ಹಣಕ್ಕಿಂತ ಮಾನವೀಯ ಗುಣ ಮುಖ್ಯ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

Ravi Talawar
ಹಣಕ್ಕಿಂತ ಮಾನವೀಯ ಗುಣ ಮುಖ್ಯ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
WhatsApp Group Join Now
Telegram Group Join Now

ಹುಕ್ಕೇರಿ:  ಮಾನವೀಯ ಗುಣವೇ ನಿಜವಾದ ಸಂಪತ್ತು ಜೀವನದಲ್ಲಿ ಹಣ ಗಳಿಸುವುದೊಂದೇ ಮುಖ್ಯವಲ್ಲ. ಹಣಕ್ಕಿಂತ ಮಾನವೀಯ ಗುಣಗಳನ್ನು ಬೆಳೆಸಿಕೊಂಡರೆ ಇದಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ.  ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ವಿವೇಕಾನಂದ ಸಭಾ ಭವನದಲ್ಲಿ   ಆಯೋಜಿಸಿದ ಮಹಾವೀರ ನಿಲಜಗಿ ಫೌಂಡೇಶನ್ ಪ್ರಾರಂಭೋತ್ಸವ, ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘದ ಬೆಳ್ಳಿ ಹಬ್ಬದ ಮಹೋತ್ಸವ ಮತ್ತು ಅವರ 54ನೇ ಹುಟ್ಟು ಹಬ್ಬದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಮೂಲಕ ಸಹಕಾರ, ಶಿಕ್ಷಣ, ಧಾರ್ಮಿಕ, ರಾಜಕೀಯ, ಬ್ಯಾಂಕಿAಗ್, ಎಲೆಕ್ಟ್ರ್ ನಿಕ್, ಸಾಮಾಜಿಕ ಕ್ಷೇತ್ರದಲ್ಲಿ ಮಹಾವೀರ ನಿಲಜಗಿ ಅವರು ಈಗಾಗಲೇ ಅಮೂಲ್ಯ ಸೇವೆ ಸಲ್ಲಿಸಿದ್ದು ಅದರ ಮುಂದುವರೆದ ಭಾಗವಾಗಿ ಮತ್ತಷ್ಟು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ಇದೀಗ ಫೌಂಡೇಶನ್ ಸ್ಥಾಪಿಸಿದ್ದಾರೆ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಸಮಾರಂಭ ಉದ್ಘಾಟಿಸಿದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷರೂ ಆದ ಪುರಸಭೆ ಹಿರಿಯ ಸದಸ್ಯ ಮಹಾವೀರ ನಿಲಜಗಿ ಮಾತನಾಡಿ, ನಿರ್ಗತಿಕರು, ಬಡ, ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಾಗಿ ಹುಕ್ಕೇರಿಯಲ್ಲಿ ಶೀಘ್ರವೇ ಮಹಾವೀರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ದಿನಬಳಕೆ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಮಾರಾಟ ಮಳಿಗೆ, ಬಡ ವಿದ್ಯಾರ್ಥಿಗಳಿಗಾಗಿ ಐಎಎಸ್, ಐಎಫ್‌ಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೋಚಿಂಗ್ ಸೆಂಟರ್ ಆರಂಭಿಸಲಾಗುವುದು ಎಂದರು.

ಇದೇ ವೇಳೆ ನ್ಯಾಯಾಂಗ ಕ್ಷೇತ್ರದಿಂದ ಹಿರಿಯ ನ್ಯಾಯವಾದಿ ಪಿ.ಆರ್.ಚೌಗಲಾ, ವೈದ್ಯಕೀಯ ಕ್ಷೇತ್ರದಿಂದ ಡಾ.ರಮೇಶ ದೊಡಭಂಗಿ, ಡಾ.ಸಂಜೀವ ಪಾಟೀಲ, ಕೃಷಿ ಕ್ಷೇತ್ರದಿಂದ ಪ್ರಗತಿಪರ ರೈತ ಕೆಂಪಣ್ಣಾ ದೇಸಾಯಿ, ಸಹಕಾರಿ ಕ್ಷೇತ್ರದಿಂದ ವಿರುಪಾಕ್ಷಿ ಚೌಗಲಾ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿವೇಕಾನಂದ  ಶಿಕ್ಷಣ ಸಂಸ್ಥೆಯ  ಅಧ್ಯಕ್ಷ ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ  ವಿಜಯಮಾಲಾ, ನಿಲಜಗಿ,  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ, ಸಿಪಿಐ ಮಹಾಂತೇಶ ಬಸಾಪುರ,  ಮುಖಂಡರಾದ ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಸಂಜಯ ನಿಲಜಗಿ, ರಾಜು ಶೆಟ್ಟಿ, ಸಂಜು ಖತಗಲ್ಲಿ, ಅಪ್ಪಾಸಾಹೇಬ ಚೌಗಲಾ, ರಾಜೇಂದ್ರ ಪಾಟೀಲ, ಸಂತೋಷ ರಜಪೂತ, ಸಂಗಮೇಶ ಕರಹೊನ್ನವರ ಮತ್ತಿತರರು ಉಪಸ್ಥಿತರಿದ್ದರು. ಪ್ರಜ್ವಲ ನಿಲಜಗಿ ಸ್ವಾಗತಿಸಿದರು. ಅಂಜನಾ ಗುಗ್ಗಳಿ ನಿರೂಪಿಸಿದರು. ನಿರ್ಮಲಾ ಪಾಟೀಲ ವಂದಿಸಿದರು.

ಪೋಟೋ ಶಿರ್ಷಿಕೆ 18-ಹುಕ್ಕೇರಿ01

ಹುಕ್ಕೇರಿ ಪಟ್ಟಣದ ವಿವೇಕಾನಂದ ಸಭಾ ಭವನದಲ್ಲಿ   ಆಯೋಜಿಸಿದ ಮಹಾವೀರ ನಿಲಜಗಿ ಫೌಂಡೇಶನ್ ಪ್ರಾರಂಭೋತ್ಸವ, ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘದ ಬೆಳ್ಳಿ ಹಬ್ಬದ ಮಹೋತ್ಸವದಲ್ಲಿ  ಪಾಲ್ಗೊಂಡಿರುವ  ಶ್ರೀಗಳು ಹಾಗೂ ಗಣ್ಯರು,

WhatsApp Group Join Now
Telegram Group Join Now
Share This Article