ಘಟಪ್ರಭಾ : ದಿನಾಂಕ 24 -11-2024 ರಂದು “ಕನ್ನಡ ರಕ್ಷಣಾ ವೇದಿಕೆ” ಸಂಘಟನೆ ವತಿಯಿಂದ, ಜಾಗನೂರು ಗ್ರಾಮದ ಲಖನ ಉ ಹಣಮನ್ನವರ, ಇವರು ಮೈಸೂರಿನಲ್ಲಿ ಐ ಆರ್ ಎಸ್ ಸೇವೆ ಸಲ್ಲಿಸಿ, ಈಗ ಬೆಂಗಳೂರು ಆದಾಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿರುವ ಇವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ, ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಶಿ, ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ಸಂಘಟನೆ ಮುಖಂಡರುಗಳಾದ ಸಿದ್ರಾಮ ಚೌಕಶಿ, ಸದಾಶಿವ ಪರಿಟ್, ಮಲ್ಲಪ್ಪ ಅಟ್ಟಿಮಿಟ್ಟಿ ,ಲಕ್ಷ್ಮಣ ಮುಸುಗುಪ್ಪಿ, ಶಾಂಬಪ್ಪ ಮಸುಗುಪ್ಪಿ ,ರಾಯಪ್ಪ ಹನುಮಣ್ಣವರ, ಯಲ್ಲಾಲಿಂಗ ಚೌಕಶಿ,ಬೀಮಶಿ ಚೌಕಶಿ, ಹಾಗೂ ಕಾರ್ಯಕರ್ತರು ಹಾಜರಿದ್ದರು.