ತಳಮಟ್ಟದಲ್ಲಿ ಸಂಘಟನೆ ಬಲಪಡಿಸಿದರೆ ಚುನಾವಣೆಯಲ್ಲಿ ಯಶಸ್ಸು ಸಾಧ್ಯ : ಮೀನಹಳ್ಳಿ ತಾಯಣ್ಣ

Hasiru Kranti
ತಳಮಟ್ಟದಲ್ಲಿ ಸಂಘಟನೆ ಬಲಪಡಿಸಿದರೆ ಚುನಾವಣೆಯಲ್ಲಿ ಯಶಸ್ಸು ಸಾಧ್ಯ : ಮೀನಹಳ್ಳಿ ತಾಯಣ್ಣ
WhatsApp Group Join Now
Telegram Group Join Now
ಬಳ್ಳಾರಿ: ಜೆಡಿಎಸ್ ಕಾರ್ಯಕಾರಣಿ ಸಭೆ
ಬಳ್ಳಾರಿ 12..ನಗರದ ಜೆಡಿಎಸ್ ಕಚೇರಿಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಪಕ್ಷದ ಪೂರ್ವ ನಿಯೋಜಿತ ಕಾರ್ಯಕಾರಣಿ ಸಭೆ ನಡೆಯಿತು.
ಸಭೆಗೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಮೀನಹಳ್ಳಿ ತಾಯಣ್ಣ ಅವರು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಚುನಾವಣೆಗಳ ಸಿದ್ಧತೆ, ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದು, ಬೂತ್ ಮಟ್ಟದ ಸಮಿತಿಗಳ ರಚನೆ, ಕಾರ್ಯಕರ್ತರ ಜವಾಬ್ದಾರಿಗಳು ಹಾಗೂ ಜನಸಂಪರ್ಕ ಕಾರ್ಯಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಚುನಾವಣೆಗಳನ್ನು ಗಂಭೀರವಾಗಿ ಎದುರಿಸಲು ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಜಿಲ್ಲಾಧ್ಯಕ್ಷರಾದ ಮೀನಹಳ್ಳಿ ತಾಯಣ್ಣ ಕರೆ ನೀಡಿದರು. ಮುಂದುವರೆದು ಮಾತನಾಡಿದ ಅವರು, ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದ್ದು, ತಳಮಟ್ಟದಲ್ಲಿ ಸಂಘಟನೆ ಬಲಪಡಿಸಿದರೆ ಚುನಾವಣೆಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.
ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ರೈತ ವಿಭಾಗದ ಅಧ್ಯಕ್ಷರಾದ ಲಕ್ಷ್ಮಿಕಾಂತ್ ರೆಡ್ಡಿ, ಸಂಡೂರು ತಾಲೂಕು ಅಧ್ಯಕ್ಷರಾದ ಕುರಿ ಕೊಪ್ಪ ಸೋಮಪ್ಪ, ಬಳ್ಳಾರಿ ನಗರ ಘಟಕದ ಅಧ್ಯಕ್ಷ ವನ್ನೂರು ಸ್ವಾಮಿ (ವಂಡ್ರಿ), ಕಂಪ್ಲಿ ತಾಲೂಕು ಅಧ್ಯಕ್ಷ ಮೇಘರಾಜ್, ಸಿರುಗುಪ್ಪ ತಾಲೂಕು ಅಧ್ಯಕ್ಷ ಶಿವನಾರಾಯಣ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಅಶೋಕ್ ಸಂಗನಕಲ್ಲು, ಪರಿಶಿಷ್ಟ ಜಾತಿ ಘಟಕದ  ಅಧ್ಯಕ್ಷ ವಸಂತ್ ಕುಮಾರ್,ಹಿಂದುಳಿದ ವರ್ಗಗಳ ಅಧ್ಯಕ್ಷ ಹೊಸಗೆರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಧುರೈ ವಿಜಯ, ಅಲ್ಪಸಂಖ್ಯಾತರ ಅಧ್ಯಕ್ಷ ಜಾವೀದ್, ಕಾರ್ಮಿಕರ ಅಧ್ಯಕ್ಷ ಬಾಲು, ಶಿವಕುಮಾರ್, ರಾಮಾಂಜನಿ ಚಾಗನೂರು, ನಾಗರಾಜ್, ಹಾಜಿ ಬಾಯ್, ಹೊನ್ನೂರ್ವಲಿ, ಭವಾನಿ, ಶಬನಾ, ರೇಣುಕಾ, ಮಮತಾ, ಲಕ್ಷ್ಮಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article