ಕುಕನೂರು : ಇಂದು ನೂತನ ಶಾಲಾ ಅಭಿವೃದ್ದಿ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷನನ್ನಾಗಿ ಎಲ್ಲರೂ ಸರ್ವಾನುಮತದಿಂದ ಆಯ್ಕೆಗೊಳಿಸಿದ್ದು ಅದರಂತೆ ನಾನು ಶಾಲೆಯ ಹಾಗೂ ವಿದ್ಯಾರ್ಥಿಗಳ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಮುತ್ತುರಾಜ್ ಈರಪ್ಪ ಹುಡೇದ್ ಹೇಳಿದರು.
ಅವರು ಕುಕನೂರು ತಾಲ್ಲೂಕಿನ ಕವಳಕೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 21ರ ಸೋಮವಾರದಂದು ನೂತನ SDMC ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ ತಾವೆಲ್ಲರೂ ಇಂದು ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿ
ಇಂದಿನಿಂದ ನನ್ನ ಜವಾಬ್ದಾರಿ ಹೆಚ್ಚಿಸುವಂತೆ ಮಾಡಿದ್ದೀರಿ ಅದರಂತೆ ನಾನು ಸಹಃ ಶಾಲೆಯ ಅಭಿವೃದ್ದಿಯ ಜೊತೆಗೆ ಮಕ್ಕಳ ಶೈಕ್ಷಣಿಕವಾಗಿ ಮುಂದೆ ಬರಲು ಶ್ರಮಿಸುತ್ತೇನೆ ಎಂದು ಅವರು ಹೇಳಿದರು.
ಈ ಸಭೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಮಂಜುಳಾ ನೀಲಕಂಠಪ್ಪ ಓಲೇಕಾರ್ ಆಯ್ಕೆಯಾದರು. ಉಳಿದಂತೆ 16 ಜನ ಸದ್ಯಸರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಗ್ರಾಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರ್, ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ್ ಮ್ಯಾಗಳೇಶಿ, ಸದಸ್ಯ ಶೇಖಪ್ಪ ದೊಡ್ಡಮನಿ ಕವಳಕೇರಿ, ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಲಂ ಚಳಗೇರಿ, ಸಿಬ್ಬಂದಿ ವರ್ಗ ಮಂಗಳೂರು. (ಸಿಆರ್ ಪಿ) ರವಿ ಡಿ ಮಳಗಿ, ಮುಖ್ಯ ಶಿಕ್ಷಕ
ಮುತ್ತಣ್ಣ ಕುಷ್ಟಗಿ ಶೆಟ್ಟರ್, ನಿಕಟಪೂರ್ವ SDMC ಅಧ್ಯಕ್ಷ ಲಕ್ಷ್ಮಣ್ ತಳವಾರ್, ನಿಕಟಪೂರ್ವ ಉಪಾಧ್ಯಕ್ಷ ಚನ್ನಪ್ಪ ಹಿರೇಮನಿ, ಕುಕನೂರು ಪೊಲೀಸ್ ಸಿಬ್ಬಂದಿಯವರು, ಕವಳಕೇರಿ ಗ್ರಾಮದ ಪಾಲಕರು, ಪೋಷಕರು, ಯುವಕ ಮಿತ್ರರು ಉಪಸಿತರಿದ್ದರು.