ಹೈಕಮಾಂಡ್‌ ಪವರ್‌ ಶೇರಿಂಗ್‌ ಗೊಂದಲ ಬಗೆಹರಿಸಬೇಕು; ಗೃಹಮಂತ್ರಿ ಪರಮೇಶ್ವರ್‌

Ravi Talawar
ಹೈಕಮಾಂಡ್‌ ಪವರ್‌ ಶೇರಿಂಗ್‌ ಗೊಂದಲ ಬಗೆಹರಿಸಬೇಕು; ಗೃಹಮಂತ್ರಿ ಪರಮೇಶ್ವರ್‌
WhatsApp Group Join Now
Telegram Group Join Now

ಬೆಂಗಳೂರು : ಪವರ್ ಶೇರಿಂಗ್ ಸಂಬಂಧ ಗೊಂದಲವನ್ನು ಬಗೆಹರಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಪವರ್ ಶೇರಿಂಗ್ ಗೊಂದಲ ನಿವಾರಿಸಬೇಕು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹೌದು ಅವರು ಹೇಳಿರುವುದು ಸರಿ ಇದೆ. ಪವರ್ ಶೇರಿಂಗ್ ಬಗ್ಗೆ ಗೊಂದಲವಿದೆ. ಗೊಂದಲ ಬಗೆಹರಿಸಿ ಎಂದಿರುವುದು ಸರಿಯಿದೆ ಎಂದರು.

ಪ್ರತಿನಿತ್ಯ ಮಾಧ್ಯಮಗಳಲ್ಲಿ ಬರುತ್ತಿದೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಅದನ್ನ ಬಗೆಹರಿಸಿ ಅಂದಿರೋದು ಸರಿ ಇದೆ. ಇದನ್ನು ಹೈಕಮಾಂಡ್ ಗಮನಿಸುತ್ತದೆ. ಯಾವಾಗ ಔಷಧಿ ಕೊಡಬೇಕು ಕೊಡ್ತಾರೆ. ನಾನೂ ಗೊಂದಲ ಬಗೆಹರಿಸಿ ಅಂತಾನೇ ಹೇಳ್ತೇನೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article