ಗದಗ: ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ತಾಲ್ಲೂಕಿನ ಹುಯಿಲಗೋಳ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರೆ ಮಂಗಳವಾರದಿAದ ಆರಂಭವಾಗಿದೆ.
ದೇವಸ್ಥಾನವು ವಿದ್ಯುತ್ ದೀಪಗಳ ಅಲಂಕಾರದಿAದ ಝಗಮಗಿಸುತ್ತಿದ್ದು, ಗ್ರಾಮದ ಮಹಿಳೆಯರು ಶ್ರೀ ದೇವಿಗೆ ಉಡಿ ತುಂಬುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ಸಾಂಪ್ರದಾಯಿಕ ಆಚರಣೆ: ಇನ್ನು ಕಳೆದ ಮೂರು ವರ್ಷದ ಹಿಂದೆ ಕೋವಿಡ್ ಕಾರಣದಿಂದ ಸಂಕ್ಷಿಪ್ತವಾಗಿ ಜಾತ್ರೆ ನಡೆಸಲಾಗಿತ್ತು.
ಪ್ರಸ್ತುತ ಏಳು ವರ್ಷಗಳ ಬಳಿಕ ಇದೀಗ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು, ನಾಡಿನ ವಿವಿಧೆಡೆ ನೆಲೆಸಿರುವ ಗ್ರಾಮಸ್ಥರು ಇದೀಗ ಗ್ರಾಮಕ್ಕೆ ಆಗಮಿಸಿ, ದೇವಿಯ ದರ್ಶನ ಮಾಡುತ್ತಿದ್ದಾರೆ.
ಸಾಂಪ್ರದಾಯಿಕ ಆಚರಣೆ: ಇನ್ನು ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ದುರ್ಗಾ ದೇವಿ ಜಾತ್ರೆಯಲ್ಲಿ ಸಾಂಪ್ರದಾಯಿಕ ಆಚರಣೆಗಳು ಸಾಂಗವಾಗಿ ನಡೆದವು. ಭಕ್ತರು ತಮ್ಮ ಹರಕೆ ತೀರಿಸುವ ಕೆಲಸದಲ್ಲಿ ಮಗ್ನರಾಗಿದ್ದರು.
ಹೋಳಿಗೆ ಊಟ: ಜಾತ್ರೆಯ ಎರಡನೇ ದಿನವಾದ ಬುಧವಾರವೂ ಮಹಾ ಅನ್ನಸಂತರ್ಪಣೆ ನಡೆಯಿತು. ಬುಧವಾರದ ಅನ್ನಸಂತರ್ಪಣೆಯಲ್ಲಿ ಗ್ರಾಮಸ್ಥರು ಹೋಳಿಗೆ ಊಟ ಸವಿದರು.
ಇಂದು ಬೂಂದಿ ಊಟ: ಇನ್ನು ಜಾತ್ರೆಯ ಮೂರನೇ ದಿನವಾದ ಗುರುವಾರ ಬೂಂದಿಯ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹುಯಿಲಗೋಳ ಗ್ರಾಮದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿಪ್ಪುಸುಲ್ತಾನ ನದಾಫ, ಮುಖಂಡರಾದ ಶರಣಪ್ಪ ಕಡಿಯವರ, ಮುತ್ತು ಪಡೇಸೂರ, ರಮೇಶ ಬೆಳಗಟ್ಟಿ, ಸಂಗಪ್ಪ ಮಾರನಬಸರಿ, ಶೇಖಪ್ಪ ಹಂಚಿನಾಳ, ಬಸನಪ್ಪ ಮಾಗಡಿ, ಲಕ್ಷö್ಮಣ ನೀರಲಗಿ, ಎಲ್.ಬಿ. ಅಂಗಡಿ ಸೇರಿ ಹಲವು ಯುವಕರ ಪಡೆ ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ಹುಯಿಲಗೋಳ: ದುರ್ಗಾದೇವಿ ಜಾತ್ರೆ ಸಂಭ್ರಮ; ಹೋಳಿಗೆ ಊಟ ಸವಿದ ಭಕ್ತರು
