ಅಥಣಿ: ಚುನಾವಣೆಯಲ್ಲಿ ಗೆಲ್ಲುವ ಬಗೆ ನಾನು ಭವಿಷ್ಯ ಹೇಳಲು ಭಷಗಾರನಲ್ಲ, ಆದರೆ ಈ ಬಾರಿ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ೧೨೫ ಅರ್ಹ ಮತದಾರರಲ್ಲಿ ೧೨೦ಕ್ಕೂ ಹೆಚ್ಚು ಜನ ನೀವೇ ಬೇಕು ಅಂತಾ ಹೇಳುತ್ತಿದ್ದು, ನಿಮ್ಮ ಸೇವೆ ಇನ್ನು ಮನಗೆ ಬೇಕು ಅಂತಾ ಹೇಳುತ್ತಿರುವದರಿಂದ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಗೆಲ್ಲವ ಆತ್ಮ ವಿಶ್ವಾಸ ನಮಗೆ ಇದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಅಥಣಿ ಪಟ್ಟಣದ ಗೃಹ ಕಛೇರಿಯ ಬಳಿ ಸುದ್ದಿಗಾರರೊಂದಗೆ ಮಾತನಾಡಿದ ಶಾಸಕ ಲಕ್ಷö್ಮಣ ಸವದಿ ಈ ಬಾರಿ ಜಿಲ್ಲಾ ಮದ್ಯವರ್ತಿ ಬ್ಯಾಂಕಿ ಚುನಾವಣೆಗೆ ಒಂದು ತಿಂಗಳ ಮುಂಚಿತವಾಗಿ ತಯಾರಿ ನಡೆಯುತ್ತಿದೆ. ಆದರೆ ಅಥಣಿ ಕ್ಷೇತ್ರದಿಂದ ನಾನು ಮತ್ತು ಕಾಗವಾಡ ಕ್ಷೇತ್ರದಿಂದ ಶಾಸಕ ರಾಜು ಕಾಗೆ ಅವರು ಅ. ೧೦ ರಂದು ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇವೆ. ಕಳೆದ ೩೦ ವರ್ಷಗಳಿಂದ ಬೆಳಗಾವಿ ಮದ್ಯವರ್ತಿ ಬ್ಯಾಂಕಿನ ನಿರ್ದೇಶಕನಾಗಿ ನಮ್ಮ ಅಥಣಿ ಮತಕ್ಷೇತ್ರದಲ್ಲಿ ೭೦೦ ಕೋಟಿ ರೂ.ಗಳಷ್ಟು ಬಡ್ಡಿ ರಹಿತ ಸಾಲವನ್ನು ರೈತರಿಗೆ ನೀಡಿದ್ದೇವೆ. ಸಹಕಾರಿ ಕ್ಷೇತ್ರವನ್ನು ಬಲಿಷ್ಟ ಮಾಡುವಲ್ಲಿ ಪ್ರಾಮಾಣಿಕ ಪ್ರೇಯತ್ನ ಮಾಡಿದ್ದೇನೆ. ಅಥಣಿ ಕ್ಷೇತ್ರದಲ್ಲಿ ಒಟ್ಟು ೧೨೫ ಅರ್ಹ ಸೋಸೈಟಿಗಳ ಮತಗಳು ಇದ್ದು ಅದರಲ್ಲಿ ೧೦೦ ಪ್ರತಿಶತದಷ್ಟು ಜನ ಮತದಾರರು ನನಗೆ ಬೆಂಬಲ ನೀಡಿದ್ದು ಇನ್ನಷ್ಟು ನಮ್ಮ ಸೇವೆಯನ್ನು ಬಯಸುತ್ತಿದ್ದು, ಚುನಾವಣೆಯಲ್ಲಿ ಏನಾಗುತ್ತದೆ ಎಂದು ಹೇಳಲು ಬರುವದಿಲ್ಲ ಆದರೆ ನಮ್ಮ ಕಾರ್ಯವನ್ನು ಗುರುತಿಸಿ ನಮಗೆ ಬೆಂಬಲವಾಗಿ ನಿಂತಿರುವ ಮತದಾರರ ಆಶಯದಂತೆ ಗೆಲ್ಲುವ ಆತ್ಮವಿಶ್ವಾಸ ನನಗೆ ಇದೆ. ಎಲ್ಲವನ್ನು ಕಾಲವೇ ನಿರ್ಣಯಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು


