ಐತಿಹಾಸಿಕ ನೇಸರಗಿ ಜೋಡುಗುಡಿ

Ravi Talawar
ಐತಿಹಾಸಿಕ ನೇಸರಗಿ ಜೋಡುಗುಡಿ
WhatsApp Group Join Now
Telegram Group Join Now

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿರುವ ಐತಿಹಾಸಿಕ ೧೨ ನೇ ಶತಮಾನದ ಜೋಡುಗುಡಿ ಬಸವೇಶ್ವರ ದೇವಸ್ಥಾನ ಐತಿಹಾಸಿಕವಾಗಿ ಸಾಕಷ್ಟು ಖ್ಯಾತಿಯನ್ನು ಪಡೆದಿದೆ.
ಈ ದೇವಾಲಯವು ಎರಡು ದೇವಸ್ಥಾನಗಳಿಂದ ಕೂಡಿರುವದರಿಂದ ಜೋಡುಗುಡಿ ಎಂದು ಕರೆಯಲಾಗುತ್ತದೆ. ೧೨ ನೇ ಶತಮಾನದಲ್ಲಿ ರಟ್ಟರ ನಾಲ್ಕನೇ ಕಾರ್ತವೀರ‍್ಯನು ಈ ದೇವಾಲಯ ಕಟ್ಟಿಸಿದ್ದನು. ಅವನ ಆಡಳಿತಕ್ಕೆ ಆರು ಹಳ್ಳಿಗಳನ್ನೋಳಗೊಂಡ ನೇಸರಗಿಯೂ ಒಳಪಟ್ಟಿತ್ತೆಂದು ಇಲ್ಲಿಯ ಶಾಸನ ತಿಳಿಸುತ್ತದೆ.
ದೇವಾಲಯ ವೈಶಿಷ್ಠ: ಕರಿ ಕಲ್ಲಿನಿಂದ ಕೆತ್ತಿದ ರತ್ನತ್ರಯರು ಈ ದೇವಾಲಯದ ಮುಖ ಮಂಟಪದ ವಿಶೇಷ. ಮಂಟಪ ಚೌಕಾಕಾರದ ಛಾವಣಿ ಹೊಂದಿದೆ. ಒಳಗೆ ಶಿವಲಿಂಗವನ್ನು ಹೊಂದಿದೆ. ಹೊರಾಂಗಣದಲ್ಲಿ ಎರಡು ದೇವಾಲಯಗಳಲ್ಲಿಯೂ ಬಸವಣ್ಣ ಮೂರ್ತಿ ಭಗ್ನಗೊಂಡಿವೆ.
ಇಲ್ಲಿ ಹಳೆಯ ಶಿಲಾಶಾಸನವೊಂದು ಇತ್ತು. ಈ ಶಾಸನದಲ್ಲಿ ಈ ದೇವಾಲಯವನ್ನು ಈಶ್ವರ ಗುಡಿ ಎಂದು ಕರೆಯಲಾಗುತ್ತಿತ್ತು ಎಂದು ಉಲ್ಲೇಖವಿದೆ. ಆದರೆ ಜಿಲ್ಲಾಡಳಿತ ಸಂಶೋಧನೆ ನೆಪದಲ್ಲಿ ೧೯-೧-೨೦೦೭ ರಂದು ಇಲ್ಲಿಂದ ಶಿಲಾಶಾಸನವನ್ನು ತೆಗೆದುಕೊಂಡು ಹೋಗಿದೆ. ಶಿಲಾಶಾಸನವನ್ನು ಎಲ್ಲಿ ತೆಗದುಕೊಂಡು ಹೋಗಿದ್ದಾರೆ ಎಂಬುದು ಇಂದಿಗೂ ನಿಗೂಡವಾಗಿದೆ.
ನಿರ್ಲಕ್ಷ- ಶಿವರಾತ್ರಿ ದಿನಗಳಲ್ಲಿ ಮಾತ್ರ ಇಲ್ಲಿ ಹೆಚ್ಚಿನ ಆಧ್ಯತೆ ನೀಡಿ ಪೂಜೆ ನಡೆಯುತ್ತದೆ. ನಂತರ ದಿನಗಳಲ್ಲಿ ಇದನ್ನು ನಿರ್ಲಕ್ಷಿಸಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ದೇವಸ್ಥಾನದ ಹಿಂದಿನ ಭಾಗದ ಕಲ್ಲು ಕಿತ್ತು ಬಿದ್ದಿದೆ. ದಿನದಿಂದ ದಿನಕ್ಕೆ ಕಲ್ಲುಗಳು ಬಿದ್ದು ಹಾಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಡೀ ದೇವಾಲಯ ಅವಸಾನಗೊಂಡರೂ ಅಚ್ಚರಿಯಿಲ್ಲ.
ಪ್ರಾಚ್ಯ ವಸ್ತು ಇಲಾಖೆ, ಕಿತ್ತೂರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಉತ್ತಮ ಶಿಲ್ಪಕಲೆ ಹೊಂದಿರುವ ದೇವಾಲಯವನ್ನು ಸಂರಕ್ಷಿಸುವ ಕೆಲಸ ನಡೆಯಬೇಕಿದೆ. ಬಾದಾಮಿ, ಐಹೋಳೆ, ಪಟ್ಟದಕಲ್ಲು ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಿದಲ್ಲಿ ಉತ್ತಮ ಪ್ರವಾಸೋದ್ಯಮ ಕೇಂದ್ರವಾಗುವದರಲ್ಲಿ ಸಂಶಯವಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಇತ್ತ ಗಮನ ಹರಿಸುವದು ಒಳಿತು.
ಬಿದ್ದು ಹೋಗುತ್ತಿರುವ ಶಿಲ್ಪಕಲಾಕೃತಿಗಳನ್ನು ಮತ್ತೆ ಒಂದುಗೂಡಿಸಿ ದೇವಾಲಯ ಪುನರ್ ನಿರ್ಮಿಸಿ ಜೋಡುಗುಡಿಯ ಪ್ರಾಚೀನ ಗತವೈಭವನ್ನು ಮತ್ತೆ ಮರುಕಳಿಸುವ ಕಾರ್ಯವನ್ನು ಸರಕಾರ ಮುಂದಾಗಿ ಮಾಡಬೇಕಿದೆ. ಗ್ರಾ.ಪಂ, ಸಂಘ, ಸಂಸ್ಥೆಗಳು ಕೈಜೋಡಿಸುವ ಅಗತ್ಯವಿದೆ.
ಅನಿಸಿಕೆ-
ಹಳೆಯ ಪ್ರಾಚೀನ ಕಾಲದ ಜೋಡುಗುಡಿ ಶಿಥಿಲಾವಸ್ಥೆ ತಲುಪಿದೆ. ಅದನ್ನು ಮರು ಪ್ರತಿಷ್ಠಾಪಿಸುವ ಅಗತ್ಯವಿದೆ. ಜಿಲ್ಲಾಡಳಿತ, ಪ್ರಾಚ್ಯವಸ್ತು ಇಲಾಖೆ ಇತ್ತ ಗಮನ ಹರಿಸಿ ಅಭಿವೃದ್ಧಿಪಡಿಸಿದಲ್ಲಿ ಪ್ರವಾಸಿ ತಾಣವಾಗುವದರಲ್ಲಿ ಸಂದೇಹವಿಲ್ಲ.
ಡಾ.ಚನಗೌಡ ಪಾಟೀಲ, ನಾಗರಿಕ ನೇಸರಗಿ
ಪೋಟೊ ಶೀರ್ಷಿಕೆ-
ನೇಸರಗಿಯಲ್ಲಿರುವ ಐತಿಹಾಸಿಕ ಜೋಡುಗುಡಿಯ ನೋಟ
ಲೇಖನ-
ಸಿ.ವಾಯ್.ಮೆಣಶಿನಕಾಯಿ
ಸಾಹಿತಿಗಳು, ಕವಿಗಳು
ಅಂಚೆ- ನೇಸರಗಿ-೫೯೧೧೨೧
ತಾ- ಬೈಲಹೊಂಗಲ ಜಿಲ್ಲೆ- ಬೆಳಗಾವಿ
ಮೊ-೭೭೯೫೭೩೦೭೩೯, ೮೦೫೦೧೬೮೫೦೪

WhatsApp Group Join Now
Telegram Group Join Now
Share This Article