ನವದೆಹಲಿ: ಜಗತ್ತಿನ ಪ್ರಮುಖ ಕಾರ್ಪೊರೇಟರ್ ಗುರಿಯಾಗಿಸಿ ವರದಿ ಮಾಡಿ, ಆರ್ಥಿಕ ತಲ್ಲಣಕ್ಕೆ ಕಾರಣವಾಗಿ ಸದ್ದು ಮಾಡಿದ್ದ ಹಿಂಡನ್ ಬರ್ಗ್ ಸಂಶೋಧನಾ ಘಟಕವನ್ನು ಮುಚ್ಚುವುದಾಗಿ ಅದರ ಸಂಸ್ಥಾಪಕ ನಾಟೆ ಆ್ಯಂಡರ್ಸನ್ ಘೋಷಿಸಿದ್ದಾರೆ.
ಅಮೆರಿಕ ಮೂಲದ ಸಣ್ಣ ಮಾರಾಟ ಘಟಕವಾಗಿರುವ ಹಿಂಡನ್ ಬರ್ಗ್ ಅನ್ನು ವಿಸರ್ಜಿಸಲಾಗುತ್ತಿದ್ದು, ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣ ಇಲ್ಲ. ಯಾವುದೇ ಬೆದರಿಕೆ, ಯಾವುದೇ ಆರೋಗ್ಯ ಸಮಸ್ಯೆ ಮತ್ತು ಯಾವುದೇ ದೊಡ್ಡ ವೈಯಕ್ತಿಕ ಸಮಸ್ಯೆಯೂ ಇಲ್ಲ ಎಂಬುದನ್ನು ಸಂಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.
ಭಾರತ ಸೇರಿದಂತೆ ಜಗತ್ತಿನ ಅನೇಕ ಕಾರ್ಪೊರೇಟ್ ಉದ್ಯೋಗಿಗಳ ಕುರಿತು ಹಿಂಡನ್ ಬರ್ಗ್ ಮಾಡಿದ ವರದಿ ಆರ್ಥಿಕ ಸಂದಿಗ್ಧತೆಗೂ ಕೂಡ ಕಾರಣವಾಗಿತ್ತು.
ಸಂಸ್ಥೆ ಮುಚ್ಚುವ ಕುರಿತು ತಮ್ಮ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿರುವ ಆ್ಯಂಡರ್ಸನ್, ಜಗತ್ತಿನಲ್ಲಿ ಅನೇಕ ವಿಚಾರಗಳನ್ನು ಹಾಗೂ ನಾನು ಕಾಳಜಿ ವಹಿಸುವ ವ್ಯಕ್ತಿಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಜೀವನದಲ್ಲಿ ಹಿಂಡನ್ ಬರ್ಗ್ ಅಧ್ಯಯನದ ಬಗ್ಗೆ ತಿಳಿದಿದೆ. ಆದರೆ, ಕೇಂದ್ರಿಕೃತ ವಿಚಾರಗಳು ಇವುಗಳನ್ನು ವ್ಯಾಖ್ಯಾನಿಸುವುದಿಲ್ಲ ಎಂದಿದ್ದಾರೆ.