ಇಂಡಿ: ಶಿಕ್ಷಣ ಸಂಸ್ಥೆಗಳು ಪ್ರಗತಿ ಪಥದತ್ತ ಸಾಗಬೇಕಾದರೆ ಆಡಳಿತ ಮಂಡಳಿ ಶ್ರಮ ಸಾಲದು ಅಲ್ಲಿನ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಎಚ್.ಎಮ್.ಬಿಳ್ವಾರ ಅವರ ಅನುಪಮ ಸೇವೆ ಕೂಡಾ ಒಂದಾಗಿದೆ ಎಂದರೆ ತಪ್ಪಾಗಲಾರದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ನಗರದ ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರೌಡ ಶಾಲೆಯ ದೈಹಿಕ ಶಿಕ್ಷಕ ಹುಮಾಯುನ್ ಬಿಳವಾರ ವಯೋನಿವೃತ್ತಿ ಪ್ರಯುಕ್ತ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೇಲವ ವಿದ್ಯಾರ್ಥಿಗಳ ಜೊತೆ ಗುರು ಶಿಷ್ಯರ ಸಂಬAದ ಹೊಂದದೆ ಸ್ನೇಹಮಯಿಯಾಗಿ ಒಡನಾಟ ಬೆಳಸಿಕೊಂಡ ಸರಳ ಸಜ್ಜನಿಕೆಗೆ ಇನ್ನೊಂದು ಹೇಸರೆ ಬಿಳವಾರ ಅವರಾಗಿದ್ದರು. ದೈಹಿಕ ಶಿಕ್ಷಕರಾಗಿದ್ದರು ಸಹ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಬಹಳವಿದೆ. ಅವರಿಗೆ ನೂರು ವರ್ಷ ಆಯುಷ್ಯ ನೀಡಲಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೆನೆ ಎಂದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಿ ಮುಂಬರುವ ಪರಿಕ್ಷೇಯ ತಯಾರಿಯನ್ನು ಈಗಿನಿಂದಲೆ ಪ್ರಾರಂಭಿಸಿ. ತಳಹಂತದ ಮಹತ್ವ ಪರಿಕ್ಷಯಾಗಿದ್ದು ಇದನ್ನು ಚಾಲೆಂಜಾಗಿ ಸ್ವಿಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
. ಸನ್ಮಾನ ಶ್ವಿಕರಿಸಿ ಶಿಕ್ಷಕ ಎಚ್.ಎಮ್.ಬಿಳ್ವಾರ ಮಾತನಾಡಿ ವಿದ್ಯಾರ್ಥಿಗಳ ಹಾಗೂ ಸಮಾಜದ ಒಳಿತಿಗಾಗಿ ನಾನು ಮಾಡಿರುವ ಪ್ರತಿಯೊಂದು ಕೇಲಸವು ನನ್ನ ಕರ್ತವ್ಯ ಎಂದು ಭಾವಿಸಿ ಮಾಡುತ್ತಿದ್ದೆ ಹೊರತು ಯಾವುದೆ ಉದ್ದೇದಿಂದ ಅಲ್ಲ ಎಂದರು.
ಮೌಲಾನ ಶಾಕೀರ ಹುಸೇನ ಕಾಸ್ಮಿ ಸಾನಿದ್ಯ ವಹಿಸಿದ್ದರು. ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಂಡಲಿ ಅಧ್ಯಕ್ಷ ಭೀಮಣ್ಣ ಕವಲಗಿ, ಜಿಲ್ಲಾ ಗ್ಯಾರೆಂಟಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಅನೀಸ ಫಾತಿಮಾ ಮುಜಾವರ, ಜಗದೀಶ ಕ್ಷೇತ್ರಿ, ಫಾರೂಕ ತುರ್ಕಿ ಇದ್ದರು.
ಮುಖ್ಯೋಪಾಧ್ಯಾಯ ಮುಜೀಬ ಬಾಗವಾನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


