ನೊಂದ ವ್ಯಕ್ತಿಗಳಿಗೆ ಅಲ್ಪ ಸಹಾಯ ಮಾಡಿದರೆ ಜೀವನ ಸಾರ್ಥಕ: ಪಂಚಾಕ್ಷರಿ ಶ್ರೀ

Ravi Talawar
ನೊಂದ ವ್ಯಕ್ತಿಗಳಿಗೆ ಅಲ್ಪ ಸಹಾಯ ಮಾಡಿದರೆ ಜೀವನ ಸಾರ್ಥಕ: ಪಂಚಾಕ್ಷರಿ ಶ್ರೀ
WhatsApp Group Join Now
Telegram Group Join Now
ಬೈಲಹೊಂಗಲ: ಸಕಲ ಸೌಕರ್ಯಗಳನ್ನು ಭಗವಂತ ಕಲ್ಪಿಸಿದಾಗ  ಅದರಲ್ಲಿ ಅಲ್ಪವಾದರು ಸಮಾಜದಲ್ಲಿರುವ ನೊಂದ ವ್ಯಕ್ತಿಗಳ ಕಷ್ಟ ಕಾರ್ಪಣ್ಯಗಳಿಗೆ ಬಳಕೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಯಕ್ಕುಂಡಿ ವಿರಕ್ತಮಠದ ಪಂಚಾಕ್ಷರಿ ಮಹಾಸ್ವಾಮಿಗಳು ಹೇಳಿದರು.
 ಸಮೀಪದ ಯಕ್ಕುಂಡಿ ಗ್ರಾಮದಲ್ಲಿಮಂಗಳವಾರ ವಿರಕ್ತಮಠದಲ್ಲಿರುವ ಅನಾಥ ಮಕ್ಕಳ ಜೊತೆ ಹಮ್ಮಿಕೊಂಡಿದ್ದ ನ್ಯಾಯವಾದಿ ಎಫ್. ಎಸ್. ಸಿದ್ದನಗೌಡರ ಜನ್ಮದಿನಾಚರಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ಅನಾಥ ಮಕ್ಕಳಿಗೆ ನೊಟ್ ಪುಸ್ತಕ, ಬಟ್ಟೆ, ಸಿಹಿತಿನಿಸು, ಕಾಣಿಕೆ  ವಿತರಿಸುವ ಮೂಲಕ ಸಮಾಜಕ್ಕೆ ಅವರ ಹುಟ್ಟುಹಬ್ಬ ಮಾದರಿಯಾಗಿದೆ ಎಂದರು.
 ಭಾರತದ ಸನಾತನ ಸಂಸ್ಕೃತಿ ಬಹಳಷ್ಟು ಹಿರಿಮೆ ಗರಿಮೆಗಳಿಂದ  ಬಂದಿದೆ ಆದರೆ ಇತ್ತಿಚ್ಛಿನ ದಿನಗಳಲ್ಲಿ ಯುವಸಮುದಾಯ ತಮ್ಮ ಜನ್ಮದಿನಾಚರಣೆಯನ್ನು  ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗಿ ಮೋಜು ಮಸ್ತಿ ಮಾಡುತ್ತಿರುವುದು ದುರಾದೃಷ್ಟಕರ, ಪಾಶ್ಚಿಮಾತ್ಯರೆ ಭಾರತದ ಸಂಸ್ಕೃತಿಗೆ ಒಳಗಾಗುತಿದ್ದಾಗ ಭಾರತೀಯರಾದ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡಬೇಕು.  ನ್ಯಾಯವಾದಿಗಳಾಗಿ ಸಮಾಜದ ಜನರ ಕಷ್ಟಗಳಗಿ ಸ್ಫಂದಿಸುವ ರಾಜಕೀಯ ಯುವನಾಯಕರಾಗಿ  ಪ್ರತಿವರ್ಷ ತಮ್ಮ ಜನ್ಮದಿನಾಚರಣೆಯನ್ನು ಅತ್ಯಂತ ಸರಳವಾಗಿ ಅನಾಥ ಮಕ್ಕಳ ಜೊತೆ ಆಚರಿಸುತ್ತಿರುವ ಸಿದ್ದನಗೌಡರ ಕಾರ್ಯ ಶ್ಲಾಘನೀಯ  ಎಂದರು.
ಪೂಜ್ಯರಿಂದ ಸತ್ಕಾರ ಸ್ವೀಕರಿಸಿ ಎಫ್ ಎಫ್ ಸಿದ್ದನಗೌಡ ಮಾತನಾಡಿ, ಈ ಭಾಗದಲ್ಲಿ ಹಿಂದೂ-ಮುಸ್ಲಿಂ ಜನಾಂಗದ ಜನತೆಯನ್ನು ಒಗ್ಗೂಡಿಸಿ ಜಾತಿ-ಮತ ಪಂತ ಎನ್ನದೆ ಸಾಮರಸ್ಯದ ಜೀವನದ ಜೊತೆಗೆ ಸಮಾಜದಲ್ಲಿ ತಂದೆ ತಾಯಿ ಪಾಲಕರಿಲ್ಲದ ಅನೇಕ ಮಕ್ಕಳಿಗೆ ಆಶ್ರಯವನ್ನು ನೀಡಿ ವಿದ್ಯಾದಾನ ಮಾಡುತ್ತಿರುವ ಯಕ್ಕುಂಡಿ ವಿರಕ್ತಮಠದ ಪೂಜ್ಯರ ಕಾರ್ಯ ನಾಡಿಗೆ ಮಾರ್ಗದರ್ಶನವಾಗಿದೆ. ಇಂತಹ ಪುಣ್ಯ ಸ್ಥಳದಲ್ಲಿ ಜನ್ಮದಿನಾಚರಣೆ ಆಚರಿಸಿಕೊಂಡು ಇಲ್ಲಿಯ ಮಕ್ಕಳಲ್ಲಿ ಅನಾಥಪ್ರಜ್ಞೆ ಕಾಡದೆ ನಮ್ಮ ಜೊತೆ ಇಡೀ ಸಮಾಜವೇ ಇದೆ ಎಂಬುವುದನ್ನು ಅವರಿಗೆ ಮನೋದೈರ್ಯ ನೀಡುವ ಉದ್ದೇಶದಿಂದ ಪ್ರತಿವರ್ಷ ಶ್ರೀಮಠದಲ್ಲಿ ಜನ್ಮದಿನಾಚರಣೆ ಆಚರಿಸತ್ತಾ ಬಂದಿದ್ದೆನೆ. ಇಂತಹ ಅವಕಾಶ ಮಾಡಿಕೊಡುತ್ತಿರುವ ಪೂಜ್ಯರ ಹಾಗೂ ಶಾಲಾ ಶಿಕ್ಷಕರ ಕಾರ್ಯ ಅವಿಸ್ಮರಣೀಯ ಎಂದರು.
ಅನಾಥ  ಮಕ್ಕಳಿಂದ ದೀಪ ಬೆಳಗಿಸಿ ಕೇಕ್ ಕತ್ತರಿಸಿ ಉಪಹಾರ ಸೇವಿಸಿದರು.ಶಿಕ್ಷಕ ಆರ್.ಎಸ್.ಅಂಗಡಿ ಪ್ರಸ್ತಾವಿಕವಾಗಿ ಮಾತನಾಡಿ ಎಫ್.ಎಸ್.ಸಿದ್ದನಗೌಡರ ಹಲವಾರು ವರ್ಷಗಳಿಂದ ಅನಾಥ ಮಕ್ಕಳ ಜೋತೆ ಜನ್ಮದಿನಾಚರಣೆ, ಬಟ್ಟೆ, ಪುಸ್ತಕ ನೀಡುವದು ಹಾಗೂ ಸಮಾಜಮುಖಿಯಾಗಿ ಮಾಡುತ್ತಿರುವ ಅವರ ಕಾರ್ಯದಿಂದ ಇಂದು ಅತ್ಯಂತ ಉನ್ನತ ಸ್ಥಾನದಲ್ಲಿದ್ದು ನಮ್ಮ ಭಾಗದಲ್ಲಿ ಜನನಾಯಕಾರಾಗಿ ಹೊರ ಹೊಮ್ಮುತಿದ್ದಾರೆ ಎಂದರು.
ವೇದಿಕೆಯ ಮೇಲೆ ಅಯ್.ಎಸ್. ಚಿಕ್ಕನಗೌಡರ, ಎಸ್.ಬಕಾರ್ಯಕ್ರಮದಲ್ಲಿ ಅನಾಥ ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು  ಎಮ್.ಡಿ.ಪರಸಪ್ಪನವರ ಇದ್ದರು.ಕಾರ್ಯಕ್ರಮ ಎಮ್.ಎಸ್ ಹೀರೆಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಿ.ಡಿ.ಮಾಳಗಿ ವಂದಿಸಿದರು.
WhatsApp Group Join Now
Telegram Group Join Now
Share This Article