ಕಪ್ಪಗಲ್‌ನ ಡಾ. ಸಿ. ಮುನಿಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪದವಿ

Hasiru Kranti
ಕಪ್ಪಗಲ್‌ನ ಡಾ. ಸಿ. ಮುನಿಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪದವಿ
WhatsApp Group Join Now
Telegram Group Join Now
ಬಳ್ಳಾರಿ:ಬಳ್ಳಾರಿ 30.ತಾಲೂಕಿನ ಕಪ್ಪಗಲ್ ಗ್ರಾಮದ ಕನ್ನಡ ರಕ್ಷಣಾ ಯುವ ವೇದಿಕ ಜಿಲ್ಲಾಧ್ಯಕ್ಷರಾದ ಡಾ. ಸಿ. ಮುನಿಸ್ವಾಮಿ ಕಪ್ಪಗಲ್ ಅವರಿಗೆ ಸಮಾಜ ಸೇವೆಯ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಈ ತಿಂಗಳ 27ರಂದು ದೆಹಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜಸ್ಥಾನ ರಾಜ್ಯಪಾಲರಾದ ಕಲ್ರಾಜ್ ಮಿಶ್ರಾ, ವಿಶ್ವವಿದ್ಯಾಲಯದ ಉಪಕುಲಪತಿ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮುನಿಸ್ವಾಮಿ, ಇದು ತಮ್ಮ ಜೀವನದ ಅತ್ಯಂತ ಸಂತೋಷದ ದಿನವಾಗಿದ್ದು, ಹಲವು ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿರುವುದಕ್ಕೆ ಅಪಾರ ಸಂತೋಷವಾಗಿದೆ ಎಂದರು.
2007ರಿಂದ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿದ್ದು, 2023ರಿಂದ ವರ್ಷಕ್ಕೆ ಎರಡು ಬಾರಿ—ಆರು ತಿಂಗಳಿಗೊಮ್ಮೆ—ಉಚಿತ ವಿವಾಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
 ಇದುವರೆಗೂ ಸುಮಾರು 1600 ಜೋಡಿಗಳಿಗೆ ಉಚಿತ ವಿವಾಹಗಳನ್ನು ನೆರವೇರಿಸಲಾಗಿದೆ.
ನನ್ನ ಉಸಿರು ಇರುವವರೆಗೂ ಈ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.
ಕನ್ನಡ ರಕ್ಷಣಾ ಯುವ ವೇದಿಕ ಮೂಲಕ ಅರ್ಜಿಗಳನ್ನು ಸಲ್ಲಿಸಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ರಸ್ತೆ ದುರಸ್ತಿಗಾಗಿ ನಿರಂತರ ಹೋರಾಟ ನಡೆಸಿರುವುದಾಗಿ ತಿಳಿಸಿದರು.
 ಕಳೆದ 20 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.
ಈ ಸೇವೆಗಳನ್ನು ಗುರುತಿಸಿ, ಬೆಂಗಳೂರು ಕರ್ನಾಟಕ ಪತ್ರಿಕಾ ಸಂಘದಿಂದ ಸೇವಾ ರತ್ನ ಪ್ರಶಸ್ತಿ, Z ಟಿವಿ ಕನ್ನಡ ನ್ಯೂಸ್‌ನಿಂದ ಕರ್ನಾಟಕ ಐಎನ್ಆರ್‌ಪಿ ಪ್ರಶಸ್ತಿ, ತೆಲಂಗಾಣದಲ್ಲಿ ನಂದಿ ಪ್ರಶಸ್ತಿ, ಮುಂಬೈನಲ್ಲಿ ದಾದಾಸಾಹೇಬ್ ಪಾಲಿಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ಅವರು ಪಡೆದಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ದೊರೆತಿರುವುದು ವಿಶೇಷವಾಗಿದೆ.
ಡಾ. ಮುನಿಸ್ವಾಮಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ರಾಷ್ಟ್ರೀಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
WhatsApp Group Join Now
Telegram Group Join Now
Share This Article