ಬೆಂಗಳೂರು, ಸೆ.19: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಕೇಸ್ಗೆ ಸಂಬಂಧಿಸಿ ಸುಳ್ಳು ಮಾಹಿತಿ ಹಂಚಿಕೆ ಆರೋಪದಡಿ ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಿರುದ್ಧ FIR ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಆರ್ ಅಶೋಕ್ ಅವರು ಕಾಂಗ್ರೆಸ್ (Congress) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ತನಿಖೆ ಮಾಡಿ ಎಂದು ಹೇಳಿದ್ದಕ್ಕೆ ನನ್ನ ವಿರುದ್ಧವೇ ಕೇಸ್ ಹಾಕಿದ್ದಾರೆ. ಹಾಗಾದರೆ ವಿಪಕ್ಷವಾಗಿ ಬಾಯಿ ಮುಚ್ಕೊಂಡು ಕುಳಿತುಕೊಳ್ಳಬೇಕಾ? ನಾನು ಹೋಗಿದ್ದಾಗ ಜನರು ಹೇಳಿದ್ದನ್ನು ಟ್ವೀಟ್ ಮಾಡಿದ್ದೇನೆ. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದು ಕೂಗಿಲ್ಲ ಎಂದರು. ಹಾಗಾದರೆ ನಿಮ್ಮ ಮೇಲೆ ಯಾಕೆ FIR ಹಾಕಬಾರದು? ವಿಪಕ್ಷ ನಾಯಕನಾಗಿ ತನಿಖೆ ಮಾಡಿ ಅಂತಾನೂ ಹೇಳಬಾರದ? ಬಾಯಿ ಮುಚ್ಚಿಸುವ ಕೆಲಸ ಸರ್ಕಾರ ಮಾಡುತ್ತಿದೆ. ವಿಪಕ್ಷ ಬಾಯಿ ಮುಚ್ಚಿಸಬೇಕು ಅಂತಾ ಇವರು ತೀರ್ಮಾನಿಸಿದ್ದಾರೆ.