ಕುಕನೂರು: ಭಾರತ ಸೇನೆಗೆ ಗೃಹರಕ್ಷಕ ದಳದ ಕೊಡುಗೆ ಅಪಾರವಾಗಿದೆ. ಈಗಿನ ಗೃಹರಕ್ಷಕರೇ ಮುಂದಿನ ವೀರಯೋಧರು. ಗೃಹರಕ್ಷಕದಳ ಸಮಾಜದ ರಕ್ಷಣೆಗೆ ನಿಂತಿದೆ. ಇವರ ಸೇವೆ ದೇಶಸೇವೆಗೆ ಮುಡಿಪಾದ ಒಂದು ಶಕ್ತಿಯಾಗಿದೆ ಎಂದು ಕಲ್ಯಾಣ ಸ್ಪೂರ್ತಿ ಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರರಾದ ಶ್ರೀಮತಿ ಸರಸ್ವತಿ ನಾಗರಾಜ್ ಅವರು ಶ್ಲಾಘಿಸಿದರು.
ಅವರು ಶುಕ್ರವಾರ ಕುಕನೂರ ಷಟ್ಟಣದ ವಿದ್ಯಾನಂದ ಗುರುಕುಲ ಕಾಲೇಜಿನ ಹುತಾತ್ಮ ಭವನದಲ್ಲಿ ಅಖಿಲ ಭಾರತ ಗೃಹರಕ್ಷಕ ದಳದ ೬೩ನೇ ವರ್ಷದ ದಿನಾಚರಣೆ ಹಾಗೂ ಕುಕನೂರು ಗೃಹರಕ್ಷಕ ದಳದ ೨೫ನೇ ವರ್ಷದ ರಜತ ಮಹೋತ್ಸವದ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿ ಮಾತನಾಡ ಗೃಹರಕ್ಷಕ ದಳ ಒಂದು ಇಲಾಖೆಯಲ್ಲ, ಇದು ನಮ್ಮ ನಾಡಿನ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಸ್ತು, ಧೈರ್ಯ ಮತ್ತು ನಿಸ್ವಾರ್ಥ ಸೇವೆ ಹೊಂದಿ, ಸಮಾಜದ ರಕ್ಷಣೆಯಲ್ಲಿ ತೊಡಗಿರುತ್ತದೆ. ಇದೇ ರೀತಿ ಗೃಹರಕ್ಷಕದಳ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜದ ರಕ್ಷಣೆಯಲ್ಲಿ ತೊಡಗಲಿ ಎಂದು ಆಶಿಸಿದರು.
ಅಧ್ಯಕ್ಷತೆಯನ್ನು ಗೃಹರಕ್ಷಕದಳದ ಜಿಲ್ಲಾ ಸಮಾಧೇಷ್ಠರಾದ ಕೆ. ಲಕ್ಷ್ಮಣ ಕಡೆಮನಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೀರಣ್ಣ ಬಡಿಗೇರ್, ಬಾಳಪ್ಪ ಕುಕುನೂರು, ಮೀರಾಸಾಬ್, ಶಿವಶರಣಪ್ಪ ಎಫ್‌ಡಿಸಿ. ಬೀದರ್, ಬಸವರಾಜ್ ಯಲಬುರ್ಗಾ, ರವೀಂದ್ರ ಬಾಕಳೆ, ಗೃಹರಕ್ಷಕದಳ ಇಲಾಖೆಯ ಸಿಬ್ಬಂದಿ ವರ್ಗದವರು ವಿವಿಧ ಘಟಕಗಳ ಅಧಿಕಾರಿಗಳು, ಗೃರಕ್ಷಕ, ಸಿ.ಮಂಜುನಾಥ್., ಪಿ.ಕುಮಾರ್, ತಿಮ್ಮಣ್ಣ ನಾಯಕ್ ಇನ್ನುಳಿದ ಗೃಹರಕ್ಷಕರು, ಗೃಹರಕ್ಷಕಿಯರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


