ಹೊಟ್ಟೆ ಹಸಿವು ವ್ಯಕ್ತಿಯನ್ನು ಜೀವಂತವಾಗಿರಿಸಿದರೆ ; ಆತ್ಮದ ಹಸಿವು ವ್ಯಕ್ತಿಯನ್ನು ಅಮರರನ್ನಾಗಿರುಸುತ್ತದೆ : ಪ್ರಕಾಶ ಕಮತಿ

Hasiru Kranti
ಹೊಟ್ಟೆ ಹಸಿವು ವ್ಯಕ್ತಿಯನ್ನು ಜೀವಂತವಾಗಿರಿಸಿದರೆ ; ಆತ್ಮದ ಹಸಿವು ವ್ಯಕ್ತಿಯನ್ನು ಅಮರರನ್ನಾಗಿರುಸುತ್ತದೆ : ಪ್ರಕಾಶ ಕಮತಿ
WhatsApp Group Join Now
Telegram Group Join Now

ಹೊಟ್ಟೆ ಹಸಿವಿಗಿಂತ ಆತ್ಮದ ಹಸಿವು ಮುಖ್ಯ : ಪ್ರಕಾಶ ಕಮತಿ

ಬೆಳಗಾವಿ : ನಗರದ ಗುರು ವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಭಾರತೀಯರಲ್ಲಿ ಆತ್ಮಜಾಗೃತಿ ಮೂಡಿಸಿ, ಜಡ್ಡುಗಟ್ಟಿದ ಭಾರತೀಯರ ಮನಸ್ಸಿಗೆ ನವಚೈತನ್ಯವನ್ನು, ಸ್ವಾಭಿಮಾನವನ್ನು ತುಂಬಿದರು. ಭಾರತೀಯರ ಆತ್ಮಾಭಿಮಾನವನ್ನು ಬಡಿದೆಬ್ಬಿಸಿ, ಅವರಲ್ಲಿರುವ ರಾಷ್ಟ್ರೀಯತೆಯನ್ನು ಜಾಗೃತಗೊಳಿಸಿ, ನಿರ್ಗತಿಕರ ಸೇವೆಯೇ ಪರಮಾತ್ಮನ ಸೇವೆ ಎಂದು ಬಗೆದರು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತದ ಸಮಾಜ, ಸಂಸ್ಕೃತಿ, ತತ್ವಶಾಸ್ತ್ರದ ಬಗ್ಗೆ ಅಪಾರವಾದ ಗೌರವ ಮೂಡಿಸಿದರು. ಭಾರತದ ಅಂತರಾತ್ಮವನ್ನು ಎಚ್ಚರಿಸಿ ಆ ಮೂಲಕ ಆಧ್ಯಾತ್ಮಿಕ, ಸಾಮಾಜಿಕ ಕ್ರಾಂತಿಯನ್ನು ಮೊಳಗಿಸಿದ ವೀರ ಸನ್ಯಾಸಿಯ ತ್ಯಾಗ ಗುಣಗಳನ್ನು ನಾವು ಅಳವಡಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.

ಸಮಾಜ ಸೇವಕ ಸುರೇಶ ಯಾದವ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತವನ್ನು ಬೆಳಗಿದ ಮಹಾನ್ ಸಂತ. ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕತೆಯನ್ನು ವಿಶ್ವದ ವೇದಿಕೆಯಲ್ಲಿ ಪಸರಿಸಿದರು. ವಿದೇಶಿಗರಲ್ಲಿ ಭಾರತೀಯರ ಬಗ್ಗೆ ಇರುವ ಕಪೋಲಕಲ್ಪಿತ ಕಥೆಗಳನ್ನು ತಮ್ಮ ಮಾತುಗಳ ಮೂಲಕ ತಿಲಾಂಜಲಿ ಹೇಳಿದರು. ಸಮಾಜ ಸೇವೆ ಎಂಬುದು ಆಯ್ಕೆ ಆಗದೇ ಅದು ನಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದು. ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ವ್ಯಕ್ತಿಯೂ ಸಾಧ್ಯವಾದಷ್ಟು ದೀನರ, ನಿರ್ಗತಿಕರ ಸೇವೆ ಮಾಡಬೇಕೆಂದು ಕರೆ ನೀಡಿದರು. ಅವರ ಸೇವಾಕಾರ್ಯವನ್ನು ಸಮಾಜ ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಅವರು ಸ್ವಾಮಿ ವಿವೇಕಾನಂದರು ಜಾತಿ-ಮತ ತಾರತಮ್ಯವನ್ನು ವಿರೋಧಿಸಿ, ಪ್ರತಿಯೊಬ್ಬರ ಉನ್ನತಿಯನ್ನು ಪ್ರತಿಪಾದಿಸಿದರು. ಮಹಿಳೆಯರ ಜೀವನವು ಉತ್ತಮವಾಗಬೇಕಾದರೆ ಅವರಿಗೆ ಉತ್ತಮ ಶಿಕ್ಷಣವನ್ನು ಕೊಡಬೇಕು. ದೀನದಲಿತರ ಉದ್ಧಾರದಲ್ಲಿ ದೇಶದ ಏಳಿಗೆಯಿದೆ. ಇದರ ಕುರಿತು ರಾಜ-ಮಹಾರಾಜರಲ್ಲಿ, ಸಮಾಜದ ಗಣ್ಯರಲ್ಲಿ, ವಿದ್ಯಾವಂತರಲ್ಲಿ ಜಾಗೃತಿಯನ್ನು ಮೂಡಿಸಿದರು. ಸ್ವಾವಲಂಬನೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಭಾರತೀಯರಲ್ಲಿ ತರಬೇಕಾದರೆ, ಅದು ಈ ನೆಲದ ಆಧ್ಯಾತ್ಮಿಕ, ಸಂಸ್ಕೃತಿತ ಶಕ್ತಿಯಿಂದ ಮಾತ್ರ ಸಾಧ್ಯ ಎಂಬುದು ಸ್ವಾಮಿ ವಿವೇಕಾನಂದರ ಅಭಿಮತವಾಗಿತ್ತು. ಹಾಗಾಗಿ ಪ್ರತಿಯೊಬ್ಬರು ಇವು ಭೂತಕಾಲದ ಪರಂಪರೆ ಎಂದು ನೋಡದೇ ಅವು ಭಾರತದ ಭವಿಷ್ಯವನ್ನು ರೂಪಿಸುವ ಶಕ್ತಿ ಎಂದು ಅರಿತುಕೊಂಡು ಸುದೃಢ ಭಾರತವನ್ನು ಕಟ್ಟಲು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ರಾಜೇಶ ಗೌಡ, ಸತೀಶ ಮನ್ನಿಕೇರಿ, ಆನಂದ ಶೆಟ್ಟಿ, ಭಾರತಿ ಶೆಟ್ಟಿಗಾರ, ರೂಪಾ ಮಗದುಮ್ಮ, ಗಣೇಶ ಮರಕಲ, ಭೈರೋಬಾ ಕಾಂಬ್ಳೆ, ದುರ್ಗಪ್ಪ ತಳವಾರ, ಗಣೇಶ ನಾಯಕ, ಚಂದ್ರಕಾಂತ ಅಥಣಿಮಠ ಹಾಗೂ ಸಂಘದ ಸಿಬ್ಬಂದಿಗಳು ಮತ್ತು ಸ್ವಾಮಿ ವಿವೇಕಾನಂದರ ಭಕ್ತವೃಂದವು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ಸ್ವಾಗತಿಸಿದರು, ಸಮ್ಮೇದ ಗಾಡೇಕರ ನಿರೂಪಿಸಿದರು, ರಘುನಾಥ ಗಾವಡೆ ವಂದಿಸಿದರು.

WhatsApp Group Join Now
Telegram Group Join Now
Share This Article