ಬೆಂಗಳೂರು,ಅ.15: ಬೆಂಗಳೂರು ದೊಡ್ಡಬಳ್ಳಾಪೂರ ಬೇಸಂಟ ಪಾರ್ಕದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ ಮತ್ತು ವಿಜ್ಞಾನ & ತಂತ್ರಜ್ಞಾನ ಇಲಾಖೆ,ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ನಡೆದ ಸ್ಥಳದಲ್ಲಿಯೇ ದೂರದರ್ಶಕ ತಯಾರಿಸುವ “ನಾನೂ ವಿಜ್ಞಾನಿ 2025” ಕಮ್ಮಟದಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೂಡಲಗಿ ಶೈಕ್ಷಣಿಕ ವಲಯದ ಪಾಮಲದಿನ್ನಿ ಗ್ರಾಮದ ಶ್ರೀಮತಿ ವಿಜಯಶಾಲಿನಿ ವೀರಪ್ಪಾ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಗಳಾದ ಶ್ರಾವಂತಿ ದಂಡಿನ ಮತ್ತು ಕೀರ್ತಿ ಕಮತಿ ವಿಶ್ವದಾಖಲೆಯ ಇಂಡಿಯಾ ಬುಕ್ಕ ರೆಕಾರ್ಡ, ವರ್ಲ್ಡ್ ಬುಕ್ ಆಫ್ ರೆಕಾರ್ಡ, ಏಷಿಯಾ ಬುಕ ಆರ್ಪ ರೆಕಾರ್ಡ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೊಟ್ಟಿದ್ದ ಪ್ರಶಸ್ತಿ ಮತ್ತು ಮೆಡಲ್‌ನ್ನು ಇಸ್ರೋ ಹಿಂದಿನ ಚೇರಮನ್ನರಾದ ಡಾ. ಕಿರಣಕುಮಾರ & ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ ಅವರು ವಿದ್ಯಾರ್ಥಿನಿಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಮಾರುತಿ ವಿಜಯನಗರ, ರಾಜಾರಾಮ ವಾಲಿಕಾರ,ಶಿವಾನಂದ ಪಾಟೀಲ, ತೇಜಸ್ವಿನಿ ಮಾರುತಿ ವಿಜಯನಗರ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ ನಿರ್ದೇಶಕರಾದ ಬಸವರಾಜ ಹಟ್ಟಿಗೌಡರ ಇತರರು ಪಾಲ್ಗೊಡಿದ್ದರು.