ದಾವಣಗೆರೆಯಲ್ಲಿ ಐ ಲವ್‌ ಮೊಹಮ್ಮದ್‌ ಫ್ಲೆಕ್ಸ್‌ ಗಲಾಟೆ; 8 ಜನರ ಬಂಧನ

Ravi Talawar
ದಾವಣಗೆರೆಯಲ್ಲಿ ಐ ಲವ್‌ ಮೊಹಮ್ಮದ್‌ ಫ್ಲೆಕ್ಸ್‌ ಗಲಾಟೆ; 8 ಜನರ ಬಂಧನ
WhatsApp Group Join Now
Telegram Group Join Now

ದಾವಣಗೆರೆ, ಸೆಪ್ಟೆಂಬರ್​​ 27: ಕಾರ್ಲ್​ ಮಾರ್ಕ್ಸ್​ ನಗರದಲ್ಲಿ ‘ಐ ಲವ್ ಮೊಹಮ್ಮದ್ಎಂಬ ಬರಹವುಳ್ಳ ಫ್ಲೆಕ್ಸ್ ವಿಚಾರವಾಗಿ ಸೆ. 24ರ ರಾತ್ರಿ ನಡೆದಿದ್ದ ಕಲ್ಲು ತೂರಾಟ ಘಟನೆ ಸಂಬಂಧ ಈವರೆಗೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಜಾದನಗರ ಠಾಣಾ ವ್ಯಾಪ್ತಿಯಲ್ಲಿ 2 ಕೋಮಿನವರಿಂದ ಪ್ರತ್ಯೇಕ ದೂರು ಆಧರಿಸಿ ಬಂಧನ ನಡೆದಿದೆ. ಕಾರ್ಲ್​ ಮಾರ್ಕ್ಸ್​ ನಗರದ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸುವ ಹಾಗೂ ಅನಗತ್ಯ ಮಾಹಿತಿ ಹಂಚಿಕೊಳ್ಳುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಖಡಕ್​ ಎಚ್ಚರಿಕೆಯನ್ನೂ ದಾವಣಗೆರೆ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೀಡಿದ್ದಾರೆ.

ಕಾರ್ಲ್​ ಮಾರ್ಕ್ಸ್​ ನಗರದಲ್ಲಿ ಹಾಕಲಾಗಿದ್ದ ‘ಐ ಲವ್ ಮೊಹಮ್ಮದ್  ಎಂಬ ಬರಹವುಳ್ಳ ಫ್ಲೆಕ್ಸ್ ಹರಿಯಲಾಗಿದೆ ಎಂಬ ಸುದ್ದಿ ಹರಿದಾಡಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸುದ್ದಿ ಕೇಳಿ ಗುಂಪು ಗುಂಪಾಗಿ ಜನರು ಸೇರಿದ್ದು, ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆಯೂ ಆರೋಪ ಕೇಳಿಬಂದಿತ್ತು. ಗಲಾಟೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ವಾಹನಗಳು ಜಖಂಗೊಂಡಿದ್ದವು. ಘಟನೆ ಸಂಬಂಧ ಎರಡೂ ಕೋಮಿನ 107 ಜನರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿತ್ತು. ಘಟನೆ ಬಳಿಕ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಿದ್ದ ಪೊಲೀಸರು, ಯಾವುದೇ ಅಹಿತಕರ ಸುದ್ದಿ ಹರಡದಂತೆ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿದ್ದರು. ಆ ಬಳಿಕ ಘಟನಾ ಸ್ಥಳದಲ್ಲಿ ಪರಿಸ್ಥಿತಿ ಶಾಂತಗೊಂಡಿತ್ತು.

WhatsApp Group Join Now
Telegram Group Join Now
Share This Article