ನರೇಗಾ ಯೋಜನೆಯಲ್ಲಿ 100 ಕೆಲಸ ನೀಡದಿದ್ದರೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಖಚಿತ

Ravi Talawar
ನರೇಗಾ ಯೋಜನೆಯಲ್ಲಿ 100 ಕೆಲಸ ನೀಡದಿದ್ದರೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಖಚಿತ
WhatsApp Group Join Now
Telegram Group Join Now
ಬಳ್ಳಾರಿ 10…ತಾಲ್ಲೂಕಿನ ಡಿ.ಕಗ್ಗಲ್ಲು ಗ್ರಾಮದ ಕೂಲಿ ಕಾರ್ಮಿಕರಿಗೆ ಒಂದು ಕುಟುಂಬಕ್ಕೆ 100 ದಿನ ಕೆಲಸ ನೀಡಲು ಆಗ್ರಹಿಸಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಚಾನಾಳ್ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿ ಪಿ.ಡಿ.ಓ  ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ  ರಾಜ್ಯದಲ್ಲಿ ಬರ ಹಿನ್ನಲೆಯಲ್ಲಿ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ, 15 ತಿಂಗಳಲ್ಲಿ 1182 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಇಂತಾ ಪರಿಸ್ಥಿತಿಯಲ್ಲಿ ರೈತರ ಮತ್ತು ಕೃಷಿ ಕೂಲಿ ಕಾರ್ಮಿಕರ  ಜೀವನಕ್ಕೆ  ಸಹಾಯವಾಗುವ ಈ ನರೇಗಾ ಯೋಜನೆಯಲ್ಲಿಯೂ ಸಹ ಕೆಲಸ ಕೊಡದಿರುವುದು ರೈತ ವಿರೋಧಿ ಕ್ರಮವಾಗಿದೆ, ಈ ಕೂಡಲೇ ಮೇಲಾಧಿಕಾರಿಗಳು ಈ ಕಡೆ ಗಮನ ಹಾಕಿ ಇಲ್ಲಿನ ರೈತರಿಗೆ ಕೆಲಸ ಕೊಡದಿದ್ದಲ್ಲಿ ಪಂಚಾಯಿತಿ ಕಚೇರಿ ಮುತ್ತಿಗೆ ಖಚಿತ ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ಕೆಲವು ದಿನಗಳ ಹಿಂದೆ ಗ್ರಾಮದ ರೈತರು ಕೆಲಸಕ್ಕಾಗಿ ಪ್ರತಿಭಟನೆ ಮಾಡಿದ್ದರೂ ಸಹ ಅವರಿಗೆ ಕೆಲಸ ಸಿಗದ ಕಾರಣ 2ನೇ ಬಾರಿಗೆ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ, ಈ ಕೂಡಲೇ ಕೆಲಸ ನೀಡದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು, ಅಂತ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲೆಯೇ ಇದೆ ಎಂದರು.
ಈ ಸಂದರ್ಭದಲ್ಲಿ ಸದಸ್ಯ ಕೆ.ಶಿವರಾಜ, ರೈತರಾದ  ರಾಮಪ್ಪ, ಸೋಮಪ್ಪ, ಗಂಗಾಧರ, ನಾಗರಾಜ, ದೊಡ್ಡ ಪೆದ್ದಯ್ಯ, ಗಾದಿಲಿಂಗಪ್ಪ, ರಾಜ ಸಾಬ್ ಸೇರಿದಂತೆ ಇತರರು ಇದ್ದರು,
WhatsApp Group Join Now
Telegram Group Join Now
Share This Article