ಬೆಳಗಾವಿ. ಸ್ಫೂರ್ತಿ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಜಯಶ್ರೀ ಸೂರ್ಯವಂಶಿ ಅವರಿಗೆ ಏಷ್ಯಾ ಇಂಟರ್ನ್ಯಾಷನಲ ಕಲ್ಚರಲ ರೀಸರ್ಚ ಯೂನಿವರ್ಸಿಟಿ ಇವರಿಂದ ದಿನಾಂಕ ೨೬-೦೭-೨೦೨೫ ರಂದು ಹೊಸೂರು ,ತಮಿಳನಾಡುದಲ್ಲಿ ನಡೆದ ಗೌರವ ಡಾಕ್ಟರೇಟ್ ಪದವಿಯನ್ನು ಅವರ ವಿವಿದ ಕ್ಷೇತ್ರದಲ್ಲಿನ ಸಾಮಾಜಿಕ ಸಾಧನೆಯನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರೀಸರ್ಚ ಯೂನಿವರ್ಸಿಟಿಯ ಕುಲಪತಿಗಳು ಹಾಗೂ ಹಲವಾರು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು . ಅವರಿಗೆ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಮತ್ತು ರಾಷ್ಟ್ರೀಯ ಅಹಿಂದ ಸಂಘಟನೆಯ ಉತ್ತರ ಕರ್ನಾಟಕ ವಿಭಾಗದ ರಾಜ್ಯಾಧ್ಯಕ್ಷರಾದ ಬಾಳೇಶ ಮುನ್ನೋಳಿ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.