ಜೂಜಾಟದಲ್ಲಿ ಹೆಂಡತಿ ಅಡವಿಟ್ಟು ಸೋತ ಗಂಡ; ಮಾವ, ಮೈದುನ ಸೇರಿ 8 ಮಂದಿ ಅತ್ಯಾಚಾರ

Ravi Talawar
ಜೂಜಾಟದಲ್ಲಿ ಹೆಂಡತಿ ಅಡವಿಟ್ಟು ಸೋತ ಗಂಡ; ಮಾವ, ಮೈದುನ ಸೇರಿ 8 ಮಂದಿ ಅತ್ಯಾಚಾರ
WhatsApp Group Join Now
Telegram Group Join Now

ಬಾಗ್​ಪತ್, ನವೆಂಬರ್ 17: ಗಂಡನಿಗೆ ಜೂಜಾಡುವ ಚಟ, ಹಣ ಸಾಲದ್ದಕ್ಕೆ ಹೆಂಡತಿ ಯನ್ನೇ ಅಡವಿಟ್ಟು ಸೋತು ಆಕೆಯ ಜೀವನವನ್ನೇ ಹಾಳು ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಮಹಿಳೆ ಮೀರತ್​ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬುವವರನ್ನು ಮದುವೆಯಾಗಿದ್ದಳು. ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ಪತಿ ಮತ್ತು ಅತ್ತೆ ಮಾವ ನಿರಂತರ ದೈಹಿಕ ಹಿಂಸೆ ನೀಡಲು ಶುರು ಮಾಡಿದ್ದರು. ವರದಕ್ಷಿಣೆ ತೆಗೆದುಕೊಂಡು ಬರುವಂತೆ ನಿರಂತರ ಕಿರುಕುಳ ನೀಡುತ್ತಿದ್ದರು. ಹಲ್ಲೆ ನಿರಂತರವಾಗಿ ಮುಂದುವರೆದಿತ್ತು.

ಅಷ್ಟೇ ಅಲ್ಲದೆ ಸಂತ್ರಸ್ತೆ ಮೇಲೆ ಗಂಡನ ಅಣ್ಣ ಶಾಹಿದ್ ಹಾಗೂ ಅತ್ತಿಗೆಯ ಪತಿ ಶೌಕೀನ್ ಕೂಡ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ. ತನ್ನ ಮಾವ ಯಾಮಿನ್ ತನ್ನ ಮೇಲೆ ಅತ್ಯಾಚಾರ ಎಸಗಿ, ನೀನು ವರದಕ್ಷಿಣೆ ತರಲಿಲ್ಲ, ಆದ್ದರಿಂದ ನಾವು ಹೇಳುವುದೆಲ್ಲವನ್ನೂ ನೀನು ಪಾಲಿಸಬೇಕು, ನಮ್ಮನ್ನು ಸಂತೋಷ ಪಡಿಸಬೇಕೆಂದು ಹೇಳಿದ್ದ.

WhatsApp Group Join Now
Telegram Group Join Now
Share This Article