ಸುಃಖ, ಶಾಂತಿ, ಸಂಪತ್ತು, ನೆಮ್ಮದಿ ನೀಡುವ ಮೂಲಕ  ದೇಶದಲ್ಲಿ ಎಲ್ಲಾರೂ  ಸೌಹಾರ್ದತೆ,ಯಿಂದ ಭಾಳಬೇಕಿದೆ. ::  ಹೆಚ್.ಎನ್. ಮೊಹಮ್ಮದ ಇಮಾಮ್ ನಿಯಾಜಿ

MK HasiruKranti
ಸುಃಖ, ಶಾಂತಿ, ಸಂಪತ್ತು, ನೆಮ್ಮದಿ ನೀಡುವ ಮೂಲಕ  ದೇಶದಲ್ಲಿ ಎಲ್ಲಾರೂ  ಸೌಹಾರ್ದತೆ,ಯಿಂದ ಭಾಳಬೇಕಿದೆ. ::    ಹೆಚ್.ಎನ್. ಮೊಹಮ್ಮದ ಇಮಾಮ್ ನಿಯಾಜಿ
WhatsApp Group Join Now
Telegram Group Join Now

ಹೊಸಪೇಟೆ : ನಗರದ ಹಳೆಯ ಐ ಎಸ್‌ಅರ್ ರಸ್ತೆಯಲ್ಲಿ ನ ಇದ್ಗಾ ದಲ್ಲಿ‌  ರಂಜಾನ್  ಹಬ್ಬವನ್ನು ಮುಸ್ಲಿಂ ಬಾಂಧವರು  ಸಂಭ್ರಮ ಮತ್ತು ಸಹೋದರತೆಯಿಂದ ಆಚರಿಸಿದರು. 
 
ನಗರದ  ವಿವಿಧ ಪ್ರದೇಶಗಳಿಂದ   ಸಾವಿರಾರು ಮುಸ್ಲಿಂ ಬಾಂಧವರು ಅಂಬೇಡ್ಕರ್ ಸರ್ಕಲ್ ಹತ್ತಿರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಂದುಗಳು ಹೊಸ ಬಟ್ಟೆ ಧರಿಸಿ, ದಾನ (ಫಿತರ್ ಝಕಾತ್) ನೀಡಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು,
ನಂತರ ಪರಸ್ಪರ ಅಲಂಗಿಸುವ ಮೂಲಕ ಹಬ್ಬದ  ಶುಭಾಶಗಳನ್ನು ತಿಳಿಸಿದರು,
 
 ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ನಂತರ  ಹಬ್ಬವನ್ನು ಉದ್ದೇಶಿಸಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ   ಹೆಚ್.ಎನ್. ಮೊಹಮ್ಮದ ಇಮಾಮ್ ನಿಯಾಜಿ ರವರು ಮಾತನಾಡಿ ಎಲ್ಲಾ ಮುಸ್ಲಿಂ ಬಾಂಧವರು 3೦ ದಿನಗಳ ಉಪವಾಸವನ್ನು ಪೂರೈಸಿದ ನಂತರ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇವೆ ಎಂಬ ಪ್ರತೀಜ್ಞೆಯನ್ನು ಮಾಡುವ ಮೂಲಕ ಈ ಒಂದು ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆಯನ್ನು ಭಗವಂತನಿಗೆ ಸಲ್ಲಿಸಿರುತ್ತೇವೆ, 
 
ಈ ವರ್ಷದ ರಂಜಾನ್ ಹಬ್ಬವು ನಮ್ಮ ದೇಶದ  ಪ್ರತಿಯೊಬ್ಬರಿಗೂ ಸುಃಖ, ಶಾಂತಿ, ಸಂಪತ್ತು, ನೆಮ್ಮದಿ ನೀಡುವ ಮೂಲಕ  ದೇಶದಲ್ಲಿ ಎಲ್ಲಾರೂ  ಸೌಹಾರ್ದತೆ,  ಸಹೋದರ ವಾತ್ಸಲ್ಯದಿಂದ ಕೂಡಿ ಬಾಳಬೇಕು ಎಂದು  ಭಗವಂತನಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಎಲ್ಲಾ ಜನತೆಗೆ ರಂಜಾನ್  (ಈದ್- ಉಲ್- ಫಿತರ್) ಹಬ್ಬದ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದರು.
 
 ನಂತರ ಅಂಜುಮನ್ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.
 
ನಗರದಲ್ಲಿ  ಸಮಸ್ತ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಗಳನ್ನು ಕೋರಿದರು. 
 
ನಗರದ ಆರ್.ಟಿ.ಓ. ಅಫೀಸ್ ಹಿಂಭಾಗದ ಈದ್ಗಾ ಮೈದಾನ, ಬಸ್ ಡಿಪೋ ಹತ್ತಿರ ಈದ್ಗಾ ಮೈದಾನ,  ಗುಲಾಬ್ ಷಾ ವಲಿ ದರ್ಗ ಈದ್ಗಾ ಮೈದಾನ,  ಚಿತ್ತವಾಡ್ಗಿ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ,  ನಾಗೇನಹಳ್ಳಿ ಈದ್ಗಾ ಮೈದಾನ , ಟಿ.ಬಿ. ಡ್ಯಾಮ್ ಈದ್  ವಿವಿಧೆಡೆ ಪ್ರಾರ್ಥನೆ ಸಲ್ಲಿಸಿದರು.
 
ಪ್ರಾರ್ಥನೆಯ ವೇಳೆ  ಅಂಜುಮನ್ ಕಮಿಟಿ ಉಪಾಧ್ಯಕ್ಷರಾದ ಎಮ್.ಎಮ್. ಫೈರೋಜ್ ಖಾನ್, ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ, ಖಜಾಂಚಿಯಾದ ಅನ್ಸರ್ ಭಾಷ, ಜಂಟಿ ಕಾರ್ಯದರ್ಶಿಯಾದ ಡಾ|| ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಸಮಾಜದ ಮುಖಂಡರಾದ, ಖಲಂದರ್, ಗೌಸ್, ಸಮಾಜದ ಹಿರಿಯ ಮುಖಂಡರು ಹಾಗು ಸಾವಿರಾರು ಮುಸ್ಲಿಂ ಭಾಂದವರು  ಭಾಗವಹಿಸಿದರು.
 
ಒಂದು ತಿಂಗಳ ಕಠಿಣ ಉಪವಾಸದ (ರೋಜಾ) ನಂತರ, ಚಂದ್ರದರ್ಶನದೊಂದಿಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಜ್, ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಈದ್ ಮುಬಾರಕ್ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸಲಾಗುತ್ತದೆ. 
WhatsApp Group Join Now
Telegram Group Join Now
Share This Article