ಆಸಕ್ತಿಯಂತೆ ಶಿಕ್ಷಣ ಕಲ್ಪಿಸಿದರೆ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ:ಮುನಿರಾಜ

Sandeep Malannavar
ಆಸಕ್ತಿಯಂತೆ ಶಿಕ್ಷಣ ಕಲ್ಪಿಸಿದರೆ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ:ಮುನಿರಾಜ
WhatsApp Group Join Now
Telegram Group Join Now
ಬಳ್ಳಾರಿ, ಫೆ.20.. ಪೋಷಕರು ತಮ್ಮ ಆಸಕ್ತಿಯಂತೆ ಮಕ್ಕಳನ್ನು ಓದಿಸದೇ, ಮಕ್ಕಳಲ್ಲಿರುವ ಇಚ್ಛಾಶಕ್ತಿಯಂತೆ ಅವರಿಗೆ ಶಿಕ್ಷಣ ಕಲ್ಪಿಸಿದರೆ ಆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆಂದು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮುನಿರಾಜ್ ಹೇಳಿದ್ದಾರೆ.
ಅವರು ನಿನ್ನೆ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಗ್ಯಾರಂಟಿ ನ್ಯೂಸ್ ಮತ್ತು ಆ್ಯಡ್ 6 ಹಾಗೂ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪ್ರಿನ್ಸಿಪಲ್ ಮೀಟ್ ಕಾರ್ಯಕ್ರಮದಲ್ಲಿ ಪಿಯುಸಿ ನಂತರ ಮುಂದೇನು ಎಂಬ ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಮಾತನಾಡಿದರು.
ಎಐ (ಕೃತಕ ಬುದ್ದಿಮತ್ತೆ) ಜಾಗತಿಕ ಯುಗದಲ್ಲಿ ಅನೇಕ ತಾಂತ್ರಿಕ ಶಿಕ್ಷಣದ ಕೋರ್ಸಗಳಿಗೆ ಬೇಡಿಕೆ ಹೆಚ್ಚಾಗಿದೆ.ಮೆಡಿಕಲ್, ಇಂಜಿನಿಯರ್ ಹೀಗೆ ಹಲವಾರು ಕೋರ್ಸ್ ಗಳಿಗೆ ಕಾಲಕ್ಕೆ ತಕ್ಕಂತೆ ಬೇಡಿಕೆ ಹೆಚ್ಚುತ್ತಿದೆ.ಪೋಷಕರು ತಮ್ಮ ಮಕ್ಕಳು ಯಾವ ವಿಷಯದಲ್ಲಿ ಆಸಕ್ತಿ ಇದ್ದಾರೆ ಆ ವಿಷಯದ ಕೋರ್ಸ್ ಓದಿಸಬೇಕು.ವಿದ್ಯಾರ್ಥಿಗಳು ಪಿಯುಸಿ ನಂತರ ಮುಂದೇ ಆಯ್ಕೆ ಮಾಡುವ ಕೋರ್ಸ್ ಗಳ ಬಗ್ಗೆ ಸಂವಾದ ಮಾಡುತ್ತಿರುವದರಿಂದ ಇದರಿಂದ ಅನುಕೂಲವಾಗಲಿದೆಂದರು.
ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಪಿ.ಎಸ್.ಹರ್ಷ ಮಾತನಾಡಿ,ಇಂದಿನ ವಿದ್ಯಾರ್ಥಿಗಳು ಪಿಯುಸಿ ಓದು ಮುಗಿಸಿದ ನಂತರ ಮೆಡಿಕಲ್, ಇಂಜಿನಿಯರ್, ತಾಂತ್ರಿಕ ಶಿಕ್ಷಣ ಸೇರಿ ಹಲವಾರು ಕೋರ್ಸ್ ಓದುತ್ತಾರೆ.ಕಾಲಕ್ಕೆ ತಕ್ಕಂತೆ ಈಗ ಕಲಿಕಾ ಮಟ್ಟ ಬದಲಾವಣೆ ಆಗಿದೆ.ಈಗ ಉತ್ತರ ಸಿಗುವುದು ಸುಲಭವಾಗಿದೆ.ಆದರೆ ಪ್ರಶ್ನೆ ಮಾಡುವ ಬುದ್ದಿವಂತಿಕೆ ಜಾಗೃತಗೊಳಿಸಬೇಕಿದೆ.ಮಕ್ಕಳು ಮನಸ್ಸು ಗಗನಕ್ಕೆ ಚಿಮ್ಮುವಷ್ಟು ಪೋಷಕರು ಮಕ್ಕಳ ಉತ್ತಮ ಕನಸು ನನಸಾಗಲು ಪ್ರೋತ್ಸಾಹಿಸಬೇಕಿದೆ.ನುರಿತ ತಜ್ಞರ ಮೂಲಕ ಸಂವಾದ ಕಾರ್ಯಕ್ರಮ ಮಾಡುವ ಕಾರ್ಯ ಶ್ಲಾಘನೀಯವಾಗಿದೆಂದರು.
ಈ ವೇಳೆ ಗ್ಯಾರಂಟಿ ನ್ಯೂಸ್ ನ ಸಂಪಾದಕ ಸತೀಶ್ ಅಂಜಿನಪ್ಪ ಮಾತನಾಡಿ, ಎಐ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬೇಡಿಕೆ ಹೆಚ್ಚಾಗಿದೆ.ಯಾವ ಕೋರ್ಸ್ ಓದಬೇಕು,ವಿದ್ಯಾರ್ಥಿಗಳ ಭವಿಷ್ಯ ಹೇಗಿರಬೇಕೆಂಬುದು ಸವಾಲ್ ಇದೆ.ಮಕ್ಕಳ ಭವಿಷ್ಯ ಬದಲಾವಣೆಗೆ ಯಾವ ಕೋರ್ಸ್ ಓದಬೇಕೆಂಬ ಗೊಂದಲ,ಸವಾಲ್ ನಿವಾರಣೆಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಗ್ಯಾರಂಟಿ ನ್ಯೂಸ್ ವತಿಯಿಂದ ಪ್ರಿನ್ಸಿಪಲ್ ಮೀಟ್ ಮೂಲಕ ಪಿಯುಸಿ ನಂತರ ಮುಂದೇನು ವಿಚಾರ ಸಂಕಿರಣ ಕಾರ್ಯಕ್ರಮದ ಮೂಲಕ ಪಿಯುಸಿ ಓದಿದ ನಂತರ ಯಾವ ಕೋರ್ಸ್ ಓದಿದರೆ ವಿದ್ಯಾರ್ಥಿಗಳ ಭವಿಷ್ಯ ಬದಲಾವಣೆ ಯಾಗುತ್ತದೆ ಎಂಬ ಅರಿವು ಮಾಡಿಸಲಾಗುತ್ತಿದೆಂದರು.
ಕಾರ್ಯಕ್ರಮದಲ್ಲಿ ಬೆಂಗಳೂರುನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ರಮೇಶ್ ಬಾಬು, ಎಸಿಸಿಇಎ ಅಧ್ಯಕ್ಷ ಎ.ಎಸ್.ಸತ್ಯನಾರಾಯಣ, ಶ್ರೀ ನಂದಿ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಅನುರಾಧ ಎಸ್.ಜಿ., ವೆಂಕಟೇಶ ಕುಲಕರ್ಣಿ, ಅಶೋಕ ಭಟ್ಟ, ಕಣ್ಣನ್, ಬಿರಾಳ,ನಾಗಪ್ಪ ಮಾಲಿಪಾಟೀಲ, ರಾಧಾಕೃಷ್ಣ ಮೊದಲಾದವರು ಇದ್ದರು.ಬಸವರಾಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
WhatsApp Group Join Now
Telegram Group Join Now
Share This Article