ಲಿಂಗ ಪರಿವರ್ತನೆಗೆ ಪರಿಷ್ಕೃತ ಜನನ ಪ್ರಮಾಣ ಪತ್ರ ನೀಡುವ ಕುರಿತು ಹೈಕೋರ್ಟ್‌ ಸೂಚನೆ

Ravi Talawar
ಲಿಂಗ ಪರಿವರ್ತನೆಗೆ ಪರಿಷ್ಕೃತ ಜನನ ಪ್ರಮಾಣ ಪತ್ರ ನೀಡುವ ಕುರಿತು ಹೈಕೋರ್ಟ್‌ ಸೂಚನೆ
WhatsApp Group Join Now
Telegram Group Join Now

ಬೆಂಗಳೂರು: ಪುರುಷನಾಗಿ ಹುಟ್ಟಿ ಲಿಂಗ ಪರಿವರ್ತನೆ ಮಾಡಿಕೊಂಡು ತೃತೀಯ ಲಿಂಗಿಯಾಗಿ ಬದಲಾದ ವ್ಯಕ್ತಿಗೆ ಲಿಂಗ ಮತ್ತು ಹೆಸರು ಬದಲಾವಣೆ ಮಾಡಿ ಪರಿಷ್ಕೃತ ಜನನ ಪ್ರಮಾಣ ಪತ್ರ ವಿತರಣೆ ಮಾಡುವುದಕ್ಕೆ ಕಾನೂನುಗಳ ಅಗತ್ಯ ತಿದ್ದುಪಡಿಗೆ ಸಲಹೆ ನೀಡುವಂತೆ ಕಾನೂನು ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಅಲ್ಲದೆ, ಲಿಂಗ ಪರಿವರ್ತನೆ ಮಾಡಿಕೊಂಡ ವ್ಯಕ್ತಿಯೊಬ್ಬರಿಗೆ ಜನನ ಪ್ರಮಾಣ ಪತ್ರದಲ್ಲಿ ಲಿಂಗ ಮತ್ತು ಹೆಸರನ್ನು ಬದಲಾವಣೆಗೆ ಅವಕಾಶ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಯ ಜನನ – ಮರಣ ನೋಂದಣಾಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.

ಪುರುಷನಾಗಿ ಹುಟ್ಟಿ ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗವನ್ನು ಬದಲಾಯಿಸಿಕೊಂಡು ಮಹಿಳೆಯಾದ ವ್ಯಕ್ತಿಯು ತನ್ನ ಜನನ ಪ್ರಮಾಣಪತ್ರದಲ್ಲಿ ಹೆಸರು ಮತ್ತು ಲಿಂಗವನ್ನು ಬದಲಾಯಿಸಲು ಮಂಗಳೂರು ಮಹಾನಗರ ಪಾಲಿಕೆಯ ಜನನ – ಮರಣ ನೋಂದಣಾಧಿಕಾರಿಗೆ ಸೂಚನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಜನನ ಮತ್ತು ಮರಣ ನೋಂದಣಿ ಕಾಯಿದೆ 1969ಕ್ಕೆ ತಿದ್ದುಪಡಿಗಳನ್ನು ಮಾಡುವವರೆಗೂ ಲಿಂಗವನ್ನು ಬದಲಾಯಿಸಿಕೊಂಡವರಿಗೆ ಪರಿಷ್ಕೃತ ಜನನ – ಮರಣ ಪ್ರಮಾಣಪತ್ರವನ್ನು ವಿತರಣೆ ಮಾಡಬೇಕು ಎಂದು ಪೀಠ ಸೂಚನೆ ನೀಡಿದೆ.

WhatsApp Group Join Now
Telegram Group Join Now
Share This Article