ಉಳ್ಳಾಗಡ್ಡಿ-ಖಾನಾಪೂರ:-ಯಮಕನಮರಡಿ:-ಮನುಷ್ಯ ಮನೆಯಲ್ಲಿ ಒಗ್ಗಟ್ಟಿನಿಂದ ಇದ್ದಾಗ ಪ್ರೀತಿ ಭಕ್ತಿ ನೆಲೆಸಲು ಸಾಧ್ಯ ಭಕ್ತಿ-ಪ್ರೀತಿ ಮನೆಯಲ್ಲಿ ನೆಲೆಸಿದಾಗ ಮಾತ್ರ ಸರ್ವಸ್ವ ಸಿದ್ದಿ ಪ್ರಾಪ್ತಿಯಾಗಲು ಸಾಧ್ಯ ಆ ದಿಸೆಯಲ್ಲಿ ಮನುಷ್ಯನಿಂದು ಅಧಿಕಾರ ಲಾಲಸೆ, ದುರಾಸೆ, ದ್ವೇಷ, ಅಸೂಹೆಗಳಿಂದ ಬದುಕು ನಡೆಸುವುದನ್ನು ಬಿಟ್ಟು ಮನುಷ್ಯ ಪಾವನದ ದಾರಿಯಲ್ಲಿ ನಡೆಯಲು ಪ್ರೀತಿ-ಭಕ್ತಗಳು ಅಗತ್ಯವಾಗಿವೆ ಎಂದು ಗದಗದ ಸೋಮನಕಟ್ಟಿಯ ಪ್ರವಚನ ರತ್ನ ಶ್ರೀಸಿದ್ದಲಿಂಗಯ್ಯಾ ಶಾಸ್ತ್ರಿಗಳು ಹೇಳಿದರು.
ಅವರು ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಶ್ರೀಮಾಟ ಬಸವಣ್ಣ ದೇವರ ಜಾತ್ರಾ ಮಹೋತ್ಸವದಂಗವಾಗಿ ಬುಧವಾರ ದಿ, ೩೦ ರಂದು ಹಮ್ಮಿಕೊಂಡ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ಪ್ರಸ್ತುತ ಪಡಿಸುತ್ತಾ “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇದೆಯೇ ನಮ್ಮೊಳಗೆ ಒಳಗಿನ ತಿಳಿಯನು ಕಲುಕದೆ ಇದ್ದರೆ ಅಮೃತದದ ಸವಿಯಿದೆ ನಾಲಿಗೆಗೆ ಎಂದು ವರ್ಣಿಸಿದ ಸಾಹಿತಿ ಜಿ.ಎಸ್.ಶಿವರುದ್ರಪ್ಪನವರ ಸಾಲುಗಳಲ್ಲೆ ನಾವು ಬದುಕುವ ಕಲೆ ಅಡಕವಾಗಿದೆ, ಎಂದ ಅವರು ಪ್ರೀತಿ-ಭಕ್ತಿಯಿಂದ ಬದುಕುವುದನ್ನು ಕರಗತಮಾಡಿಕೊಳ್ಳಬೇಕಾದ ಅನಿವಾರ್ಯತೆ ಮಾನವ ಸಂಕುಲಕ್ಕಿದೆ ಸಂತ ಶಶಿನಾಳ ಶರೀಫ ರು ಹೇಳುವಂತೆ ತೀರ್ಥಕ್ಷೇತ್ರಗಳನ್ನು ತಿರುಗಿ ದೇವರ ದರ್ಶನ ಪಡೆಯುವುದಕ್ಕಿಂತ ಬದುಕನ್ನು ಕಟ್ಟಿಕೊಟ್ಟ ತಂದೆ-ತಾಯಿಗಳ ಪಾದದಲ್ಲೆ ಸರ್ವಶ್ರೇಷ್ಠ ಶಕ್ತಿ ಪ್ರಾಪ್ತಿ ಸಾಧ್ಯವಿದೆ ಎಂದರು ಸಮಾಜದಲ್ಲಿ ಭಕ್ತಿ-ಭಾವೈಕ್ಯತೆಗಳು ನೆಲೆಸಲು ಗುರುವಿನ ಶಕ್ತಿ ಅಂದರೆ ಶ್ರೀಮರುಳಸಿದ್ದೇಶ್ವರ ಬ್ರಹನ್ಮಠದ ಶ್ರೀಸಿದ್ದೇಶ್ವರ ಶಿವಾಚಾರ್ಯರ ಕೃಪಾಕಟಾಕ್ಷ ಬೇಕು ಅದನ್ನು ಪಡೆಯುತ್ತಿರುವ ತಾವೆಲ್ಲರು ಧನ್ಯರು ದೇಶದಲ್ಲಿ ರೈತರ ಶ್ರಮ ಹಾಗೂ ಸಾರ್ಥಕತೆಗಳಿಲ್ಲದೆ ಯಾರೊಬ್ಬರು ಬದುಕಲು ಸಾಧ್ಯವಿಲ್ಲಾ ಆ ನಿಟ್ಟಿನಲ್ಲಿ ಅನ್ನದಾತರೇ ಸರ್ವಸ್ವ ಎಂದರು.
ದಿವ್ಯ ಸಾನಿಧ್ಯವನ್ನು ಬ್ರಹನ್ಮಠದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು, ವೇದಿಕೆಯಲ್ಲಿ ಕಿತ್ತೂರಿನ ಓಂ ಗುರೂಜಿ ಓಂ ಸುಕುಮಾರ ಯೋಗಾಶ್ರಮದ ಶ್ರೀಮಲ್ಲಿಕಾಜುನ ದೇವರು ಆಶಿರ್ವಚನ ನೀಡಿದರು, ಸಂಗೀತ ಗಾಯನವನ್ನು ಸಿಂದಗಿಯ ಯಶವಂತ ಬಡಿಗೇರ ಹಾಗೂ ಗದಗದ ವೀರಭದ್ರ ಬೇನಕಲ್ ಪ್ರಸ್ತುತಪಡಿಸಿದರು, ಪ್ರವಚನಕ್ಕೆ ಗ್ರಾಮದ ಭಕ್ತಾಧಿಗಳು ಮಾಟಬಸವಣ್ಣ ದೇವರ ಕಮೀಟಿಯವರು ಉಪಸ್ಥಿತರಿದ್ದರು.