ಸುಭಾಷ ತುರಮರಿಯವರ ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

Ravi Talawar
ಸುಭಾಷ ತುರಮರಿಯವರ ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪ್ರಶಸ್ತಿ
WhatsApp Group Join Now
Telegram Group Join Now
ಬೆಂಗಳೂರು: ಏಷ್ಯಾ ಕಲ್ಚರಲ್ ಇಂಟರ್ನ್ಯಾಷನಲ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ಬೆಂಗಳೂರಿನ ಹೊಸೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಬೈಲಹೊಂಗಲದ ಪ್ರತಿಷ್ಠಿತ ತುರಮರಿ ಮನೆತನದ ಹಿರಿಯ ನಾಯಕ, ಸಮಾಜ ಸೇವಕ, ಹೋರಾಟಗಾರ, ಬಿಜೆಪಿ ಬೈಲಹೊಂಗಲ ಮಂಡಲದ ಅಧ್ಯಕ್ಷರಾದ ಸುಭಾಷ್ ತುರಮರಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನಿವೃತ್ತ ನ್ಯಾಯಮೂರ್ತಿ ಡಾ, ಜೆ ಹರಿದಾಸ, ಡಾ. ಎ ಪಿ ಶ್ರೀನಾಥ, ಬೆಂಗಳೂರು ಶಕ್ತಿ ಪೀಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಆದಿತ್ಯ ಸ್ವಾಮಿಜಿ ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಿದರು, ಸಮಾರಂಭದಲ್ಲಿ ಭಾಗವಹಿಸಿದ ಬೈಲಹೊಂಗಲದ ಯುವ ಉದ್ಯಮಿ ಸುನೀಲ ಮರಕುಂಬಿ  ಬೈಲಹೊಂಗಲದಲ್ಲಿ ತುರಮರಿ ಮನೆತನಕ್ಕೆ ತನ್ನದೆ ಆದ ಇತಿಹಾಸ ಇದೆ ಹಲವಾರು ದಶಕಗಳಿಂದಲೂ ನಾಡು ನುಡಿ ಹೋರಾಟಕ್ಕಾಗಿ ನೆಲ ಜಲದ ಹೋರಾಟಕ್ಕಾಗಿ ಸಮಾಜಮುಖಿ ಸೇವೆಗಳಲ್ಲಿ ಈ ಮನೆತನದ ಕೊಡುಗೆ ಅಪಾರವಾಗಿದೆ, ಸುಭಾಷ ತುರಮರಿಯವರ ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿರುವುದು ಅತ್ಯಂತ ಸಂತಸದ ವಿಷಯ ಎಂದರು, ಹೊಸೂರು ತಾಲೂಕ ಪಂಚಾಯತ ನಿಕಟ ಪೂರ್ವ ಸದಸ್ಯರಾದ ಜಗದೀಶ ಬೂದಿಹಾಳ ಮಾತನಾಡಿ ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯಬೇಕಾದರೆ ಅವನಿಗೆ ಸಮಾಜ ಮತ್ತು ಸಮುದಾಯಗಳು ನೀಡುವ ಗೌರವ ಅತ್ಯಂತ ಮುಖ್ಯವಾದದ್ದು ಹಲವಾರು ತಲೆಮಾರುಗಳಿಂದ ಬೈಲಹೊಂಗಲ ನಾಡಿನಲ್ಲಿ ಅಷ್ಟೇ ಅಲ್ಲದೆ ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ತುರಮರಿ ಕುಟುಂಬ ಬೇಡುವ ಕೈಗಳು ಸಾಕಷ್ಟು ಇದ್ದರೂ ನೀಡುವ ಮನಸ್ಸಿರಬೇಕು ಅಂತಹ ಮನಸ್ಸನ್ನು ಈ ಕುಟುಂಬ ಕರಗತ ಮಾಡಿಕೊಂಡು ಎಲ್ಲಾ ಕಾರ್ಯಗಳಲ್ಲೂ ಒಂದು ಹೆಜ್ಜೆ ಮುಂದೆ ಇಟ್ಟು ಕೆಲಸ ಮಾಡುತ್ತಾರೆ, ಇಂದು ಸುಭಾಷ ತುರಮರಿಯವರಿಗೆ ಪ್ರಶಸ್ತಿ ಸಿಕ್ಕಿರುವುದು ಅವರ ಸಮಾಜ ಸೇವೆಗೆ ಸಂದ ಗೌರವವಾಗಿದೆ ಎಂದರು, ಹೊಸುರಿನ ಪ್ರಗತಿಪರ ರೈತ ಅಶೋಕ ಇಂಗಳಗಿ, ಹಡಪದ ಸಮಾಜದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article