ಬಳ್ಳಾರಿ. ಅ. 13: ಕಲೆಗಳು ಉಳಿದರೆ ನಾಡು ಉಳಿಯುತ್ತದೆ ಕಲಾವಿದರು ಬೆಳೆಯುತ್ತಾರೆ ಕಲಾಪೋಷಕರು ಕಲಾವಿದರಿಗೆ ತಮ್ಮ ಮನ ಧನದಿಂದ ಸಹಾಯ ಮಾಡಬೇಕೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್ ರವರು ತಿಳಿಸಿದರು.
ಅವರು ನಗರದ ಬ್ಯಾಂಕ್ ಕಾಲೋನಿ ಉದ್ಯಾನವನ ಬಯಲು ವೇದಿಕೆಯಲ್ಲಿ ಟಿ ಶಕುಂತಲಮ್ಮ ಮತ್ತು ಬಸವರಾಜ್ ಕಲಾ ಸಮಾಜ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಪ್ರಾಯೋಜನೆ ಅಡಿಯಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು
ಹಾರ್ಮೋನಿಯಂ ಬಾರಿಸಿ ಉದ್ಘಾಟಿಸಿದ ಮಾತನಾಡಿ,
ತೊಗಲಗೊಂಬೆ ಒಂದು ಪ್ರಾಚೀನ ಕಲೆ, ಸಾವಿರಾರು ವರ್ಷಗಳ ಹಿಂದೆ ರಾಮಾಯಣ ಮಹಾಭಾರತವನ್ನು ಮಾತನಾಡುವ ಚಿತ್ರಗಳ ಮೂಲಕ ಜನರಿಗೆ ಅರ್ಥ ಮಾಡಿಸುತ್ತಿದ್ದರು ಎಂದು ಈ ಕಲೆ ಜೀವಂತವಾಗಿದೆ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಈ ಕಲೆ ಹುಟ್ಟಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ದೇಶ ವಿದೇಶಗಳಲ್ಲಿ ಈ ಕಲೆಯನ್ನು ನಮ್ಮ ಬೆಳಗಲ್ ಈರಣ್ಣನವರು ಆಡಿಸಿ ಬಂದಿದ್ದಾರೆ ಈಗಲೂ ಅವರ ಮನೆತನದವರು ತಮ್ಮ ಸೂಕ್ಷ್ಮ ಕುಸುರಿ ಕೆಲಸದಿಂದ ಅವ ಗಳನ್ನು ಗೊಂಬೆಗಳನ್ನು ಮಾಡಿ ಅನೇಕ ಕಥೆಗಳನ್ನು ಜೀವ ಕೊಟ್ಟು ಪ್ರದರ್ಶಿಸಿದ್ದಾರೆ ಎಂದಿಗೂ ರಾಮಾಯಣದ ಕುರುಹುಗಳು ನಮ್ಮ ಆನೆಗೊಂದಿ ಮತ್ತು ಹಂಪಿಯಲ್ಲಿ ಕಾಣಬಹುದು ಮಕ್ಕಳಿಗೆ ಪಾಠ ಹೇಳಿ ಕೊಡುವುದರಿಂದ ಚಿತ್ರಗಳ ಮೂಲಕ ತೋರಿಸುವುದರಿಂದ ಬಹುಬೇಗ ಅರ್ಥವಾಗುತ್ತದೆ ಸುಬ್ಬಣ್ಣ ಮತ್ತು ತಂಡದವರು ಈಗ ವಾಲಿ ಒದೆ ಎಂಬ ತಗಲುಗುಂಬೆ ಪ್ರದರ್ಶನವನ್ನು ಬಹಳ ಶ್ರಮಪಟ್ಟು ನಿಮಗೆಲ್ಲಾ ತೋರಿಸುತ್ತಿದ್ದಾರೆ ಎಂದರು.
ಕುಮಾರಿ ಅಭಿನಯ ಎಸ್ ಮತ್ತು ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು ಬ್ಯಾಂಕ್ ಅಧಿಕಾರಿ ಗಣಕೆಹಾಳ್ ಶಾಂತಪ್ಪ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಇಂತಹ ಕಲಾ ಪ್ರಕಾರಗಳು ಇರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ತಿಳಿಸಿದರು ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಮಸೀದಿಪುರ ಚಂದ್ರಶೇಖರಗೌಡ ಮಾತನಾಡಿ ರಾಮಾಯಣದಲ್ಲಿ ಬರುವ ಸನ್ನಿವೇಶಗಳನ್ನು ಅತ್ಯಂತ ಸೂಕ್ಷ್ಮವಾಗಿ ಎಲ್ಲರ ಮನಮುಟ್ಟುವಂತೆ ಕಥೆಯನ್ನು ನಿರ್ದೇಶಿಸಿರುವುದು ಸುಬ್ಬಣ್ಣ ಮತ್ತು ತಂಡದವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು ಪ್ರಥಮ ದರ್ಜೆ ಗುತ್ತಿಗೆದಾರ ಕೊರಳುಗುಂದಿ ಬಸವನಗೌಡ ಟ್ರಸ್ಟ್ ಅಧ್ಯಕ್ಷ ಟಿ ಸುನಿಲ್ ಕುಮಾರ್ ಆರ್ಯ ಈಡಿಗ ಮಹಾಸಭದ ಸದಸ್ಯ ಭೀಮ ಲಿಂಗ ಜ್ಯೋತಿ ಎಲ್ಲನಗೌಡ ಶಶಿಕಲಾ ಮಹಾಂತಯ್ಯ ಸ್ವಾಮಿ ಬೆಳಗಲ್ ಈರಣ್ಣನವರ ಪುತ್ರ ರಮಣಪ್ಪ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು ತುಳಸಿ ಸುಬ್ಬಣ್ಣ ಎಲ್ಲರನ್ನೂ ಸನ್ಮಾನಿಸಿದರು ಹಾರ್ಮೋನಿಯಂ ಮಾಸ್ಟರ್ ಮುದ್ದಾಟನೂರ್ ತಿಪ್ಪೇಸ್ವಾಮಿ ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.