ಹಾಲಪ್ಪಾ ಹೆಗಡೆಗೆ ಗೌರವ ಡಾಕ್ಟರೇಟ್‌

Ravi Talawar
ಹಾಲಪ್ಪಾ ಹೆಗಡೆಗೆ ಗೌರವ ಡಾಕ್ಟರೇಟ್‌
WhatsApp Group Join Now
Telegram Group Join Now
ಸಂಕೇಶ್ವರ : ಕರ್ನಾಟಕ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘ, ಉತ್ತರ ಕರ್ನಾಟಕ ನಿಗಮದ ಅಧ್ಯಕ್ಷರಾಗಿರುವ  ಶಂಕರ ಹಾಲಪ್ಪಾ ಹೆಗಡೆ ಅವರ ಸಮಾಜ ಸೇವೆಯನ್ನು ಗುರುತಿಸಿ ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿರ್ಸಿಟಿದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಜೆ.ಸಿ.ನಗರದ ಕುರುಬನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಸಹಕಾರಿ ಧುರೀಣ, ಶಂಕರ ಹಗಡೆ ಅವರು ಹಲವು ವರ್ಷಗಳಿಂದ ಎಲೆಮರಿಯ ಕಾಯಿಯಂತೆ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಹಾಗೂ ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ನಿತ್ಯೋತ್ಸವ ಕನ್ನಡ ಸಿರಿ ಪ್ರಶಸ್ತಿ ಕೂಡ ಇದೇ ವೇಳೆ ಲಭಿಸಿದೆ. ಶಂಕರ ಹೆಗಡೆ ಅವರಿಗೆ ಪ್ರಶಸ್ತಿಗಳು ಲಭಿಸಿದಕ್ಕೆ ಹುಕ್ಕೇರಿ ತಾಲೂಕಿನ ಗಣ್ಯರು ಹಾಗೂ ಹಲವರು ಅಭಿನಂದನೆಗಳುನ್ನು ತಿಳಿಸಿ ಶುಭ ಹಾರೈಸಿದ್ದಾರೆ.
WhatsApp Group Join Now
Telegram Group Join Now
Share This Article