ಜನಸ್ನೇಹಿ ಪೋಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮನೆ ಮನೆಗೆ ಪೋಲೀಸ್ ವಿನೂತನ ಕಾರ್ಯ;  ಎಸ್.ಪಿ. ಗುಂಜನ್ ಆರ್ಯ ಮನವಿ

Ravi Talawar
ಜನಸ್ನೇಹಿ ಪೋಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮನೆ ಮನೆಗೆ ಪೋಲೀಸ್ ವಿನೂತನ ಕಾರ್ಯ;  ಎಸ್.ಪಿ. ಗುಂಜನ್ ಆರ್ಯ ಮನವಿ
WhatsApp Group Join Now
Telegram Group Join Now
ಧಾರವಾಡ : ಕರ್ನಾಟಕ ಪೋಲೀಸ್ ಜನಸ್ನೇಹಿಯಾಗಿದ್ದು ಆಗಿದ್ದು, ಸಮುದಾಯ ವ್ಯವಸ್ಥೆಯನ್ನು ಬಲಪಡಿಸಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಕ್ರಮವಾಗಿ ಧಾರವಾಡ ಜಿಲ್ಲೆಯಲ್ಲಿ ಸರಕಾರದ ನಿರ್ದೇಶನದಂತೆ ಪೋಲೀಸ್ ಇಲಾಖೆಯಿಂದ ಮನೆ ಮನೆಗೆ ಪೋಲೀಸ್ ಕಾರ್ಯಕ್ರಮವನ್ನು ಜಾರಿ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಗುಂಜನ್ ಆರ್ಯ ಅವರು ಹೇಳಿದರು.
 ಧಾರಾವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮನೆಮನೆಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಮನೆಮನೆಗೆ ಪೋಲೀಸ್ ಕಾರ್ಯಕ್ರಮ ಪರಿಚಯಿಸುವ ಮತ್ತು ಜನರ ಅಹವಾಲು ಕೇಳುವ ಮೂಲಕ ಚಾಲನೆ ನೀಡಿ,  ಗ್ರಾಮಸ್ಥರನ್ನು ಉದ್ದೇಶಿಸಿ, ಮಾತನಾಡಿದರು.
ಸಾರ್ವಜನಿಕರ ಸುರಕ್ಷತೆ, ಸಮಾಜದ ಶಾಂತಿ ದೃಷ್ಟಿಯಿಂದ ಮನೆ ಮನೆಗೆ ಪೋಲೀಸ್ ಎಂಬುದು ಒಂದು ವಿನೂತನ ಕಾರ್ಯಕ್ರಮ. ಈಗಾಗಲೇ ಬಿಟ್ ಪೋಲೀಸ್ ವ್ಯವಸ್ಥೆ ಮೂಲಕ ಸಮುದಾಯ, ಜನರೊಂದಿಗೆ ನೇರ ಸಂಪರ್ಕ ಸಾಧಿಸಿ, ಜನಸ್ನೆಹಿ ಪೋಲೀಸ್ ಆಗಿದೆ. ಮನೆಮನೆಗೆ ಪೋಲೀಸ್ ಮೂಲಕ ಜನರ ಮನೆ ಬಾಗಿಲಿಗೆ ಬಂದು, ಬಿಟ್ ಪೆÇಲೀಸ್ ಅವರ ಸಮಸ್ಯೆಗಳನ್ನು ಆಲಿಸಿ, ದಾಖಲಿಸಲಿದ್ದಾರೆ. ಮತ್ತು ಸಾಧ್ಯವಾದಷ್ಟು ಸ್ಥಳೀಯವಾಗಿ ಕಾನೂನು ಪ್ರಕಾರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಅಥವಾ ಸಂಬಂದಿಸಿದವರ ಗಮನಕ್ಕೆ ತಂದು ಪರಿಸುವ ಕ್ರಮಕೈಗೊಳ್ಳಲಿದ್ದಾರೆ ಎಂದು ಎಸ್.ಪಿ. ಆರ್ಯ ಅವರು ತಿಳಿಸಿದರು.
ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳನ್ನು ಖುದ್ದಾಗಿ ಬಂದು ಹೇಳಲು, ಸ್ಥಳೀಯವಾಗಿ ಪೆÇಲೀಸರಿಗೆ ತಿಳಿಸಲು ಕಷ್ಟವೆನಿಸಿದರೆ, ಮನೆ ಮನೆಗೆ ಪೋಲೀಸ್ ಕಾರ್ಯಕ್ರಮದಲ್ಲಿ ಪ್ರತಿ ಮನೆಗೆ ಕರಪತ್ರ ವಿತರಿಸಲಾಗುತ್ತಿದೆ. ಕರಪತ್ರದಲ್ಲಿ ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ, ವಿಳಾಸ ನೀಡಲಾಗಿದೆ. ಸೂಕ್ಷ್ಮ ವಿಷಯ, ಸಂದರ್ಭಗಳಿದ್ದಲ್ಲಿ ದೂರವಾಣಿ ಮೂಲಕ ತಿಳಿಸಿದರೂ, ಪೆÇಲೀಸ್‍ರು ತಾವಿದ್ದಲ್ಲಿಗೆ ಬಂದು ಸಹಾಯ ಮಾಡಲಿದ್ದಾರೆ. ಅಗತ್ಯವಿದ್ದಾಗ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಮನೆ ಮನೆಗೆ ಪೋಲೀಸ್ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದೊಂದು ಸಮುದಾಯ ಸ್ನೇಹಿ ಪೋಲೀಸ್ ವ್ಯವಸ್ಥೆ ಆಗಿದ್ದು, ಕಮ್ಯುನಿಟಿ ಪೋಲೀಸ್ ಎಂಬ ಪರಿಕಲ್ಪನೆ ಇದರ ಮುಖ್ಯ ಉದ್ದೇಶವಾಗಿದೆ. ಪೋಲೀಸ್ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿಶ್ವಾಸದ ಸಂಬಂಧವನ್ನು ಬೆಳೆಸುವುದು ಮತ್ತು ಅಪರಾಧಗಳನ್ನು ತಡೆಗಟಲು ವಿನೂತನ ಕ್ರಮವಾಗಿದೆ ಎಂದು ಅವರು ಹೇಳಿದರು.
ಪೋಲೀಸರು ಕೇವಲ ಅಪರಾಧ ನಡೆದಾಗ ಮಾತ್ರ ಸ್ಥಳಕ್ಕೆ ಬರುವ ಬದಲು, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಪರಾಧ ನಡೆಯದಂತೆ ತಡೆಯುವುದು ಮತ್ತು ಜನರಲ್ಲಿ ಸುರಕ್ಷತಾ ಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮವಹಿಸಿದೆ ಎಂದರು.
ಪೋಲೀಸ್ ಅಧಿಕಾರಿಯನ್ನು ಮತ್ತು ಕಾನ್ಸ್‍ಟೇಬಲ್, ಹೆಡ್ ಕಾನ್ಸ್‍ಟೇಬಲ್ ನಿಯೋಜಿಸುವುದು. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ತಮ್ಮ ಬೀಟ್ ವ್ಯಾಪ್ತಿಯ ಮನೆಗಳಿಗೆ, ಅಂಗಡಿಗಳಿಗೆ ಭೇಟಿ ನೀಡಿ, ಸಂಪರ್ಕ ಸಂಖ್ಯೆಯನ್ನು ನೀಡಿ, ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ತಿಳಿಸಿದರು.
ಪೋಲೀಸ್ ಅಪ್ಲೀಕೇಶನ್‍ಗಳನ್ನು ಜನಸಾಮಾನ್ಯರು ಬಳಸಬೇಕು. ಇದರಲ್ಲಿ ಪಟ್ಟಣ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ  ಪದಾಧಿಕಾರಿಗಳು ಮತ್ತು ಸಕ್ರಿಯ ನಾಗರಿಕರಿದ್ದು, ಈ ಗುಂಪಿನಲ್ಲಿ ಅಧಿಕೃತ ಮಾಹಿತಿ ನೀಡಿ ಸುರಕ್ಷತಾ ಎಚ್ಚರಿಕೆಗಳು ಮತ್ತು ಸಂಚಾರದ ಅಪ್‍ಡೇಟ್‍ಗಳನ್ನು ಹಂಚಿಕೊಳ್ಳಬಹುದು ಎಂದರು.
ಗ್ರಾಮದ ಹಿರಿಯರಾದ ಸಹದೇವ ಹಾವೇರಿ ಮತ್ತು ಚನಬಸಪ್ಪ ಮಟ್ಟಿ ಅವರು ಮಾತನಾಡಿ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಅಹಿತಕರ ಘಟನೆಗಳು ನಡೆಯದಂತೆ ಕಾಳಜಿ ವಹಿಸಬೇಕೆಂದು ಮನವಿ ಮಾಡಿಕೊಂಡರು.
ವೇದಿಕೆಯಲ್ಲಿ ಡಿ.ವೈಎಸ್.ಪಿ  ವಿನೋದ ಮುಕ್ತೆದಾರ, ಹೆಬ್ಬಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ವಿ್ಠ್ಠಲ ಬೋವಿ, ಉಪಾಧ್ಯಕ್ಷೆ ಸುಶಿಲಮ್ಮ ಸಾಲಿ ಇದ್ದರು.
ಧಾರವಾಡ ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಮಲ್ಲಯ್ಯ ನಂದಿಕೋಲಮಠ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರು, ವುವಿಧ ಜನಪ್ರತಿನಿಧಿಗಳು, ಸಂಘಟನೆಗಳ ಪ್ರತಿನಿಧಿಗಳು, ಹಿರಿಯರು ಮತ್ತು ಇತರರು ಇದ್ದರು.
*ಎಸ್.ಪಿ ಭೇಟಿ:*ಮನೆ ಮನೆಗೆ ಪೋಲೀಸ್ ಕಾರ್ಯಕ್ರಮದ ಅಂಗವಾಗಿ ಪೆÇಲೀಸ್ ವರಿಷ್ಠಾಧಿಗಳು ಗುಂಜನ್ ಆರ್ಯ ಅವರು ಹೆಬ್ಬಳ್ಳಿ ಗ್ರಾಮದ ಹಳೆ ಬಸ್ ನಿಲ್ದಾಣ ಹತ್ತಿರದ ಓಣಿ, ಮಲ್ಲಯ್ಯನಗುಡಿ ಓಣಿ, ಕಾಮನಗುಡಿ ಓಣಿ, ಹರಿಜನಕೇರಿ, ಚಲವಾದಿಯವರ ಓಣಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಂಚರಿಸಿ, ಮನೆಮನೆಗೆ ಭೇಟಿ ನೀಡಿ, ಕುಟುಂಬಸ್ಥರನ್ನು ಮಾತನಾಡಿಸಿದರು.
*ಮನೆ ಮನೆಗೆ ಪೋಲೀಸ್ ವಿನೂತನ ಕಾರ್ಯಕ್ರಮ:* ಪೋಲೀಸ್ ರನ್ನು ಸಮಾಜದ ಭದ್ರತಾ ಪ್ರತಿನಿಧಿಗಳೆಂದು, ನಾಗರೀಕರ ಮೂಲಭೂತ ಹಕ್ಕುಗಳ ರಕ್ಷಕರೆನ್ನಲಾಗುತ್ತದೆ.
ಅಪರಾಧಗಳ ತಡೆ ಹಾಗೂ ಪತ್ತೆ, ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಜಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಕರ್ತವ್ಯ ಮತ್ತು ಗುರುತರ ಜವಾಬ್ದಾರಿಗಳು ಪೋಲೀಸ್ ಇಲಾಖೆಯ ಮೇಲಿವೆ. ಪೋಲೀಸ್ ವ್ಯವಸ್ಥೆಯು ಸಮಾಜ ಸ್ನೇಹಿಯಾಗಿಸಿಕೊಳ್ಳುವುದರಿಂದ, ಮೂಲಕ ಕರ್ತವ್ಯದ ಪರಿಣಾಮಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಪೋಲೀಸ್ ಸೇವೆಗಳ ಪ್ರತಿಯೊಂದು ಸ್ಥರದಲ್ಲೂ, ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ತವನ್ನು ಸಾಧಿಸಿಕೊಳ್ಳುವುದರಿಂದ ಮಾತ್ರವೇ ಸಾರ್ವಜನಿಕರಿಗೆ ಉತ್ಕೃಷ್ಟವಾದ ಸೇವೆಯನ್ನು ಒದಗಿಸಲು ಸಾಧ್ಯ. ಮುಂದುವರೆದು, ಪೋಲೀಸ್ ನಾವು ಸಮಾಜದ ಸೇವಕರು ಎಂಬುದನ್ನು ಎಂದಿಗೂ ಮರೆಯಕೂಡದು. ಜನರಿಗೆ ಅತ್ಯುತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ ಮತ್ತು ಮೂಲ ಧೈಯ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.
ಪ್ರಸ್ತುತ ಪೋಲೀಸ್ ವ್ಯವಸ್ಥೆಯು ಬಹುತೇಕವಾಗಿ “ಪ್ರತಿಕ್ರಿಯೆ ಸೇವೆ” ಯನ್ನು ಮಾತ್ರವೇ ಒದಗಿಸುತ್ತಾ ಬಂದಿದೆ. ಅಂದರೆ, ಸಾರ್ವಜನಿಕರು ನೀಡುವ ದೂರುಗಳ / ಅಹವಾಲುಗಳ ಆಧಾರದ ಮೇಲೆ ಮಾತ್ರವೇ ಪ್ರತಿಕ್ರಿಯಿಸಲಾಗುತ್ತಿದೆ. ಆದರೆ ಈ ವ್ಯವಸ್ಥೆಯನ್ನು “ಸಕ್ರಿಯ ಸೇವೆ” ಒದಗಿಸುವ ವ್ಯವಸ್ಥೆಯನ್ನಾಗಿ ಪರಿವರ್ತನೆಗೊಳಿಸುವೆಡೆಗೆ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇಂತಹ ನಡೆಯಿಂದ ಪೋಲೀಸ್ ಸೇವೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಹೆಚ್ಚುವುದರೊಂದಿಗೆ, ಜನರು ಮತ್ತು ಪೋಲೀಸ್ ನಡುವೆ ನಿಕಟ ಸಂಬಂಧ ಏರ್ಪಟ್ಟು, ಪರಿಣಾಮವಾಗಿ, ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿರುವಂತಹ ವಾತಾವರಣ ರೂಪುಗೊಳ್ಳುತ್ತದೆ
ಪ್ರಸ್ತುತ ಪೋಲೀಸ್ ವ್ಯವಸ್ಥೆಯನ್ನು ಸಾರ್ವಜನಿಕಸ್ನೇಹಿಯನ್ನಾಗಿಸುವ ದಿಸೆಯಲ್ಲಿ “ಮನೆ ಮನೆಗೆ ಪೋಲೀಸರು” ಎಂಬ ಒಂದು ವಿನೂತನ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ. ಮನೆ-ಮನೆಗೆ ಪೋಲೀಸ್ ಪರಿಕಲ್ಪನೆಯಲ್ಲಿ ಪೋಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ವಿವಿಧ ರೀತಿಯ ಕರ್ತವ್ಯವನ್ನು ನಿರ್ವಹಿಸುತ್ತಾರೆ.
ಪ್ರತಿಯೊಂದು ಪೋಲೀಸ್ ಠಾಣೆಗಳ ಸರಹದ್ದುಗಳ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿಕೊಳ್ಳುವುದು (ಇ-ಬೀಟ್ ವ್ಯವಸ್ಥೆಯನ್ವಯ), ಅಂತಹ ವಿಂಗಡಿಸಲಾದ ಪ್ರದೇಶಗಳಲ್ಲಿ ಇರುವ ಮನೆಗಳನ್ನು ಪಟ್ಟಿ ಮಾಡಿಕೊಳ್ಳುವುದು. ಪಟ್ಟಿ ಮಾಡಿಕೊಂಡಂತಹ ಮನೆಗಳಲ್ಲಿ 40-50 ಮನೆಗಳ ಸಮೂಹವನ್ನು ರಚಿಸಲಾಗುತ್ತದೆ.
ಬೀಟ್ ಪೋಲೀಸ್ ಅಧಿಕಾರಿ, ಸಿಬ್ಬಂದಿಗಳು ಈ ಸಮೂಹದ ಎಲ್ಲಾ ಮನೆಗಳಿಗೆ ಭೇಟಿ ನೀಡುವುದು. ಸಮೂಹದ ಎಲ್ಲಾ ಮನೆಗಳಿಗೆ ಭೇಟಿ ನೀಡುವ ಪ್ರಕ್ರಿಯೆ ಮುಕ್ತಾಯಗೊಂಡ ನಂತರ, ಮುಂದಿನ ಸಮೂಹಕ್ಕೆ ಭೇಟಿ ನೀಡುವುದು, ಹಾಗೆಯೇ ಠಾಣಾ ವ್ಯಾಪ್ತಿಯಲ್ಲಿ ರಚಿಸಿಕೊಳ್ಳಲಾದ ಎಲ್ಲಾ ಸಮೂಹಗಳಿಗೆ ಪೋಲೀಸರು ಭೇಟಿ ನೀಡುವುದು. ಒಟ್ಟಾರೆಯಾಗಿ ಈ ಪ್ರಕ್ರಿಯೆಯನ್ನು ನಿರಂತರವಾಗಿ ಮುಂದುವರೆಸಿಕೊಳ್ಳುವುದು. ಯಾವುದೇ ಮನೆಯು ಭೇಟಿ ಪ್ರಕ್ರಿಯೆಯಿಂದ ಹೊರತಾಗದಂತೆ ಕ್ರಮವಹಿಸತ್ತಾರೆ.
  ಮನೆಗಳಿಗೆ ಭೇಟಿ ನೀಡಿದಾಗ ಪೋಲೀಸ್ ಅಧಿಕಾರಿ , ಸಿಬ್ಬಂದಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಅವರಿಂದ ಸೂಕ್ತ ಸಲಹೆಗಳನ್ನು ಲಿಖಿತವಾಗಲೀ ಅಥವಾ ಮೌಖಿಕವಾಗಲೀ ಅಲಿಸುವುದು. ಪಡೆದುಕೊಳ್ಳುವುದು, ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸುವುದು ಮತ್ತು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ
 ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮನೆಯ ಸುತ್ತಮುತ್ತಲ ಭದ್ರತೆ ಮತ್ತು ಸುರಕ್ಷಿತ ವಾತಾವರಣವನ್ನು ಗಮನಿಸುವುದು ಹಾಗೂ ಲೋಪದೋಷಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಕ್ತ ಸಲಹೆಗಳನ್ನು ಮತ್ತು ಮಾರ್ಗದರ್ಶನಗಳನ್ನು ನೀಡುತ್ತಾರೆ.
ಭೇಟಿ ನೀಡಲಾದ ಮನೆಯ ಕುಟುಂಬದ ಮುಖ್ಯಸ್ಥರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಹಾಗೂ ಅನ್ನೋನ್ಯತೆಯನ್ನು ಕಾಯ್ದುಕೊಳ್ಳುವುದು. ಇಂತಹ ಪದ್ಧತಿಯನ್ನು ಬೀಟ್ ಪೋಲೀಸರು ದೈನಂದಿನ ಕಾರ್ಯದಂತೆ ಮಾಡುತ್ತಾರೆ.
WhatsApp Group Join Now
Telegram Group Join Now
Share This Article