ತಹಶೀಲ್ದಾರ್ ಬಸವರಾಜ ನಾಗರಾಳ ವಜಾ ಮಾಡದೇ ಇದ್ದರೆ ಉಗ್ರ ಹೋರಾಟ : ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ

Ravi Talawar
ತಹಶೀಲ್ದಾರ್ ಬಸವರಾಜ ನಾಗರಾಳ ವಜಾ ಮಾಡದೇ ಇದ್ದರೆ ಉಗ್ರ ಹೋರಾಟ : ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ
WhatsApp Group Join Now
Telegram Group Join Now
ಬೆಳಗಾವಿ. ನಗರದ ರಾಣಿ ಚೆನ್ನಮ್ಮ ಸರ್ಕಲ್ ದಿಂದ ಪ್ರತಿಭಟನೆ ಮೂಲಕ ಕಾರ್ಯಕರ್ತರೊಂದಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ್ ಮಾತನಾಡಿ ತಹಶೀಲ್ದಾರರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೆ ವಾಟ್ಸ್ ಆಫ್ ಮೂಲಕ ಡೆತ್‌ ನೋಟ್ ಹಾಕಿ ತನ್ನ ಸಾವಿಗೆ ಸಚಿವರಆಪ್ತ ಸೋಮು, ತಹಶೀಲ್ದಾರ ಬಸವರಾಜ ನಾಗರಗಾಳ ಮತ್ತು ಸಹೋದ್ಯೋಗಿ ಅಶೋಕ ಕಟ್ಟಲಗಿ ಕಾರಣವಾಗಿದ್ದಾರೆ. ತಹಶೀಲ್ದಾರಕಛೇರಿಯಲ್ಲಿ ನಡೆದಿರುವ ಕರ್ಮಕಾಂಡದ ವಿರುದ್ಧ ಒಗ್ಗಟ್ಟಾಗಿ ಹೊರಾಡಿ ಎಂದು ಸಂದೇಶ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈವ್ಯವಸ್ಥೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಯುವ ನೌಕರದಾರರನ ಕುಟುಂಬಕ್ಕೆ ನ್ಯಾಯ ಒದಿಗಿಸಬೇಕಾಗಿರುವದು ನಾಗರಿಕ ಸಮಾಜದಕರ್ತವ್ಯ .ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಯಾವುದೇ ಕಾಂಗ್ರೆಸ್ ಮುಖಂಡರು ಮೃತ ರುದ್ರೇಶ್ ಯಡವಣ್ಣವರ ಅವರ ಮನೆಗೆ ತೆರಳಿ ಸಾಂತ್ವನ ಹೇಳದೇ ಇರುವುದು ವಿಷಾದನೀಯ ಸಂಗತಿ ಈ ಪ್ರಕರಣದಲ್ಲಿ ಸಚಿವರ ಆಪ್ತ ಇರುವದರಿಂದ ಆತನನ್ನು ಮತ್ತು ಆಪಾದಿತದ್ವಯರನ್ನು ವಿಶೇಷ ತನಿಖಾ ತಂಡದಿಂದ ತೀವ್ರತರನಾದತನಿಖೆ ನಡೆಸಿ ಅದರ ಹಿಂದಿನ ಕರ್ಮಕಾಂಡ ಮತ್ತು ಅದಕ್ಕೆ ಕಾರಣಿಕರ್ತರಾದವರನ್ನು ಪತ್ತೆ ಮಾಡಬೇಕು.
ಈ ತನಿಖೆ ನಿಷಪಕ್ಷಪಾತವಾಗಿ ನಡೆದು ಸತ್ಯ ಹೊರ ಬರಬೇಕಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಾಜಿನಾಮೆ ಕೊಡಬೇಕು. ಮತ್ತು ಬೆಳಗಾವಿ ತಹಶಿಲ್ದಾರರಾದ ಬಸವರಾಜನಾಗರಾಳ ಇವರನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕು. ಮತ್ತು ಲಕ್ಷ್ಮೀ ಹೆಬ್ಬಾಳ್ಳರ ಅವರು ರಾಜೀನಾಮೆ ಕೊಡದೆ ಹೊದರೆತಾವುಗಳು  ಸಚಿವ ಸಂಪುಟದಿಂದ ಅವರನ್ನು ವಜಾ ಮಾಡಬೇಕೆಂದು ಹೇಳಿದರು.. ಈಗಾಗಲೆ ರಾಜ್ಯದಲ್ಲಿ ನಿಷ್ಠಾವಂತ ಸರ್ಕಾರಿ ಅಧಿಕಾರಿಗಳಿಗೆಆತ್ಮಹತ್ಯೆ ಭಾಗ್ಯ ಕಲ್ಪಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ 8 ಜನ ಸರ್ಕಾರಿ ಅಧಿಕಾರಿಗಳನ್ನು ಬಲಿ ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಅನೇಕಸಚಿವರು, ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು ನೌಕರದಾರರ ಮೇಲೆ ಒತ್ತಡ ತಂದು ಅವರ ಸಾವಿಗೆ ಕಾರಣವಾಗಿರುವಇಂತವರನ್ನು ಹೆಡೆಮೂರಿ ಕಟ್ಟಬೇಕಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ಅಬಕಾರಿ ಹಗರಣ, ಸರಣಿ ಬಾಣಂತಿಯರು ಹಾಗೂಶಿಶುಗಳ ಸಾವು ಮತ್ತು, ಹಾಲಿನ ದರ ಏರಿಕೆ ಸರ್ಕಾರ ನೌಕರರ ಹಾಗೂ ಗುತ್ತಗೆದಾರರ ಆತ್ಮಹತ್ಯೆ ರೈತರ ಆತ್ಮಹತ್ಯೆ ದಿನನಿತ್ಯಬಳಕೆ ವಸ್ತುಗಳ ಬೆಲೆ ಗಗನಕ್ಕೆರಿದೆ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಅರಾಜಕತೆ ಸೃಷ್ಠಿಸಿ ಬ್ರಷ್ಟಾಚಾರದ ಪಾಪರ ಸರ್ಕಾರ ಇದಾಗಿದ್ದು, ಇದನ್ನುಕಿತ್ತೊಗೆಯಲು ರಾಜ್ಯದ ಜನತೆ ಸಂಕಲ್ಪತೊಟ್ಟಿದ್ದಾರೆ ಜೊತೆಗೆ ಬೆಳಗಾವಿಯ ರುದ್ರೇಶ  ಯಡವನ್ನವರ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಪ್ರಭಾವಿ ಸಚಿವೆಲಕ್ಷ್ಮೀ ಹೆಬ್ಬಾಳಕರ ಹಾಗೂ ತಹಶೀಲ್ದಾರ ಬಸವರಾಜ ನಾಗರಾಳ ರವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
*ಬೀದರ ಜಿಲ್ಲೆಯ ಗುತ್ತಿಗೆದಾರರಾದ  ಸಚೀನ್ ಪಾಂಚ್ಯಾಳ ಇವರು ದಿನಾಂಕ : 26/12/2024 ಇವರಆತ್ಮಹತ್ಯೆ ಮಾಡಿಕೊಂಡಿರುವುದು ತುಂಬಾ ಆಘಾತಕಾರಿ ಸಂಗತಿ ಈ ಆತ್ಮಹತ್ಯೆಗೆ ಮೂಲ ಕಾರಣಿಭೂತರಾದ  ಪ್ರೀಯಾಂಕ ಖರ್ಗೆಗ್ರಾಮಿಣಾಭೀವೃದ್ಧಿ ಮತ್ತು ಪಂಚಾಯತರಾಜ್ ಸಚಿವರು, ಕರ್ನಾಟಕ ಸರಕಾರ, ಬೆಂಗಳೂರು. ಇವರ ಕುಮ್ಮಕ್ಕಿನಿಂದ ಅವರ ಆಪ್ತರ ಕಿರುಕುಳನೀಡಿದ್ದರ ಪರಿಣಾಮವಾಗಿ  ಸಚೀನ್ ಪಾಂಚ್ಯಾಳ ಮನನೊಂದು ಡೆತ್ ನೋಟಿನಲ್ಲಿ ಮಾನ್ಯ ಸಚಿವರ ಹಾಗೂ ಅವರ ಆಪ್ತರ ಹೆಸರುಗಳನ್ನುನಮೂದಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸದರಿ ಎಲ್ಲ ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಹಾಗೂ ಸಚಿವರ ರಾಜೀನಾಮೆಪಡೆದುಕೊಳ್ಳುವಂತೆ ಈ ಮೂಲಕ ಒತ್ತಾಯಿಸುತ್ತೇವೆ ಹಾಗೂ ಸದರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳುವಂತೆ ಭಾರತೀಯಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಹಾಗೂ ಮಹಾನಗರ ಜಿಲ್ಲೆಯಿಂದ ಒತ್ತಾಯಿಸುತೇವೆ. ಮತ್ತು ದಯಾಳುಗಳಾದ ತಾವು ಗುತ್ತಿಗೆದಾರರಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವಿರೆಂದು ಭಾವಿಸುತ್ತೆವೆ. ಒಂದು ವೇಳೆ ಸಚಿವರ ರಾಜೀನಾಮೆಯನ್ನು ಪಡೆಯದಿದ್ದರೆ ರಾಜ್ಯಾದ್ಯಂತ ಭಾರತೀಯಜನತಾ ಪಾರ್ಟಿ ಉಗ್ರ ಸ್ವರೂಪದ ಪ್ರತಿಭಟನೆ ಕೈಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ, ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಯುವರಾಜ ಜಾಧವ,ವಿಜಯ ಕೊಡಗನೂರ, ಪ್ರಶಾಂತ್ ಕಂಗ್ರಾಳಕರ್, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೊಲಕಾರ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಬಸ್ಮೆ, ಮುರುಗೇಂದ್ರಗೌಡ ಪಾಟೀಲ,ವಿನಯ್ ಕದಮ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಉಮೇಶ್ ಪುರಿ, ಸುಭಾಷ್ ಸಣ್ಣವೀರಪ್ಪನವರ,ಆನಂದ ಅತ್ತುಗೋಳ,ಮನೋಜ್ ಪಾಟೀಲ್, ಧನ್ಯಕುಮಾರ ಪಾಟೀಲ್, ಪ್ರಸಾದ್ ದೇವರಮನಿ, ವಿಠ್ಠಲ ಸಾಯಣ್ಣವರ, ವೀರಭದ್ರ ಪೂಜಾರಿ ಹಾಗೂ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article