ಕರ್ನಾಟಕ ಸರ್ಕಾರ  ಮಹಿಳಾ ವೈದ್ಯರ ಸುರಕ್ಷತೆಗೆ ಮಹತ್ವದ ನಿರ್ಧಾರ!

Ravi Talawar
ಕರ್ನಾಟಕ ಸರ್ಕಾರ  ಮಹಿಳಾ ವೈದ್ಯರ ಸುರಕ್ಷತೆಗೆ ಮಹತ್ವದ ನಿರ್ಧಾರ!
WhatsApp Group Join Now
Telegram Group Join Now

ಬೆಂಗಳೂರು, ಆಗಸ್ಟ್​ 26: ಕೋಲ್ಕತ್ತಾದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದೆ‌‌. ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ಮಹಿಳಾ ವೈದ್ಯರು ಎಷ್ಟು ಸುರಕ್ಷಿತವಾಗಿರುತ್ತಾರೆ ಎಂಬ ಪ್ರಶ್ನೆ ಮೂಡಿಸಿದೆ. ಅತ್ಯಾಚಾರ, ಬರ್ಬರವಾಗಿ‌ ಕೊಲೆಗೀಡಾದ ವೈದ್ಯೆಗೆ ನ್ಯಾಯ ನೀಡುವಂತೆ ದೇಶಾದ್ಯಂತ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಇತ್ತ ಕರ್ನಾಟಕ ಸರ್ಕಾರ  ಮಹಿಳಾ ವೈದ್ಯರ ಸುರಕ್ಷತೆಗೆ ಮಹತ್ವದ ಸಭೆ ನಡೆಸಿ, ಹಲವು ನಿರ್ಧಾರಗಳನ್ನು ಕೈಗೊಂಡಿದೆ.

ಕಳೆದ ವಾರದಲ್ಲಿ ಸಭೆ ನಡೆಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಭದ್ರತೆ‌ ಕುರಿತು ಐದು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ರೋಗಿ ಅಥವಾ ರೋಗಿಯ ಸಂಬಂಧಿ ರಾತ್ರಿ ಪಾಳೆಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ವೈದ್ಯರನ್ನು ಇನ್ಮುಂದೆ ನೇರವಾಗಿ ಭೇಟಿ ಮಾಡುವಂತಿಲ್ಲ. ಮೊದಲಿಗೆ ವಾರ್ಡ್ ಬಾಯ್​ ಅನ್ನು ಭೇಟಿ‌ ಮಾಡಿ, ಅವರ ಜೊತೆ ವೈದ್ಯರನ್ನು ಕಾಣಬೇಕು.

ಸೆಕ್ಯುರಿಟಿ ಏಜೆನ್ಸಿಗಳ ಬಾಕ್ ರೌಂಡ್ ಚೆಕ್ ಮಾಡಿ, ಪೊಲೀಸ್ ವೆರಿಫಿಕೇಷನ್ ಮಾಡಲು ನಿರ್ಧರಿಸಲಾಗಿದೆ. ಆಸ್ಪತ್ರೆಯ ಕತ್ತಲ ಕೊಠಡಿಗೆ ಬೀಗ ಜಡಿಯಲು ನಿರ್ಧರಿಸಲಾಗಿದೆ. ಆಸ್ಪತ್ರೆಯಲ್ಲಿರುವ ಔಟ್ ಪೋಸ್ಟ್ ಪೊಲೀಸರಿಗೆ ನೈಟ್ ರೌಂಡ್ಸ್ ಹಾಕಲು ಸೂಚಿಸಲಾಗಿದೆ.

 

WhatsApp Group Join Now
Telegram Group Join Now
Share This Article