ಹೈದರಾಬಾದ್ ಬಾಂಬ್​ ಸ್ಫೋಟ ಪ್ರಕರಣ; ಯಾಸಿನ್‌ ಸೇರಿ ಐವರಿಗೆ ಮರಣ ದಂಡನೆ; ತೆಲಂಗಾಣ ಹೈಕೋರ್ಟ್‌ ಸಮ್ಮತಿ

Ravi Talawar
ಹೈದರಾಬಾದ್ ಬಾಂಬ್​ ಸ್ಫೋಟ ಪ್ರಕರಣ; ಯಾಸಿನ್‌ ಸೇರಿ ಐವರಿಗೆ ಮರಣ ದಂಡನೆ; ತೆಲಂಗಾಣ ಹೈಕೋರ್ಟ್‌ ಸಮ್ಮತಿ
WhatsApp Group Join Now
Telegram Group Join Now

ತೆಲಂಗಾಣ, ಏಪ್ರಿಲ್ 09: ಹೈದರಾಬಾದ್​ನಲ್ಲಿ 2013ರಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್​ ಭಟ್ಕಳ್(Yasin Bhatkal) ಸೇರಿ ಐವರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್​ ಎತ್ತಿಹಿಡಿದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ನ ಐವರು ಭಯೋತ್ಪಾದಕರ ಮರಣದಂಡನೆ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.  ಈ ಭಯೋತ್ಪಾದಕರು 2013 ರ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು, ಇದರಲ್ಲಿ 18 ಜನರು ಸಾವನ್ನಪ್ಪಿದ್ದರು ಮತ್ತು 131 ಜನರು ಗಾಯಗೊಂಡಿದ್ದರು.

ಇದಕ್ಕೂ ಮೊದಲು ಡಿಸೆಂಬರ್ 13, 2016 ರಂದು ಐಎಂ ಸಹ ಸಂಸ್ಥಾಪಕ ಮೊಹಮ್ಮದ್ ಅಹ್ಮದ್ ಸಿದ್ದಿಬಾಪಾಯಾಸ ಅಲಿಯಾಸ್ ಯಾಸಿನ್ ಭಟ್ಕಳ್, ಪಾಕಿಸ್ತಾನಿ ಪ್ರಜೆ ಜಿಯಾ-ಉರ್-ರೆಹಮಾನ್ ಅಲಿಯಾಸ್ ವಕಾಸ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಮೊನ್ಜಾ ಹದ್ದಿ ಸೇರಿದಂತೆ ಐವರು ಸದಸ್ಯರನ್ನು ಎನ್‌ಐಎ ನ್ಯಾಯಾಲಯ ದೋಷಿ ಎಂದು ಘೋಷಿಸಿತ್ತು.

WhatsApp Group Join Now
Telegram Group Join Now
Share This Article