ಇಂಡಿ: ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದಲ್ಲಿ ಬರುವ ತಳವಾರ, ವಾಲ್ಮಿಕಿ, ಬೇಡ, ಬೇಡರ ಹಾಗೂ ಹರಣಶಿಕಾರಿ ಸಮುದಾಯದ ಸುಮಾರು ೧.೬೦ ಲಕ್ಷ ಜನ ಸಂಖ್ಯೇ ಹೊಂದಿದೆ. ಆದರೆ ಸ್ವಾತಂತ್ರ್ಯ ದೊರಕಿ ೭೫ ವರ್ಷ ಗತಿಸಿದರು ಶೈಕ್ಷಣಿಕವಾಗಿ ವಂಚಿತರಾಗಿ ಇನ್ನೂವರೆಗೆ ಯಾವುದೆ ರೀತಿ ಬೆಳವಣಿಗೆ ಕಂಡಿಲ್ಲ. ಆದ್ದರಿಂದ ನಮ್ಮ ಸಮುದಾಯಗಳು ಪ್ರಗತಿ ಹೊಂದಿ ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕ ರಂಗದಲ್ಲಿ ಪ್ರತಗತಿ ಹೊಂದಿದಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕೇಂದ್ರಿಯ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡಿ ಮಕ್ಕಳ ಶ್ಯಕ್ಷಣಿಕ ಬೆಳವಣಿಗೆ ಅನುಕೂಲ ಕಲ್ಪಿಸಬೇಕು ಎಂದು
ತಳವಾರ ಸಮಾಜದ ಮುಖಂಡರಾದ ಅನೀಲ ಜಮಾದಾರ, ರವಿ ವಗ್ಗೆ, ಅಣ್ಣಪ್ಪ ತಳವಾರ, ವಿವೇಕ ಡಬ್ಬಿ ಇತರರು ಮುಖಂಡರು ಸಂಸದ ರಮೇಶ ಜಿಗಜೀಣಗಿ ಅವರಿಗೆ ವಿಜಯಪುರದ ತೊಟದ ಸ್ವಗ್ರಹದಲ್ಲಿ ಮನವಿ ಪತ್ರ ಸಲ್ಲಿಸಿ ವಿನಂತಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಭರತ ಕೊಳಿ, ಅಂಬಣ್ಣಾ ಗೊಟ್ಯಾಳ, ಸಂಜೀವ ಕೋಳಿ. ನ್ಯಾಯವಾದಿ ರಮೇಶ ಕೋಳಿ, ಸುರೇಶ ಜುಮನಾಳ, ರಾಜು ಕೊಳಿ, ರಮೇಶ ಗುಡ್ಡೇವಾಡಿ, ಸಂತೋಷ ಕೋಳಿ, ಮಂಜುನಾಥ ಜಮಾದಾರ, ರವಿ ರಾಯಜಿ, ಸಂತೋಷ ವಾಲಿಕಾರ, ವಿನಾಯಕ ವಾಲಿಕಾರ, ಶಾಂತು ವಾಲಿಕಾರ, ಸೂರೇಶ ಕೂಲಕಾರ, ರಾಜು ಕೋಳಿ, ಮಲ್ಲಿಕಾರ್ಜುನ ತಳವಾರ ಸೇರಿದಂತೆ ಅನೇಕರಿದ್ದರು.
“ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕ ರಂಗದಲ್ಲಿ ಪ್ರತಗತಿ ಹೊಂದಿದಾಗ ಮಾತ್ರ ಸಾಧ್ಯ”


