ಮುಗಳಖೋಡ: ಮನುಷ್ಯ ಸುಖಿ ಜೀವನ ಕಳೆಯಲು ಏನೇನೋ ಆಸೆ ಹೊತ್ತಿರುತ್ತಾನೆ ,ಆ ಆಸೆ ಪೂರೈಸಿಕೊಳ್ಳಬೇಕದರೆ ಮೊದಲು ತನ್ನ ಕರ್ತವ್ಯದಲ್ಲಿ ಹಾಗೂ ಗುರುವಿನಲ್ಲಿ ಅಪಾರವಾದ ನಂಬಿಕೆ ಇಟ್ಟು ನಡೆದರೆ ಆತನ ಜೀವನ ಪಾವನವಾಗಿ ಸರ್ವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ ಎಂದು ಅಚಲೇರಿ ಜಿಡಗಾ ಮಠದ ಪೀಠಾಧಿಪತಿ ಬಸವರಾಜೇಂದ್ರ ಶ್ರೀಗಳು ಹೇಳಿದರು.
ಅವರು ಶ್ರಾವಣ ಮಾಸದ ಶುಭ ಗಳಿಗೆಯಲ್ಲಿ ಪಟ್ಟಣದಲ್ಲಿ ಭಕ್ತರ ಮನೆ ಮನೆಗಳಿಗೆ ಪಾದ ಪೂಜಾ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ರಮೇಶ ಯಡವಣ್ಣವರ ದಂಪತಿಗಳಿಂದ ತುಲಾಭಾರ ಪಾದ ಪೂಜಾ ನೇರವೆರಿಸಿಕೊಂಡು , ಮನುಷ್ಯ ಸಂಘ ಜೀವಿ ಎಲ್ಲರ ಪ್ರೀತಿಗೆ ಪಾತ್ರನಾಗಲು ನಂಬಿಕೆ ಮುಖ್ಯ ಅದರಲ್ಲೂ ಗುರು ಕರುಣೆ ಬೇಕು ಅದನ್ನು ಪಡೆಯಲು ಸತ್ಸಂಗದಲ್ಲಿ ಭಾಗಿಯಾದ ನೀವೆಲ್ಲರೂ ಧನ್ಯರು ಎಂದು ಆಶಿರ್ವಚನ ನೀಡಿದರು, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ,ಭೀಮಪ್ಪ ಯಡವಣ್ಣವರ.ಮಾಜಿ ಪುರಸಭೆ ಸದಸ್ಯ ಗೌಡಪ್ಪ ಖೆತಗೌಡರ, ಅಚ್ಚಪ್ಪ ಬೆಳಗಲಿ, ಪರಗೌಡ ಖೆತಗೌಡರ,ಅಶೋಕ ಕೊಪ್ಪದ, ಹನಮಾಸಾಹೇಬ ನಾಯಿಕ,ಗಂಗಪ್ಪ ಗೋಕಾಕ,ಪರಪ್ಪ ಖೆತಗೌಡರ, ರಾವ್ ಸಾಹೇಬ್ ಗೌಲೆತ್ತಿನವರ , ಪ್ರಕಾಶ ಆದಪ್ಪಗೋಳ, ಅಶೋಕ ಕದಮ್ಮ, ಇತರರು ಇದ್ದರು.