ದರೂರು ಶ್ರೀ ವೀರಭದ್ರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹುಂಡಿ ಎಣಿಕೆ 5,07,662/ ರೂ ಸಂಗ್ರಹ

A B
By A B
ದರೂರು ಶ್ರೀ ವೀರಭದ್ರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹುಂಡಿ ಎಣಿಕೆ 5,07,662/ ರೂ ಸಂಗ್ರಹ
WhatsApp Group Join Now
Telegram Group Join Now
ಬಳ್ಳಾರಿ. ಮಾ. 09.. ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹುಂಡಿಯನ್ನು ಇಂದು ತೆಗೆಯಲಾಗಿದ್ದು ಅದರಲ್ಲಿ 5,07,662/ ರೂ ಸಂಗ್ರಹವಾಗಿದೆ ಎಂದು ಸೆಲ್ವಮಣಿ ತಿಳಿಸಿದ್ದಾರೆ
ಈ ದಿನ  ಬೆಳಿಗ್ಗೆ 11ಗಂಟೆಗೆ ಬಳ್ಳಾರಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯಾದ  ಸೇಲ್ವಮನಿ, ಇವರು ದರೂರು ವೀರಭದ್ರ  ಸ್ವಾಮಿ ಪುಣ್ಯಕ್ಷೇತ್ರದ ಹುಂಡಿಗಳ ಬೀಗದ ಕೀಲಿಗಳನ್ನು  ದೇವಸ್ಥಾನದ ಪ್ರಧಾನ ಅರ್ಚಕರ ವ್ಯವಸ್ಥಾಪನ ಸಮಿತಿಯ ಹಾಗು ಭಕ್ತರ ಸಮ್ಮುಖದಲ್ಲಿ  ಕರೂರು ಕರ್ನಾಟಕ ಗ್ರಾಮೀಣ ಬ್ಯಾಂಕಿನವರ ಮತ್ತು ಸಿರಿಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ  ಎಲ್ಲಾ ಹುಂಡಿಗಳ  ಕೀಲಿಗಳನ್ನು ತೆಗೆದು ಹಣವನ್ನು ಸಂಪೂರ್ಣವಾಗಿ ಎಣಿಕೆ ಮಾಡಲಾಗಿ  ಸಂಗ್ರಹ ಗೊಂಡ  507,662/ರೂಪಾಯಿಗಳನ್ನು ಕರೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪುಣ್ಯ ಕ್ಷೇತ್ರದ ಖಾತೆಗೆ ಜಮೆ ಮಾಡಲಾಯಿತು.
 ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಗೌಡ,  ಮತ್ತು ಕಾರ್ಯದರ್ಶಿ ಟೀ. ವೀರನಗೌಡ.  ಸಮಿತಿ ಸದಸ್ಯರು, ಮತ್ತು  ಪೂಜಾರಿ ವೀರೇಶಯ್ಯ ಸ್ವಾಮಿ, ತಳವಾರ್ ದುರ್ಗಣ್ಣ  , ಬಡಿಗೇರ ಪಂಪಾಪತಿ, ಕೆಂಪಣ್ಣನವರ ವೀರೇಶ್ ನಾಯಕ್ , ಕುರುಬರ ಪೂಜಾರಿ ಮಲ್ಲಯ್ಯ ,ಮರಿಬಸಪ್ಪ ನಾಯಕ,ವಿನೋದ್ ಗೌಡ, ಮೇಟಿ ಪಂಪನಗೌಡ , ಲೆoಕೆರ್  ಕಲ್ಲಪ್ಪ ನಾಯಕ, ಎಂ.ವೀರಭದ್ರ ನಾಯಕ್, ಕುರುಬರ ಆಗ್ಲೂರಪ್ಪ , ತಿಪ್ಪೇರುದ್ರ ಗೌಡ, ತಳವಾರ್ ಉಮೇಶ್ ನಾಯಕ್, ದೇವಟ್ಟಿಗೆ ಮಲ್ಲಿಕಾರ್ಜುನ, ಕೆ. ವೀರೇಶ್ ನಾಯಕ್, ಕೆಂಪಣ್ಣನವರ ರುದ್ರ ನಾಯಕ್  ಸೇರಿದಂತೆ ಹಲವಾರು ಜನ ಭಕ್ತರಿದ್ದರು.
WhatsApp Group Join Now
Telegram Group Join Now
Share This Article