ಬೈಲಹೊಂಗಲ: ಪಟ್ಟಣದ ಕೆ.ಇ.ಬಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಭೇಟಿಯಾಗಿ ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯ ಅಧ್ಯಕ್ಷ ರವಿ ಪಾಟೀಲ ಅವರು ಮಾತನಾಡಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ಹತ್ತಿರ ಇರುವ ಇಂಚಲ ಗ್ರಾಮದ ಹೊರವಲಯದಲ್ಲಿ ಅನೇಕ ರೈತ ಕುಟುಂಬಗಳು ಮನೆಕಟ್ಟಿ ವಾಸಮಾಡುತ್ತಿದ್ದಾರೆ.
ಅಂದಾಜು ಸುಮಾರು 150 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇಂಚಲ ಗ್ರಾಮಪಂಚಾಯಿತಿಗೆ, ಈ ಮನೆಗಳನ್ನು ಗ್ರಾಮಠಾಣಾದಲ್ಲಿ ಹಾಕಿಕೊಂಡು ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ
ಕೊಡುವಂತೆ ಕಳೆದ 20 ವರ್ಷಗಳಿಂದ ಅರ್ಜಿ ಕೊಡುತ್ತಾ ಬಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ .
ಕುಟುಂಬಗಳು ಕತ್ತಲೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ವಿದ್ಯುತ್ ಇಲ್ಲದ್ದರಿಂದ ರಾತ್ರಿಯ ವೇಳೆ ಈ ಕುಟುಂಬಗಳು ಭಯದಿಂದಲೇ ಜೀವನ ನಡೆಸುತ್ತಿದ್ದಾರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ ಮಕ್ಕಳು
ಈ ಕಾರಣದಿಂದಲೇ ಶಾಲೆಗೆ ಹೋಗದೇ ಶಿಕ್ಷಣವನ್ನು ಅರ್ದಕ್ಕೆ ನಿಲ್ಲಸಿದ್ದಾರೆ. ಒಟ್ಟಿನಲ್ಲಿ ಈ ಕುಟುಂಬಗಳ ಜೀವನ ಕತ್ತಲೇಯಲ್ಲಿಯೇ ಕಳೆಯುತ್ತಿದ್ದಾರೆ. ಅನೇಕ ಬಾರೀ ಹೆಸ್ಕಾಂ ಅಧಿಕಾರಿಗಳಿಗೇ ವಿದ್ಯುತ್ ಸಂಪರ್ಕ
ಕಲ್ಪಸುವಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಕಾರಣ ಕುಟುಂಬಗಳ ನೋವನ್ನು ಅರ್ಥಮಾಡಿಕೋಡು, ಈ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ ಸಂಪರ್ಕ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶಂಕರ ಬೋಳಣ್ಣವರ, ಜಿಲ್ಲಾ ಸಂಚಾಲಕರಾದ ಸುರೇಶ್ ವಾಲಿ, ರೈತರಾದ ಸಂತೋಷ ಕಮತಗಿ, ಸುರೇಶ್ ಬೋಳಣ್ಣವರ, ಭೀಮಪ್ಪ ಉದಗಟ್ಟಿ, ಬಂಕನಾಥ ವಾರಿ,ಸಿದ್ರಾಮ ಖನಗೌಡರ, ಮಹಾಂತೇಶ ಮೆಟಗಟ್ಟಿ,ರಾಜು ದಿನ್ನಿಮನಿ ಹಾಗೂ ಅನೇಕರು ಉಪಸ್ಥಿತರಿದ್ದರು.