ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಲ್ಲಿ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ : ಎಚ್ ಕೆ ಬಸವರಾಜ್ 

Ravi Talawar
ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಲ್ಲಿ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ : ಎಚ್ ಕೆ ಬಸವರಾಜ್ 
WhatsApp Group Join Now
Telegram Group Join Now
 ಬಳ್ಳಾರಿ :01. ಪರಿಶಿಷ್ಟ ಜಾತಿಯ 1.40  ಕೋಟಿ ಜನ   ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿರುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಇಲ್ಲಿಯವರೆಗೂ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿರುವುದಿಲ್ಲ ಸೆಪ್ಟಂಬರ್ ಕ್ರಾಂತಿ ಅಕ್ಟೋಬರ್ ಕ್ರಾಂತಿ ಎಂದು ಸಿಎಂ ಬದಲಾವಣೆ ಸಂದರ್ಭ ಬಂದಲ್ಲಿ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕೆಂದು ಚಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಚ್ ಕೆ ಬಸವರಾಜ್ ಕಾಂಗ್ರೆಸ್ ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದರು.
 ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ಧಿ ಗೋಷ್ಠಿಯನ್ನು ನಡಸಿ ಮಾತನಾಡಿ, ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯ ಹುದ್ದೆಯನ್ನು ನೀಡಬಹುದಾಗಿತ್ತು ಆದರೆ ಅವರಿಗೆ ಪಕ್ಷದಲ್ಲಿ ಅತ್ಯಂತ ಉನ್ನತ ಹುದ್ದೆಯಾದರೂ ಅಸಂವಿಧಾನಿಕ ಹುದ್ದೆಯನ್ನು ನೀಡಲಾಗಿದೆ, ಜಿ ಪರಮೇಶ್ವರ್, ಕೆ ಎಚ್ ಮುನಿಯಪ್ಪ, ಎಚ್ ಸಿ ಮಹದೇವಪ್ಪ ಮತ್ತು ಪರಿಶಿಷ್ಟ ಪಂಗಡದ ಸತೀಶ್ ಜಾರಕಿಹೊಳಿ ಇವರುಗಳು  ಅತ್ಯಂತ ಪಕ್ಷ ನಿಷ್ಠೆ ಮತ್ತು ಹಿರಿಯರ ನಾಯಕ ರಾಗಿರುತ್ತಾರೆ . ಇವರನ್ನಾದರೂ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಬೇಕೆಂದು ಅವರು ಆಗ್ರಹಿಸಿದರು.
 ನಾವು ಮುಖ್ಯಮಂತ್ರಿ ಯನ್ನು ಈಗಲೇ ಬದಲಾಯಿಸಿ ಎಂದು ಒತ್ತಡ ಹಾಕುತ್ತಿಲ್ಲ ಬದಲಾವಣೆ ಸಂದರ್ಭ ಬಂದಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಎಂದು ನಮ್ಮ ವಾದ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
 ಈ ವಿಚಾರವಾಗಿ ರಾಜ್ಯದ್ಯಂತ ಮೂರು ತಿಂಗಳ ಕಾಲ ಪ್ರವಾಸ ಮಾಡಿ ದಲಿತ ಮುಖ್ಯಮಂತ್ರಿ ಆಯ್ಕೆಗೆ ದಲಿತ ಜನಾಂಗದಲ್ಲಿ ಜಾಗೃತಿ ಮೂಡಿಸಲಾಗುವುದು ನಂತರ ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರದುರ್ಗ ದಾವಣಗೆರೆ ಅಥವಾ ಬಳ್ಳಾರಿಯಲ್ಲಿ ದಲಿತರ ತಮ್ಮ ರಾಜಕೀಯ  ಹಕ್ಕುಗಳನ್ನು ಪಡೆಯಲು  ರಾಜ್ಯಮಟ್ಟದ ದಲಿತ ಸಮಾವೇಶವನ್ನು ಏರ್ಪಡಿಸಲಾಗುವುದು ಎಂದರು.
 ಇದೇ ಸಂದರ್ಭದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಿದ ಸರ್ಕಾರವನ್ನು ಮತ್ತು ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಹೆಚ್ ಕೆ ಬಸವರಾಜ್ ಅಭಿನಂದಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಸಿ ನರಸಪ್ಪ, ನಿವೃತ್ತ ಪ್ರಾಚಾರ್ಯರಾದ ಸೋಮನಾಥ್, ನಿರಂಜನ ಮೂರ್ತಿ ಸಿ ನಾರಾಯಣಸ್ವಾಮಿ, ಪಾಲಿಕೆ ಸದಸ್ಯ ನಾಗಲಕೆರೆ ಗೋವಿಂದ, ಪ್ರಜಾ ಪರಿವರ್ತನೆ ವೇದಿಕೆಯ ಜಿಲ್ಲಾಧ್ಯಕ್ಷ   ಸಿ ಆನಂದಕುಮಾರ್, ಚಲವಾದಿ ಸೀನ , ಶಂಕರ್,  ಗಾದಿಲಿಂಗಪ್ಪ ಸೇರಿದಂತೆ ಚಲವಾದಿ ಸಮುದಾಯದ ಅನೇಕರಿದ್ದರು.
WhatsApp Group Join Now
Telegram Group Join Now
Share This Article