ಮಹಾಲಿಂಗಪುರ: ಡಿಜಿಟಲ್ ಯುಗದಲ್ಲಿ ಹಿಂದಿ ಭಾ? ಬಳಕೆ ಹೆಚ್ಚಾಗುತ್ತಿದ್ದು, ಯಾವ ಭಾಷೆಗೂ ಹಿಂದೆ ಬಿದ್ದಿಲ್ಲ ವಿಶ್ವದ ಇನ್ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಪ್ರಮುಖ ಭಾ?ಯಾಗಿ ಬಳಕೆಯಾಗುತ್ತಿದೆ ಎಂದು ವಿಜಯಪುರದ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗುಲಾಬ ರಾಠೊಡ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾ ವಿದ್ಯಾಲಂi ಹಿಂದಿ ವಿಭಾಗದ ವತಿಯಿಂದ ’ಡಿಜಿಟಲ್ ಯುಗದಲ್ಲಿ ಹಿಂದಿ ಶಿಕ್ಷಣ ದ ಹೊಸ ಪ್ರಯೋಗ’ ಎಂಬ ವಿ?ಯ ಕುರಿತ ವಿಶೇ? ಉಪನ್ಯಾಸದಲ್ಲಿ ಹೇಳಿದರು.
ಹಿಂದಿ ವಿಭಾಗ ಮುಖ್ಯಸ್ಥ ಪ್ರಶಾಂತ್ ಗೌಳಿ ಮಾತನಾಡಿ, ಹಿಂದಿ ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಮೂರನೇ ಭಾ?ಯಾಗಿದ್ದು ಭಾ?ಯಲ್ಲಿ ಸಂಶೋಧನೆಗಳು ಹೆಚ್ಚಾಗುತ್ತಿವೆ. ಹಿಂದಿ ಭಾರತದಲ್ಲಿ ರಾಜ ಭಾ? ಸ್ಥಾನ ಪಡೆದಿದೆ ಎಂದರು.
ಪ್ರಭಾರಿ ಪ್ರಾಚಾರ್ಯ ಡಾ. ಸುನಂದಾ ಸೊರಗಾವಿ ಅಧ್ಯಕ್ಷತೆ ವಹಿಸಿ ಹಿಂದಿ ಸುಂದರ, ಸರಳ, ಅರ್ಥವಾಗುವ ಭಾ?ಯಾಗಿದ್ದು, ಬೇರೆಯವರೊಂದಿಗೆ ವ್ಯವಹರಿಸುತ್ತಾ ಅದನ್ನು ನಾವು ಕಲಿಯಬೇಕು, ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಇ-ಬುಕ್, ಇ-ಕಾಮರ್ಸ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜ್ಞಾನಾರ್ಜನೆ ಮಾಡಬೇಕೆಂದರು.
ಪ್ರಾಧ್ಯಾಪಕರಾದ ಆರ್.ವಿ.ಚೌಗಲಾ, ಎಸ್.ಸಿ. ಬಿಜ್ಜರಗಿ, ಟಿ. ಡಿ.ಡಂಗಿ, ಎಸ್. ಎಸ್. ಮುಗಳ್ಯಾಳ, ವಿದ್ಯಾರ್ಥಿಗಳಾದ ಸಿಮ್ರನ್ ಜಮಾದಾರ, ತಸ್ಲೀಮ ಭಾಗವಾನ, ಕಾವೇರಿ ಮಾಕಾಳೆ ಮತ್ತಿತರರು ಇದ್ದರು.
ಫೋಟೊ: ೨೬ ಎಂಎಲ್‌ಪಿ ೩
ಮಹಾಲಿಂಗಪುರದ ಕೆಎಲ್‌ಇ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗದ ವಿಶೇ? ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಾಂತ ಗೌಳಿ ಮಾತನಾಡಿದರು.
“ಡಿಜಿಟಲ್ ಯುಗದಲ್ಲಿ ಹಿಂದಿ ಭಾಷೆ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ”


