ಯರಗಟ್ಟಿ: ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ’ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ.
ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಭ್ರಾತೃತ್ವ ಮತ್ತು ವಿಶ್ವಾಸವನ್ನು ಬೆಳೆಸಲು ಇದು ಸಹಾಯಕವಾಗಲಿದೆ.ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಳೀಯ ಪ್ರದೇಶದ ಪ್ರತಿ ಮನೆಗೂ ಭೇಟಿ ನೀಡಿ, ನಿವಾಸಿಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸುತ್ತಾರೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸುರಕ್ಷತೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಪಿಎಸ್‌ಐ ಎಲ್. ಬಿ. ಮಾಳಿ ಹೇಳಿದರು.
ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯ ಜಾಗೃತಿ ಕಾರ್ಯಕ್ರಮವನ್ನು ಮುರಗೋಡ ಸಿಪಿಐ ಆಯ್. ಎಂ. ಮಠಪತಿಯವರ ಆದೇಶದ ಮೇರೆಗೆ ಗ್ರಾಮಸ್ಥರಿಗೆ ಮೂಡಿಸಿದರು.
ಈ ಸಂದರ್ಭದಲ್ಲಿ ನಿಂಗಪ್ಪ ದಳವಾಯಿ, ಯಲ್ಲಪ್ಪ ದಳವಾಯಿ, ಬಸವರಾಜ ದಳವಾಯಿ, ಸಿದ್ದು ಬಡಿಗೇರ, ಮಾರುತಿ ಮಾದರ, ಈರಪ್ಪ ನಾವಿ, ಚಂಬಣ್ಣ ಗಾಣಿಗೇರ, ವಿಠ್ಠಲ ದಳವಾಯಿ, ಗ್ರಾಮದ ಬೀಟ್ ಪೋಲಿಸ್ ವಿಠ್ಠಲ ಬಾಂಗಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.