ನಾನು ಕೂಡಾ ಡಿಸಿಸಿ ಬ್ಯಾಂಕ ಅಧ್ಯಕ್ಷ ಪದವಿ ಆಕಾಂಕ್ಷಿ : ಮಹಾಂತೇಶ ದೊಡ್ಡಗೌಡರ 

Ravi Talawar
ನಾನು ಕೂಡಾ ಡಿಸಿಸಿ ಬ್ಯಾಂಕ ಅಧ್ಯಕ್ಷ ಪದವಿ ಆಕಾಂಕ್ಷಿ : ಮಹಾಂತೇಶ ದೊಡ್ಡಗೌಡರ 
WhatsApp Group Join Now
Telegram Group Join Now
ನೇಸರಗಿ.ಇಲ್ಲಿನ  ದಿ. ಬೆಳಗಾವಿ ಜಿಲ್ಲಾ ಮಧ್ಯವರ್ತಿ ಕೇಂದ್ರ ಸಹಕಾರಿ (BDCC) ಬ್ಯಾಂಕನ್ ನಿರ್ದೇಶಕ ಸ್ಥಾನಕ್ಕೆ ಬೈಲಹೊಂಗಲ ತಾಲೂಕಿನಿಂದ ಅಧಿಕೃತವಾಗಿ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರು  ಆಯ್ಕೆಯಾಗಿ ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದರು.
   ಪ್ರಮಾಣ ಪತ್ರ ಸ್ವೀಕಾರ ಮಾಡಿ ಮಹಾಂತೇಶ ದೊಡ್ಡಗೌಡರ ಮಾತನಾಡಿ  ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬೈಲಹೊಂಗಲ ತಾಲೂಕಿನಿಂದ ನನ್ನನ್ನು ಆಯ್ಕೆ ಮಾಡಲು ಬೆಂಬಲ ನೀಡಿದ ಬೈಲಹೊಂಗಲ ಪಿ.ಕೆ.ಪಿ.ಎಸ್. ಸಹಕಾರಿ ಸಂಘಗಳ ಮತದಾರರು,ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು, ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ನಾಯಕರಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿದ ರೈತ ಸಹೋದರರಿಗೆ ನಾನು  ಅಭಾರಿ ಎಂದರು.
   ಕಿತ್ತೂರು, ಬೈಲಹೊಂಗಲ ತಾಲೂಕಾ ಜನರೊಂದಿಗೆ ಸದಾ ಬೆರೆತು ಕೆಲಸ ಮಾಡುತ್ತೇನೆ. ಸಹಕಾರಿ ಸಭಲಿಕರಣ ಮಾಡಲು ಶ್ರಮಿಸುತ್ತೇನೆ . ಎಲ್ಲ ಸಹಕಾರ ಸಂಘಗಳ ಬೇಡಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಮಹಾಮಂಡಲದ ನಿರ್ದೇಶಕರಾಗಿ ಬೀಜ ವಿತರಣೆ, ರಾಸಾಗೊಬ್ಬರ ವಿತರಣೆ, ಹಂತ ಹಂತವಾಗಿ ಆಡಳಿತ ಮಂಡಳಿ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ. ಸಂಘಕ್ಕೆ ಕೇಂದ್ರ ಸರ್ಕಾರದ  ಯೋಜನೆಯ ಗೋಡಾವನ, ಕಿತ್ತೂರು ತಾಲೂಕಿನಲ್ಲಿ  ಎರಡು ಮತಗಳ  ಅನೈತಿಕ ಸೋಲಾಗಿದೆ,  ಪಿತ್ತೂರಿ ಮಾಡಿ ನಮ್ಮ ಜೊತೆ ಇದ್ದವರೇ ನಮ್ಮಗೆ ಮೋಸ ಮಾಡಿ ವಿಕ್ರಂ ಇನಾಮದಾರ ಅವರನ್ನು ಸೋಲಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮುನ್ನಡೆಯುತ್ತಾರೆ. ಬಸವರಾಜ ಪರವಣ್ಣವರ ಅವರು ಯಾರ ಮಾರ್ಗದರ್ಶನದಲ್ಲಿ ನಮ್ಮ ವಿರೋಧಿಯಾಗಿ ಕೆಲಸ ಮಾಡಿದ್ದಾರೆ ಗೊತ್ತಿಲ್ಲ.
      ನಾನು ಕೂಡಾ  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಬೇಕು ಎಂಬ ಅಸೆ ಇದೆ. ನನ್ನ ಅನುಭವದ ಕುರಿತು ಎಲ್ಲ ಮುಖಂಡರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡುತ್ತೇನೆ. ನನ್ನ ಹಾಗೆ ಎಲ್ಲ 16 ಜನ ಡಿಸಿಸಿ ಬ್ಯಾಂಕ ಅಧ್ಯಕ್ಷ ಆಗಲು ಬಯಸುತ್ತಾರೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ರೈತ ಪರ ಕೆಲಸಗನ್ನು ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನಲ್ಲಿ ಕೆಲಸ ಮಾಡುತ್ತೇನೆ. ಬಿಜೆಪಿ ಪಕ್ಷದ ಸಂಘಟನೆ ದೃಷ್ಟಿಯಿಂದ ಕಿತ್ತೂರು ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದಂಡು ಒಳ್ಳೆಯ ರೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಇಂದಿನಿಂದಲೇ ಕಾರ್ಯಕರ್ತ ಜೊತೆ ನಿಂತು ನಾನು ಹಾಗೆ ಬೇರೆ ಯಾರೇ ಬಿಜೆಪಿ ಅಭ್ಯರ್ಥಿ  ಆದರೂ ಮುಂದಿನ 2028 ರ ವಿಧಾನ ಸಭೆ ಚುನಾವಣೆಯಲ್ಲಿ ತಾಯಿ ಚನ್ನಮ್ಮಾಜಿ ಪ್ರತಿಮೆ ಮುಂದೆ ಬಿಜೆಪಿ ಧ್ವಜವನ್ನು ಖಂಡಿತವಾಗಿ ಹಾರಿಸಿ ಕಿತ್ತೂರು ಕ್ಷೇತ್ರದಿಂದ ಬಿಜೆಪಿ ಶಾಸಕರಾಗೋದು ಖಂಡಿತ ಎಂದರು.ಅಣ್ಣಾಸಾಹೇಬ ಜೊಲ್ಲೆ ಹಾಗೂ ನನ್ನ ಹೆಸರು ಮಾದ್ಯಮದಲ್ಲಿ ಪ್ರಸ್ತಾಪ ಆಗತಾ ಇದೆ. ಲಕ್ಷ್ಮಣ ಸವದಿ  ಹಾಗೂ ಜಾರಕಿಹೊಳಿ ಇಬ್ಬರು ನಮ್ಮ ಮುಖಂಡರು ಎಂದು ದೊಡ್ಡಗೌಡರ ಹೇಳಿದರು.
WhatsApp Group Join Now
Telegram Group Join Now
Share This Article