶೈಕ್ಷಣಿಕ, ಔದ್ಯೋಗಿಕ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಪಣ ತೊಡಲಾಗಿದೆ ಎಂದು ಅವರು ಹೇಳಿದರು.

ಜಿಪಂ ಎಂಜನೀಯರಿಂಗ್ ಉಪವಿಭಾಗದ ಸಹಾಯಕ ಅಭಿಯಂತರ ತಬಸ್ಸುಮ್ ನಾಯಿಕವಾಡಿ, ಪಿಎಂಜಿಎಸ್‌ವೈ ಕಿರಿಯ ಅಭಿಯಂತರ ಶಿವರಾಯಿ, ಗುತ್ತಿಗೆದಾರ ಮಲ್ಲಪ್ಪಾ ಬಿಸಿರೊಟ್ಟಿ, ಮುಖಂಡರಾದ ಗಂಗಾಧರ ನಾವಿ, ಬಾಹುಬಲಿ ಮುನ್ನೋಳಿ, ಈರಣ್ಣಾ ಪಾಟೀಲ, ವಿಠ್ಠಲ ಬಾಳೋಗೋಳ, ಮಹಾಂತೇಶ ಪಂಚನ್ನವರ, ಶಿವಪುತ್ರ ಮಹಾಶೆಟ್ಟಿ, ಶಾಂತಾರಾಮ ಬಾಗೇವಾಡಿ, ಬಸವಣ್ಣಿ ನಾಯಿಕ, ಅಡಿವೆಪ್ಪಾ ಹಿರೇಗೋಳಿ, ಮಹಾನಿಂಗ ಮರೆನ್ನವರ, ಬಾಳಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article