ಅಳಿದು ಉಳಿದವರು ಹೀರೋ ಅಶು ಬೆದ್ರ ವಫಾ ಹೊಸ ಸಿನೆಮಾ 

Ravi Talawar
ಅಳಿದು ಉಳಿದವರು ಹೀರೋ ಅಶು ಬೆದ್ರ ವಫಾ ಹೊಸ ಸಿನೆಮಾ 
WhatsApp Group Join Now
Telegram Group Join Now
     ‘ಅಳಿದು ಉಳಿದವರು’ ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪರಿಚಿರತರಾದವರು ಅಶು ಬೆದ್ರ ವಫಾ. ಬರೀ ನಾಯಕನಾಗಲ್ಲ ನಿರ್ಮಾಪಕರಾಗಿ ಕನ್ನಡ ಕಿರುತೆರೆ ಹಾಗೂ ಹಿರಿತೆರೆಗೂ ಪರಿಚಿತರು.
     ರಾಧಾ ಕಲ್ಯಾಣ ಸೀರಿಯಲ್ ಜೊತೆ ಅಳಿದು ಉಳಿದವರು ಹಾಗೂ ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ ನಿರ್ಮಿಸಿದ್ದ ಅಶು ಬೆದ್ರ ಈಗ ಮತ್ತೊಂದು ಪ್ರಯತ್ನದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದೆ. ಅಶು ಬೆದ್ರ ವಫಾ ಹೊಸ ಸಿನಿಮಾದ ಮೇಕಿಂಗ್ ನ್ನು ಅವರ ಹುಟ್ಟುಹಬ್ಬ ವಿಶೇಷವಾಗಿ ಅನಾವರಣ ಮಾಡಲಾಗಿದೆ. ಸ್ಪೆಷಲ್ ಝಲಕ್ ಮೂಲಕ ಚಿತ್ರತಂಡ ಶುಭಾಶಯ ಕೋರಿದೆ.
     ಅಂದಹಾಗೇ ಅಶು ಬೆದ್ರ ಹೊಸ ಕನಸಿಗೆ ಪ್ರವೀಣ್ ಕಾಡಶೆಟ್ಟಿ ಸಾಥ್ ಕೊಡುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ನಿರ್ದೇಶಕರಾಗಿ ಆಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಮೇಕಿಂಗ್ ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲೇ ಟೈಟಲ್ ಜೊತೆಗೆ ಉಳಿದ ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ನೀಡಲಿದೆ.
WhatsApp Group Join Now
Telegram Group Join Now
Share This Article