ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ಧ ಸುಳ್ಳು ಹಲ್ಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಅಥಣಿಯಲ್ಲಿ ಬೃಹತ್ ಪ್ರತಿಭಟನೆ

Hasiru Kranti
ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ಧ ಸುಳ್ಳು ಹಲ್ಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಅಥಣಿಯಲ್ಲಿ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

ಅಥಣಿ: ಶಾಸಕ ಲಕ್ಷ್ಮಣ ಸವದಿ ವಿರುದ್ದು ಕಾಣದ ಕೈಗಳು ಕೆಲಸ ಮಾಡುತ್ತಿವೆ. ರಾಜಕೀಯ ಷಡ್ಯಂತ್ರ ಹಿನ್ನಲೆಯಲ್ಲಿ ಸುಳ್ಳು ಹಲ್ಲೆ ಆರೋಪಗಳನ್ನು ಸವದಿ ಕುಟುಂಬದ ವಿರುದ್ದ ಮಾಡಲಾಗುತ್ತಿದೆ. ಇಂತಹ ಘಟನೆಗಳನ್ನು ಅಥಣಿ ಕ್ಷೇತ್ರದ ಜನರು ಸಹಿಸುವದಿಲ್ಲ ಎಂದು ಶಿವು ಗುಡ್ಡಾಪೂರ ಹೇಳಿದರು
ಅಥಣಿ ಪಟ್ಟಣದಲ್ಲಿ ಸೋಮವಾರ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಸುಪತ್ರ ಚಿದಾನಂದ ಸವದಿ ಅವರು ಬಿಡಿಸಿಸಿ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೇಣ್ಣವರ ಸುಳ್ಳು ಹಲ್ಲೆ ಆರೋಪ ಖಂಡಿಸಿ ಅಥಣಿ ಮತಕ್ಷೇತ್ರದ ಸಾವಿರಾರು ಜನ ಜಮಾವಣೆಗೊಂಡ ಸವದಿ ಬೆಂಬಲಿಗರು ಶಾಸಕರ ನಿವಾಸದಿಂದ ಪಟ್ಟಣದ ಅಂಬೇಡಕರ ವೃತ್ತದ ಮೂಲಕ ಶಿವಯೋಗಿ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಿ ರಾಜಕೀಯ ಪೀತುರಿ ಮಾಡುತ್ತಿರುವವರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಅವರಿಗೆ ಮನವಿ ಸಲ್ಲಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಸಿದರು.


ಪ್ರತಿಭಟನಾಕಾರರನ್ನು ಉದ್ದೇಶಿಸಿ ಶಿವಕುಮಾರ ಸವದಿ ಮಾತನಾಡಿ”ಇದು ಶಾಸಕ ಲಕ್ಷ್ಮಣ ಸವದಿ ಮತ್ತು ಚಿದಾನಂದ ಸವದಿ ಅವರ ರಾಜಕೀಯ ವರ್ಚಸ್ಸನ್ನು ಕುಗ್ಗಿಸಲು ವಿರೋಧಿಗಳು ಹೂಡಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಅಥಣಿ ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ಸುಳ್ಳು ಆರೋಪ ಹೊರಿಸುತ್ತಿರುವುದು ಸರಿಯಲ್ಲ” ಕ್ಷೇತ್ರದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ವಿರುದ್ದ ಹಿಂದೆ ಅನೇಕ ಬಾರಿ ಸುಳ್ಳು ಆರೋಪಗಳನ್ನು ಮಾಡಿದ್ದಾಗ ಕ್ಷೇತ್ರದ ಜನರು ಅಂತವರಿಗೆ ತಕ್ಕ ಉತ್ತರ ನೀಡಿದ್ದಾರೆ. ಶಿವಯೋಗಿಗಳ ನಾಡಿನಲ್ಲಿ ದಬ್ಬಾಳಿಕೆ ಷಡ್ಯಂತ್ರಗಳಿಗೆ ಅವಕಾಶ ಇಲ್ಲ
“ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಬೇಕು. ರಾಜಕೀಯ ದ್ವೇಷಕ್ಕಾಗಿ ಅಮಾಯಕರನ್ನು ಬಳಸಿಕೊಂಡು ಸವದಿ ಅವರ ಹೆಸರಿಗೆ ಕಪ್ಪುಚುಕ್ಕೆ ತರುವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಪುರಸಬೆ ಸದಸ್ಯರಾದ ರಾಜೂ ಗುಡೋಡಗಿ, ಸಂತೋಷ ಸಾವಡಕರ, ಯುವನಾಯಕ ಚಿದಾನಂದ ಸವದಿ, ಮುಖಂಡರಾದ ಡಾ. ಎಮ್ ಜಿ ಹಂಜಿ, ವಿಜಯಕುಮಾರ ಬುರ್ಲಿ, ಸುರೇಶ ಮಾಯಣ್ಣವರ, ಶ್ರೀಶೈಲ ಶೆಲ್ಲಪ್ಪಗೋಳ, ಪರಪ್ಪ ಸವದಿ, ಅಮೋಘ ಖೋಬ್ರಿ, ಎಸ್ ಆರ್ ಗೂಳಪ್ಪನವರ, ಮಲ್ಲೇಶ ಸವದಿ, ಡಿ ಬಿ ಠಕ್ಕಣ್ಣವರ. ಸುಶೀಲಕುಮಾರ ಪತ್ತಾರ,ಮಲ್ಲು ಕೂಳ್ಳೊಳ್ಳಿ, ಮುತ್ತು ಮೋಕಾಶಿ, ಸಿದ್ರಾಯ ಯಲ್ಲಡಗಿ, ರಾಜೂ ನಾಡಗೌಡ, ಸಿ ಎಸ್ ನ್ಯಾಮಗೌಡ, ಕಲ್ಲಪ್ಪ ವನಜೋಳ, ನೂರಅಹಮ್ಮದ ಡೊಂಗರಗಾಂವ, ಪ್ರಸನ್ನ ಸಗರಿ, ಮಹಾಂತೇಶ ಬಾಡಗಿ, ಮಂಜೂ ಹೋಳಿಕಟ್ಟಿ, ಬಿಪೀನ್ ತೇಜವಾಣಿ, ವಿಶ್ವನಾಥ ತೆಲಸಂಗ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು̤

filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (0.5820367, 0.5709724);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 44;
WhatsApp Group Join Now
Telegram Group Join Now
Share This Article