ರಾಯಬಾಗ: ರಾಜ್ಯದ ಕನ್ನಡಿಗರ ಸಮಸ್ಯೆಗಳಿಗೆ ಧ್ವನಿಯಾಗಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಕೆಲಸ ಮಾಡಲಿದೆ ಎಂದು ವಿ.ಕ.ರ.ವೇದಿಕೆ ತಾಲೂಕಾಧ್ಯಕ್ಷ ಸುಧೀರ ಕಾಂಬಳೆ ಹೇಳಿದರು.
ಮಂಗಳವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿ.ಕ.ರ.ವೇದಿಕೆಯ ಯೂಟ್ಯೂಬ್ ಚಾನಲ್ ಹಾಗೂ ಮಹಿಳಾ ಮತ್ತು ಕಾರ್ಮಿಕರ ಸಹಾಯವಾಣಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವೇದಿಕೆಯು ಸದಾ ಜನರ ಜೊತೆಗೆ ಇರಲಿದ್ದು, ಸಾರ್ವಜನಿಕರು ತಮ್ಮ ಖಾಸಗಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ತಮಗೆ ಯಾವುದೇ ಸಮಸ್ಯೆಗಳಿದ್ದರೆ, ವೇದಿಕೆಯ ಸಹಾಯವಾಣಿ ಸಂಖ್ಯೆ 9380991235 ಗೆ ಕರೆ ಮಾಡಿದರೆ ತಮ್ಮ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ರಾಜು ಕಾಂಬಳೆ, ಗೌರವಾಧ್ಯಕ್ಷ ಸುಭಾಷ ನಾಯಿಕ, ಮಂಜು ಕಾಂಬಳೆ, ಸಲೀಂ ಖೋನಮಿರೆ, ಶೋಭರಾಜ ಹೆಗಡೆ, ಅಪ್ಪಣ್ಣ ಗಡ್ಡೆ, ಆಶ್ರಯ ದೇವಮಾನೆ, ಸಚಿವ ಪೂಜಾರಿ, ಕೃಷ್ಣಾ ಗಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಕೋಕಾಟೆ, ಶೈಲಾ ಹಿರೇಮಠ, ರಂಜನಾ ಬಾಗಿ, ಲಕ್ಷ್ಮೀ ತೋಳೆ, ಯಂಕವ್ವ ಹೆಗಡೆ, ಅಂಜನಾ ಕುಡಚೆ, ಕಲಾವತಿ ಪಿ., ಗೌರವ್ವ ದತ್ತವಾಡೆ, ತಸ್ಲಿಮ ಅತ್ತಾರ, ಹನುಮವ್ವ ಬಂತೆ ಸೇರಿ ಅನೇಕರು ಇದ್ದರು.


