ಸವದಿ ಬಿಜೆಪಿಯಲ್ಲಿ ಇದ್ದರೆ ರಾಜ್ಯದ ದೊಡ್ಡ ಲೀಡರ್ ಆಗುತ್ತಿದ್ದರು :ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ

Pratibha Boi
ಸವದಿ ಬಿಜೆಪಿಯಲ್ಲಿ ಇದ್ದರೆ ರಾಜ್ಯದ ದೊಡ್ಡ ಲೀಡರ್ ಆಗುತ್ತಿದ್ದರು :ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ
WhatsApp Group Join Now
Telegram Group Join Now
ಅಥಣಿ: ನಾವು ಯಾವುದೋ ಒಂದು ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ ಸವದಿಗೆ ಹೆಚ್ಚಿನ ಲಾಭ ಆಗಿದೆ, ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬಿಜೆಪಿಯಿಂದ ಪೀಡಾ ಹೋಯಿತು, ಈಗ ಕಾಂಗ್ರೆಸ್ ಪಾಲಾಗಿದೆ, ಬಿಜೆಪಿಯಲ್ಲಿ ಸವದಿ ಇದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದರು. ಕಾಂಗ್ರೆಸ್‌ನಲ್ಲಿ ಐದು ವರ್ಷ ಶಾಸಕರಾಗಿ ಕೆಲಸ ಮಾಡಬಹುದು ಬಿಜೆಪಿ ಬಿಟ್ಟು ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡ ಬಿಜೆಪಿ ಬಿಟ್ಟಿದ್ದು ಒಳ್ಳೆಯದಾಯ್ತು ಇನ್ನು ಮುಂದೆ ಅವರು ಬಿಜೆಪಿ ಬರೋಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು
ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆ ಸ್ವಾಭಿಮಾನಿ ರೈತರ ಪೇನಲ್ ಚುನಾವಣಾ ಕಾರ್ಯರ್ತರ ಸಭೆಯಲ್ಲಿ ಮಾತನಾಡಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುವುದಕ್ಕೆ ಆಸೆ ವ್ಯಕ್ತಪಡಿಸಿಲ್ಲ ಎಂದು ಶಾಸಕ ಸವದಿ ಹೇಳುತ್ತಾರೆ, ಆದರೆ ಸವದಿಗೆ ಅವಕಾಶ ಸಿಕ್ಕರೆ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೋಕೂ ಹಿಂದೆ ಸರಿಯುವುದಿಲ್ಲ, ಬಿಡಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದರೆ ಜಾರಕಿಹೊಳಿ ಮನೆಗೆ ಬಂದು ಕಾಲಿಗೆ ಬೀಳುತ್ತಾರೆ. ಕೃಷ್ಣ ಸಹಕಾರಿ ಕಾರ್ಖಾನೆ ಮುಳುಗುವ ಹಂತಕ್ಕೆ ಬಂದಿದೆ, ಶಾಸಕ ಲಕ್ಷ್ಮಣ್ ಸವದಿ ಹೇಳುವ ಮಾತು ಎಲ್ಲವೂ ಸುಳ್ಳು, ಕೃಷ್ಣಾ ಶುಗರ ಫ್ಯಾಕ್ಟರಿ ಉಳಿಸಿಕೊಳ್ಳೋಕೆ ನಿಮಗೆ ಸುವರ್ಣ ಅವಕಾಶ ಬಂದಿದೆ ದಯವಿಟ್ಟು ಸ್ವಾಭಿಮಾನಿ ರೈತ ಪೆನಲ್ ಆಯ್ಕೆ ಮಾಡುವಂತೆ ಶಾಸಕ ರಮೇಶ್ ಜಾರಕಿಹೊಳಿ ರೈತರಿಗೆ ಮನವಿ ಸಲ್ಲಿಸಿದರು,
ಈ ವೇಳೆ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ, ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಶಶಿಕಾಂತ ಗುರುಜಿ, ಬಿಜಿಪಿ ತಾಲೂಕು ಘಟಕ ಅಧ್ಯಕ್ಷ ಗಿರೀಶ ಬುಟಾಳೆ, ಅಪ್ಪಾಸಾಬ ಅವತಾಡೆ, ಎ ಎ ಹುದ್ದಾರ, ಸಂಪತಕುಮಾರ ಶೇಟ್ಟಿ, ರಮೇಶ ಸಿಂದಗಿ, ರಾವಸಾಬ ಐಹೋಳೆ, ನಿಂಗಪ್ಪ ನಂದೇಶ್ವರ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು
WhatsApp Group Join Now
Telegram Group Join Now
Share This Article