ಮೂಡಲಗಿ ಪೊಲೀಸ್ ಠಾಣೆಗೆ ಐಜಿಪಿ ಡಾ.ಚೇತನ ಸಿಂಗ್ ರಾಥೋರ್ ಭೇಟಿ

Chandrashekar Pattar
ಮೂಡಲಗಿ ಪೊಲೀಸ್ ಠಾಣೆಗೆ ಐಜಿಪಿ ಡಾ.ಚೇತನ ಸಿಂಗ್ ರಾಥೋರ್ ಭೇಟಿ
Oplus_16777218
WhatsApp Group Join Now
Telegram Group Join Now

ಮೂಡಲಗಿ : ಉತ್ತರ ವಲಯದ ಐಜಿಪಿ ಡಾ.ಚೇತನ ಸಿಂಗ್ ರಾಥೋರ್ ಸೋಮವಾರದಂದು ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಠಾಣಾ ಆವರಣದಲ್ಲಿ ನಿಸರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಟ್ಟು ನೀರುಣಿಸಿದರು.

ಈ ಸಂದರ್ಭದಲ್ಲಿ ನಿಸರ್ಗ ಫೌಂಡೇಶನ್ ಅಧ್ಯಕ್ಷ ಈರಪ್ಪ ಢವಳೇಶ್ವರ ಮಾತನಾಡಿ, ಹೆಚ್ಚು ಮರ ಗಿಡಗಳನ್ನು ಬೆಳೆಸುವುದರಿಂದ ವಾತಾವರಣದಲ್ಲಿ ಶುದ್ಧ ಗಾಳಿಯ ಪ್ರಮಾಣ ಹೆಚ್ಚುವುದರೊಂದಿಗೆ ಮಳೆ ಬೆಳೆಗಳು ಸಮೃದ್ಧವಾಗಲು ಕಾರಣವಾಗುತ್ತದೆ. ಈ ಪ್ರಸಕ್ತ ಉದ್ಯಾನವನದೊಂದಿಗೆ ಹಲವು ವರ್ಷಗಳಿಂದ ಫೌಂಡೇಷನ್ ವತಿಯಿಂದ ಪೊಲೀಸ್ ಠಾಣಾ ಆವರಣದಲ್ಲಿ ನೂರಾರು ವಿಭಿನ್ನ ಬಗೆಯ ಸಸಿಗಳನ್ನು ನೆಡಲಾಗಿದ್ದು ಈಗ ಅವು ಬೆಳೆದು ಹೆಮ್ಮರಗಳಾಗಿವೆ ಎಂದು ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಹೆಮ್ಮೆಯಿಂದ ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಶೃತಿ ಎನ್ ಎಸ್, ಗೋಕಾಕ ಡಿವೈಎಸ್ಪಿ ರವಿ ನಾಯಕ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್ಐ ರಾಜು ಪೂಜೇರಿ, ಬಿ ಎಚ್ ಕುಂಬಾರ, ಆನಂದ ಬಿ ಹಾಗೂ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಹಣಮಂತ ಗುಡ್ಲಮನಿ, ಫೌಂಡೇಶನ್ ಉಪಾಧ್ಯಕ್ಷ ಮಲ್ಲು ಬೋಳನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article