ಬಳ್ಳಾರಿ, ಜ.21: ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಇಂದು ಬಳ್ಳಾರಿ ವಲಯದ ಐಜಿಪಿ ಡಾ.ಹರ್ಷ ಅವರು ಸಭೆ ನಡೆಸಿ. ಅವರ ಕಲ್ಯಾಣಕ್ಕಾಗಿ ಕ್ರಿಯಾ ಯೋಜನೆಗಾಗಿ ಸಲಹೆಗಳನ್ನು ನೀಡುವಂತೆ ಕೋರಿದ್ದಾರೆ.
ಸೇವೆ ಸಲ್ಲಿಸಿ ನಿವೃತ್ತರಾದ ಅನೇಕ ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲಾಖೆಯಿಂದ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯಲು ಆಗದೆ ಸಮಸ್ಯೆಯಲ್ಲಿರುತ್ತಾರೆ. ಅಂತವರಿಗೆ ಸೂಕ್ತ ನೆರವು ಕಲ್ಪಿಸುವ ಕುರಿತು ಹರ್ಷ ಅವರು ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.


